Advertisement

Politics: ಡಿಕೆಶಿ ಆಸ್ತಿಯ ಸಿಬಿಐ ಕೇಸ್‌ ; ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಮಾನ

10:20 AM Nov 24, 2023 | Team Udayavani |

ಶಿವಮೊಗ್ಗ: ಸಚಿವ ಸಂಪುಟ ಅವಸರವಾಗಿ ಸಭೆ ಕರೆದು‌ ತೀರ್ಮಾನ ಮಾಡಿದೆ, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಮಾನ. ಕಳ್ಳ ಎಂದಿಗೂ ಕಳ್ಳನೇ ಎಂದು ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ.

Advertisement

ಡಿಕೆಶಿ ಆಸ್ತಿಯ ಸಿಬಿಐ ಕೇಸು ವಿಚಾರವಾಗಿ ಅವರು ಶಿವಮೊಗ್ಗದಲ್ಲಿ ಮಾತನಾಡಿ, 136 ಜನರ ಬೆಂಬಲದ ಮೇಲೆ ಮಾಡಬಾರದನೆಲ್ಲಾ ಮಾಡುತ್ತಿದ್ದಾರೆ. 23 ಕೋಟಿ ಇದ್ದದ್ದು, 163 ಕೋಟಿಯಾಗಿದೆ. ಎಲ್ಲಾ ನ್ಯಾಯಾಲಯದಲ್ಲಿ ಅವರು ಹಾಕಿದ್ದ ಅಪೀಲು ಬಿದ್ದಿತ್ತು. 5 ವರ್ಷದಲ್ಲಿ 250 ಕೋಟಿ ಜಾಸ್ತಿಯಾಗಿದ್ದ ಸಿಬಿಐ ವರದಿಯಲ್ಲೇ ಇದೆ ಎಂದರು.

ಚಾಲೀಸ್ ಚೋರ್ ಎಂಬ ಗಾದೆ ಮಾತಿದೆ. ಅದರಂತೆ, ಕೇಡಿ ಸಿದ್ಧು ಅವರ ಸಂಪುಟ ಕಳ್ಳರ ಗುಂಪಾಗಿದೆ. ಕೇಡಿ ಸಿದ್ಧು ಹಾಗೂ ಅವರ ಕಳ್ಳರ ಗುಂಪು ಈ ಕೇಸು ವಾಪಾಸ್ ಪಡೆದಿದೆ. ಜಾರ್ಜ್ ವಿಚಾರದಲ್ಲಿ ಅವರು ರಾಜಿನಾಮೆ ನೀಡಿ ತನಿಖೆ ಬಳಿಕ ಅವರು ಮತ್ತೆ ಸಂಪುಟಕ್ಕೆ ವಾಪಾಸ್ ಬಂದಿದ್ರು ಎಂದು ಹೇಳಿದರು.

ಅನುಮತಿ ನೀಡುವ ಅಧಿಕಾರ ಇದೆ ಎಂದು ವಾಪಸು ಪಡೆಯುವ ಅಧಿಕಾರ ಅವರಿಗಿಲ್ಲ. ಇದನ್ನು ಸ್ಪೀಕರ್ ಹಾಗೂ ಸುಪ್ರೀಂ ಕೋರ್ಟ್ ವಕೀಲರು ಹೇಳಿದ್ದಾರೆ. ಅವರ ಸಚಿವ ಸಂಪುಟದಲ್ಲಿ ಕಾನೂನು ತಜ್ಞ ಇಲ್ವಾ ಎಂದು ಪ್ರಶ್ನಿಸಿದರು.

ಅವರಿಗೆಲ್ಲರೂ ಸಚಿವ ಸಂಪುಟ ಸಭೆಗೆ ಬಾರದೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇಡೀ ದೇಶದಲ್ಲಿ ಇದೆ ಮೊದಲು ಸಚಿವ ಸಂಪುಟದಲ್ಲಿ ಈ ರೀತಿಯಾಗಿದೆ ಎಂದ ಅವರು, ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರು ಅದೇಗೆ ಸುಮ್ಮನಿದ್ದಾರೋ ಗೊತ್ತಿಲ್ಲ ಎಂದರು.

Advertisement

ಮುಖ್ಯಮಂತ್ರಿ ಪದವಿ ಉಳಿಸಿಕೊಳ್ಳುವ ಒಂದೇ ಸಲುವಾಗಿ ಈ ಕೇಸು ವಾಪಾಸ್ ಗೆ ಸಹಿ‌ ಹಾಕಿದ್ದಾರೆ. ಇವರು ಎಲ್ಲಾ ಕೋರ್ಟ್ ನಲ್ಲೂ ಹೋಗಿ ಬಂದಿದ್ದಾರೆ. ಅಲ್ಲೆಲ್ಲಾ ಈ ಕೇಸು ತಿರಸ್ಕಾರವಾಗಿತ್ತು ಎಂದು ಹೇಳಿದರು.

5 ವರ್ಷದ ಕೆಳಗೆ 33 ಕೋಟಿ ಇದ್ದದ್ದು 2018 ರಲ್ಲಿ 162.53 ಕೋಟಿಯಾಗಿದೆ. ಇಷ್ಟೆಲ್ಲಾ ಆಗಲು ಹೇಗೆ ಸಾಧ್ಯ. ಬೀರು ತುಂಬಾ ದುಡ್ಡು ಸಿಕ್ಕಿದ್ದು ಇಡೀ ದೇಶ ನೋಡಿದೆ. ಈ ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಯಾಗಬೇಕು ಎಂದ ಅವರು, ಇವರು ಬಡ ಜನರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಲೂಟಿ ಕೋರನಿಗೆ ರಕ್ಷಣೆ ಮಾಡಲು ಹೋಗಿದ್ದು ಇಡೀ ದೇಶದಲ್ಲೇ ಮೊದಲು ದೂರಿದರು.

ಕ್ಯಾಬಿನೆಟ್ ನಲ್ಲಿ ಈ ರೀತಿ ವಾಪಾಸ್ ಪಡೆದಿರುವುದು ಸಂವಿಧಾನಕ್ಕೆ ಬೆಲೆ ಇಲ್ಲದಂತಾಗಿದೆ. ಮುಖ್ಯಮಂತ್ರಿ ಸ್ವಚ್ಛ, ಸಂವಿಧಾನ ತಜ್ಞ ಎಂದು ಕರೆಸಿಕೊಳ್ಳುತ್ತಾರೆ ಆದರೆ, ದೇಶದಲ್ಲಿ ಗೂಂಡಾಗಳಿಗೆ, ಲೂಟಿಕೋರರಿಗೆ, ಕಳ್ಳರಿಗೆ ಬೆಂಬಲ ನೀಡುತ್ತಿದೆ. ಸಿಬಿಐ ತನಿಖೆ ಅಂತಿಮ ಹಂತದಲ್ಲಿರುವಾಗ ಈ ರೀತಿ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿ, ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡುವುದರ ಬಗ್ಗೆ ನಮ್ಮ ರಾಜ್ಯಾಧ್ಯಕ್ಷರು, ಶಾಸಕಾಂಗ ಸಭೆ ತೀರ್ಮಾನಿಸುತ್ತದೆ ಎಂದರು.

ಮುಂದುವರೆದು, ಜಾತಿಗಣತಿ ವರದಿ ವಿಚಾರವಾಗಿ ಮಾತನಾಡಿ, ಜಾತಿ ಜನಗಣತಿ ವಿಚಾರದಲ್ಲಿ ಸಿದ್ಧರಾಮಯ್ಯ 9 ವರ್ಷದ ಕೆಳಗೆ ಒಂದು ವಾರದಲ್ಲಿ ವರದಿ ಬಿಡುಗಡೆ ಮಾಡ್ತಿನಿ ಎಂದಿದ್ದರು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಬಿಡುಗಡೆ ಮಾಡಿಲ್ಲ ಎಂದು ಹೇಳಿದರು.

ಎಲ್ಲಾ ಜಾತಿಗಳ ಮಧ್ಯೆ ಸಂಘರ್ಷ ತಂದಿಟ್ಟಿದ್ದಾರೆ. ಜಾತಿಗಳ ನಡುವಿನ‌ ಸಂಘರ್ಷಕ್ಕೆ ಸಿದ್ಧರಾಮಯ್ಯನವರೇ ನೇರ ಕಾರಣ. ಮೂಲ ಪ್ರತಿ ನಾಪತ್ತೆಯಾಗಿದೆ ಎಂದು ಹೇಳಿರುವುದೇ ಹಾಸ್ಯಾಸ್ಪದ ಎಂದ ಅವರು ಮೂಲ ಪ್ರತಿಯನ್ನು ಬಿಡುಗಡೆ ಮಾಡುವರೆಗೂ ಜಯಪ್ರಕಾಶ್ ಅರಿಗೆ ಕೆಳಗಿಳಿಸಲ್ಲ ಎಂದಿದ್ದಾರೆ ಎಂದರು.

ಇದಕ್ಕೆ ಸಿದ್ಧರಾಮಯ್ಯ ರಾಜ್ಯದ ಜನರ ಕ್ಷಮೆ ಕೋರಬೇಕು. ರಾಜಕೀಯ ಅಸ್ತಿತ್ವಕ್ಕೆ ಟೀಕೆ ಸರಿಯಲ್ಲ ಎಂದಿದ್ದಾರೆ. ನಿಮ್ಮದೇ ಅಸ್ತಿತ್ವಕ್ಕೆ ಈ ರೀತಿ ಮಾಡುತ್ತಿದ್ದಿರಾ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next