Advertisement

ಲಲಿತಕಲಾ ಅಕಾಡೆಮಿ ವಿರುದ್ಧ ಸಿಬಿಐ ತನಿಖೆ?

03:45 AM Mar 02, 2017 | Team Udayavani |

ನವದೆಹಲಿ: ಲಲಿತಕಲಾ ಅಕಾಡೆಮಿ ವಿರುದ್ಧ ಪ್ರಧಾನಿ ಕಾರ್ಯಾಲಯಕ್ಕೆ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಅಕಾಡೆಮಿಯ ಕಾರ್ಯನಿರ್ವಹಣೆ ಕುರಿತು ಸಿಬಿಐ ತನಿಖೆಗೆ ಆದೇಶಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 

Advertisement

ಕಳೆದ ಡಿ.6ರಂದು ನಡೆದ ಸಭೆಯಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯವು ಈ ಬಗ್ಗೆ ಪ್ರಸ್ತಾಪಿಸಿದ್ದು, ಅಕಾಡೆಮಿಯ ಉನ್ನತ ಹುದ್ದೆಯಲ್ಲಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಖ್ಯಾತ ಕಲಾವಿದ ಎಂ.ಎಫ್.ಹುಸೇನ್‌ ಸೇರಿದಂತೆ ಅನೇಕರ ಕಲಾಕೃತಿಗಳು ನಾಪತ್ತೆಯಾಗಿರುವುದು ಸೇರಿದಂತೆ ಅಕಾಡೆಮಿಗೆ ಸಂಬಂಧಿಸಿ ಹಲವು ದೂರುಗಳು ಕೇಳಿಬಂದಿದ್ದವು. ಈ ಪ್ರಕರಣದಲ್ಲಿ ಅಕಾಡೆಮಿ ಕಾರ್ಯದರ್ಶಿ ಸುಧಾಕರ್‌ ಶರ್ಮಾ ಅವರ ಪಾತ್ರವಿರಬಹುದೇ ಎಂಬ ಶಂಕೆಯೂ ವ್ಯಕ್ತವಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಅಕಾಡೆಮಿ ಆಡಳಿತಾಧಿಕಾರಿ ಚಿ.ಸು. ಕೃಷ್ಣಶೆಟ್ಟಿ, “ನಾನು ಅಧಿಕಾರ ಸ್ವೀಕರಿಸಿ 3 ತಿಂಗಳಾಗಿದೆ. ಕಲಾಕೃತಿ ಕಾಣೆಯಾಗಿರುವ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಇದು 20 ವರ್ಷಗಳ ಹಿಂದಿನ ಪ್ರಕರಣ’ ಎಂದು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next