Advertisement

ಕೊಚರ್‌ ದಂಪತಿ ಸಿಬಿಐ ಕಸ್ಟಡಿ 29ರ ವರೆಗೆ ವಿಸ್ತರಣೆ

10:09 PM Dec 28, 2022 | Team Udayavani |

ಮುಂಬೈ: ಐಸಿಐಸಿಐ ಬ್ಯಾಂಕ್‌ಗೆ ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಸಿಇಒ ಚಂದಾ ಕೊಚರ್‌, ಅವರ ಪತಿ ದೀಪಕ್‌ ಕೊಚರ್‌ ಅವರ ಸಿಬಿಐ ಕಸ್ಟಡಿ ಅವಧಿ ಡಿ.29ರ ವರೆಗೆ ವಿಸ್ತರಿಸಲಾಗಿದೆ.

Advertisement

ಮುಂಬೈನಲ್ಲಿರುವ ಸಿಬಿಐನ ವಿಶೇಷ ಕೋರ್ಟ್‌ ಮುಂದೆ ಅವರಿಬ್ಬರನ್ನು ಬುಧವಾರ ಹಾಜರುಪಡಿಸಲಾಯಿತು. ಕೇಂದ್ರ ತನಿಖಾ ಸಂಸ್ಥೆಯ ಪರವಾಗಿ ವಾದಿಸಿದ ಎ.ಲಿಮೋಸಿನ್‌ ಇನ್ನೂ ಬಂಧಿತರನ್ನು ಇನ್ನೂ ಎರಡು ದಿನಗಳ ಕಾಲ ಸಂಸ್ಥೆಯ ವಶಕ್ಕೆ ಒಪ್ಪಿಸಿ ಆದೇಶ ನೀಡಬೇಕು.

ಜತೆಗೆ ಈಗಾಗಲೇ ವಶಪಡಿಸಿಕೊಳ್ಳಲಾಗಿರುವ ದಾಖಲೆಗಳ ಆಧಾರದ ಮೇಲೆ ಚಾಂದಾ ಕೊಚರ್‌ ಮತ್ತು ದೀಪಕ್‌ ಕೊಚರ್‌ ಅವರಿಂದ ಮತ್ತಷ್ಟು ಮಾಹಿತಿ ಪಡೆಯಬೇಕು ಎಂದು ಲಿಮೋಸಿನ್‌ ವಿಶೇಷ ಕೋರ್ಟ್‌ ನ್ಯಾಯಾಧೀಶರಿಗೆ ಅರಿಕೆ ಮಾಡಿಕೊಂಡರು.

ಆದರೆ, ತನಿಖಾ ಸಂಸ್ಥೆಯ ಕೋರಿಕೆಗೆ ಕೊಚ್ಚರ್‌ ದಂಪತಿ ಪರ ವಕೀಲರು ಆಕ್ಷೇಪ ಮಾಡಿದ್ದಾರೆ. ಒಟ್ಟಾರೆ ಬಂಧನ ಪ್ರಕ್ರಿಯೆಯೇ ಕಾನೂನು ಬಾಹಿರ ಎಂದು ಅವರು ವಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next