Advertisement

ಮೆಹುಲ್‌ ಚೋಸ್ಕಿ ವಿರುದ್ಧ ಹೊಸ ಕೇಸು ದಾಖಲಿಸಿದ ಸಿಬಿಐ

08:57 PM May 02, 2022 | Team Udayavani |

ನವದೆಹಲಿ:ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 13,500 ಕೋಟಿ ರೂ. ವಂಚಿಸಿ ಪರಾರಿಯಾಗಿರುವ ಮೆಹೂಲ್‌ ಚೋಸ್ಕಿ ವಿರುದ್ಧ ಸಿಬಿಐ ಹೊಸ ಕೇಸು ದಾಖಲಿಸಿದೆ.

Advertisement

ಪ್ರಯೋಗಶಾಲೆಯಲ್ಲಿ ಸಿದ್ಧಪಡಿಸಿದ ನಕಲಿ ವಜ್ರಗಳನ್ನು ಅಸಲಿ ಎಂದು ಬಿಂಬಿಸಿದ್ದು ಮಾತ್ರವಲ್ಲದೆ, ಇಂಡಸ್ಟ್ರಿಯಲ್‌ ಫೈನಾನ್ಸ್‌ ಕಾರ್ಪೊರೇಷನ್‌ ಆಫ್ ಇಂಡಿಯಾದಿಂದ 25 ಕೋಟಿ ರೂ. ಸಾಲ ಪಡೆದಿದ್ದರು ಎಂಬ ಹೊಸ ಆರೋಪವನ್ನು ಸಿಬಿಐ ಸೋಮವಾರ ಹೊರಿಸಿದೆ.

ಇದನ್ನೂ ಓದಿ:ಬಸವಣ್ಣನ ಫೋಟೋ ಪೂಜಿಸಿದರೆ ಸಾಲದು ಆದರ್ಶ ಪಾಲಿಸಬೇಕು: ಸಿದ್ದರಾಮಯ್ಯ

ಜತೆಗೆ ಆತನ ಕಂಪನಿ ಗೀತಾಂಜಲಿ ಜೆಮ್ಸ್‌, ಮೌಲ್ಯಮಾಪಕ ಸೂರಜ್‌ಮಲ್‌ ಲಾಲೂ ಭಾಯ್‌ ಮತ್ತು ಕಂಪನಿ ಸೇರಿದಂತೆ ಇತರ ಮೂವರ ವಿರುದ್ಧವೂ ಕೇಸು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next