ಬೆಂಗಳೂರು: ನಗರದ ಗಂಗಾನಗರದ ಸಿಬಿಐ ಕಚೇರಿಯ ಎದುರೇ ಸಿಬಿಐ ಅಧಿಕಾರಿಣಿಯೊಬ್ಬರ ಕಾರಿನ ಗಾಜು ಒಡೆದು ಬ್ಯಾಗ್ ಕಳವು ಮಾಡಿರುವ ಘಟನೆ ಜನವರಿ 26 ರ ಗಣರಾಜ್ಯೋತ್ಸವದಂದು ನಡೆದಿದ್ದು,ತಡವಾಗಿ ಬೆಳಕಿಗೆ ಬಂದಿದೆ.
Advertisement
ಬೆಳಗ್ಗೆ ಕಚೇರಿಗೆ ಆಗಮಿಸಿದ ಚೈತ್ರಾ ಅವರು ಕಾರು ನಿಲ್ಲಿಸಿ ಧ್ವಜಾರೋಹಣಕ್ಕಾಗಿ ಕಚೇರಿಗೆ ತೆರಳಿದ್ದರು. ಈ ವೇಳೆ ಖತರ್ನಾಕ್ ಕಳ್ಳರು ಕಾರಿನ ಗಾಜು ಒಡೆದು ಬ್ಯಾಗ್ ಕದ್ದು ಪರಾರಿಯಾಗಿದ್ದಾರೆ.
ಬ್ಯಾಗ್‌ನಲ್ಲಿ ಕ್ರೆಡಿಟ್ ಕಾರ್ಡ್,ಡೆಬಿಟ್ ಕಾರ್ಡ್ ಮತ್ತು ಐಡೆಂಟಿಟಿ ಕಾರ್ಡ್ ಇದ್ದವು ಎಂದು ತಿಳಿದು ಬಂದಿದೆ.
ಸಂಜಯನಗರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.