Advertisement

ಅಸ್ಸಾಂ ಸರಣಿ ಸ್ಫೋಟ ಕೇಸ್; ರಂಜನ್ ಸೇರಿ 15 ಮಂದಿ ದೋಷಿಗಳು

05:58 PM Apr 13, 2020 | Team Udayavani |

ಗುವಾಹಟಿ: 2008ರಲ್ಲಿ ಅಸ್ಸಾಂನಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಎನ್ ಡಿಎಫ್ ಬಿ(ನ್ಯಾಷನಲ್ ಡೆಮೋಕ್ರಟಿಕ್ ಫ್ರಂಟ್ ಆಫ್ ಬೋಡೋ ಲ್ಯಾಂಡ್) ನ ಮುಖ್ಯಸ್ಥ ರಂಜನ್ ಡೈಮಾರಿ ಸೇರಿದಂತೆ 15 ಮಂದಿ ದೋಷಿ ಎಂದು ತೀರ್ಪು ನೀಡಿದೆ.

Advertisement

2008ರಲ್ಲಿ ನಡೆದಿದ್ದ ಸರಣಿ ಸ್ಫೋಟದಲ್ಲಿ 88 ಮಂದಿ ಸಾವನ್ನಪ್ಪಿದ್ದರು. ಪ್ರಕರಣದ ಬಗ್ಗೆ ವಾದ, ಪ್ರತಿವಾದ ಆಲಿಸಿದ್ದ ಸಿಬಿಐ ವಿಶೇಷ ನ್ಯಾಯಾಧೀಶರಾದ ಅಪರೇಶ್ ಚಕ್ರವರ್ತಿ ಡೈಮಾರಿ ಹಾಗೂ ಇತರೆ 14 ಮಂದಿ ತಪ್ಪಿತಸ್ಥರು ಎಂದು ಆದೇಶ ನೀಡಿದ್ದು, ಶಿಕ್ಷೆಯ ಪ್ರಮಾಣ ಬುಧವಾರ ಘೋಷಿಸುವುದಾಗಿ ತೀರ್ಪಿನಲ್ಲಿ ತಿಳಿಸಿದ್ದಾರೆ.

ಪ್ರಕರಣದಲ್ಲಿ ಡೈಮಾರಿ, ಜಾರ್ಜ್ ಬೋಡೋ, ಬಿ ಥಾರೈ, ರಾಜು ಸರ್ಕಾರ್, ನಿಲೀಮ್ ಡೈಮಾರಿ, ಅನ್ಚಾಯ್ ಬೋಡೋ, ಇಂದ್ರ ಬ್ರಹ್ಮ, ಲೋಕೋ ಬಾಸುಮಾತ್ರೈ, ಖರ್ಗೆಸ್ವರ್ ಬಾಸುಮಾತ್ರೈ, ಪ್ರಭಾತ್ ಬೋಡೋ, ಜಯಂತಾ ಬೋಡೋ, ಅಜಯ್ ಬಾಸುಮಾತ್ರೈ, ಮ್ರಿದುಲ್ ಗೋಯಾರೈ, ಮಥುರಂ ಬ್ರಹ್ಮ ಮತ್ತು ರಾಜೆನ್ ಗೋಯಾರೈ ಅಪರಾಧಿಗಳು ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next