Advertisement

ಮೇವು ಹಗರಣ: ಇಂದು ಲಾಲು ಹಣೆಬರಹ; ಕ್ಲೀನ್‌ ಚಿಟ್‌ ಭರವಸೆ

12:00 PM Dec 23, 2017 | Team Udayavani |

ರಾಂಚಿ : ದೇವಗಢ ಸರಕಾರಿ ತಿಜೋರಿಯಿಂದ 1991 ಮತ್ತು 1994ರ ನಡುವಿನ ಅವಧಿಯಲ್ಲಿ 95 ಲಕ್ಷ ರೂ.ಗಳಿಗೂ ಹೆಚ್ಚು ಮೊತ್ತವನ್ನು ಅಕ್ರಮವಾಗಿ ಪಡದುಕೊಂಡ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌, ಜಗನ್ನಾಥ ಮಿಶ್ರಾ ಹಾಗೂ ಇತರ 20 ಮಂದಿಯ ಹಣೆ ಬರಹವನ್ನು ವಿಶೇಷ ಸಿಬಿಐ ಕೋರ್ಟ್‌ ಇಂದು ಶನಿವಾರ ತೀರ್ಮಾನಿಸಲಿದೆ.

Advertisement

ಲಾಲು ಅವರು ತನ್ನ ಕಿರಿಯ ಪುತ್ರ ತೇಜಸ್ವಿ ಯಾದವ್‌ ಜತೆಗೂಡಿ ಇಂದು ಬೆಳಗ್ಗೆ ಇಲ್ಲಿನ ವಿಶೇಷ ಸಿಬಿಐ ಕೋರ್ಟ್‌ ನ್ಯಾಯಾಧೀಶ ಶಿವ ಪಾಲ್‌ ಸಿಂಗ್‌ ಅವರ ಮುಂದೆ ಹಾಜರಾಗಿದ್ದಾರೆ.

ನಿನ್ನೆ ಶುಕ್ರವಾರವಷ್ಟೇ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರು “ನ್ಯಾಯಾಂಗದಲ್ಲಿ  ನನಗೆ ವಿಶ್ವಾಸವಿದೆ; ನನಗೂ ಮೇವು ಹಗರಣದಲ್ಲಿ ಕ್ಲೀನ್‌ ಚಿಟ್‌ ಸಿಗಬಹುದು’ ಎಂದು ಹೇಳಿದ್ದರು. 

“ನಾವು ನ್ಯಾಯಾಂಗದಲ್ಲಿ ನಂಬಿಕೆ ಮತ್ತು ಗೌರವನ್ನು ಇಟ್ಟಿದ್ದೇವೆ. ಬಿಜೆಪಿಯ ಪಿತೂರಿ ನಡೆಯಲು ನಾವು ಬಿಡೆವು’ ಎಂದು ಲಾಲು ಪ್ರಸಾದ್‌ ಯಾದವ್‌ ಹೇಳಿದ್ದಾರೆ.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಕಾಲದಿಂದಲೂ, ಅಂದರೆ ಕಳೆದ 25 ವರ್ಷಗಳಿಂದಲೂ, ಬಿಜೆಪಿ ನನ್ನ ಮತ್ತು ನನ್ನ ಕುಟುಂಬದವರು ವಿರುದ್ಧ ಸಿಬಿಐ ಅಸ್ತ್ರವನ್ನು ದುರ್ಬಳಕೆ ಮಾಡಿ ಕಿರುಕುಳ ನೀಡುತ್ತಾ ಬಂದಿದೆ ಎಂದು ಲಾಲು ಹೇಳಿದ್ದಾರೆ.

Advertisement

ದೇವಗಢ ತಿಜೋರಿಯಿಂದ 95 ಲಕ್ಷ ರೂ.ಗಳನ್ನು ಅಕ್ರಮವಾಗಿ ಪಡೆದುಕೊಂಡದ್ದು ಮಾತ್ರವಲ್ಲದೆ ಲಾಲು ಅವರು ಎರಡು ದಶಕಗಳ ಕಾಲ ಚಾಯ್‌ಬಾಸಾ ತಿಜೋರಿಯಿಂದ 900 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಹಣವನ್ನು ಲಪಟಾಯಿಸಿರುವ ಆರೋಪಕ್ಕೆ ಗುರಿಯಾಗಿದ್ದಾರೆ. 

ಐದು ಮೇವು ಹಗರಣ ಕೇಸುಗಳ ಪೈಕಿ ಒಂದರಲ್ಲಿ ಲಾಲು ಈಗಾಗಲೇ ಅಪರಾಧಿ ಎಂದು ಘೋಷಿಸಲ್ಪಟ್ಟು ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿ ಸದ್ಯ ಬೇಲ್‌ನಲ್ಲಿ ಹೊರಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next