Advertisement

ಬ್ಯಾಂಕ್ ವಂಚನೆ ಪ್ರಕರಣ; ಲಂಚ ಪಡೆಯುತ್ತಿದ್ದ ಸಿಬಿಐ ಅಧಿಕಾರಿಗಳೇ ಸಿಬಿಐ ಬಲೆಗೆ!

12:49 PM Jan 15, 2021 | Team Udayavani |

ನವದೆಹಲಿ:ಅಪರಾಧ, ಹಣಕಾಸು ವರ್ಗಾವಣೆ ಸೇರಿದಂತೆ ಹೈಪ್ರೊಫೈಲ್ ಪ್ರಕರಣಗಳ ತನಿಖೆ ನಡೆಸುವ ಸಿಬಿಐ ಅಧಿಕಾರಿಗಳೇ ಇದೀಗ ಸುದ್ದಿಗೆ ಗ್ರಾಸವಾಗಿದ್ದು, ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಲಂಚ ಸ್ವೀಕರಿಸುತ್ತಿದ್ದ ಸಿಬಿಐ ಅಧಿಕಾರಿಗಳೇ ಸಿಬಿಐ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.

Advertisement

ಗಾಜಿಯಾಬಾದ್ ಸಿಬಿಐ ಕೇಂದ್ರ ಮೇಲೆ ಸಿಬಿಐ ಅಧಿಕಾರಿಗಳು ಗುರುವಾರ(ಜನವರಿ 15, 2021) ದಾಳಿ ನಡೆಸಿದ್ದು, ಡಿಎಸ್ ಪಿ ಶ್ರೇಣಿಯ ಅಧಿಕಾರಿ ಆರ್ ಕೆ ರಿಷಿ ಸೇರಿದಂತೆ ನಾಲ್ವರು ಅಧಿಕಾರಿಗಳ ವಿರುದ್ಧ ಸಿಬಿಐ ದೂರನ್ನು ದಾಖಲಿಸಿಕೊಂಡಿದೆ.

ಇನ್ನುಳಿದಂತೆ ಸಿಬಿಐನ ಬಿಎಸ್ ಎಫ್ ಸಿ (ಬ್ಯಾಂಕಿಂಗ್ ಸೆಕ್ಯುರಿಟಿ ಆ್ಯಂಡ್ ಫ್ರಾಡ್ ಸೆಲ್)ನ ಇಬ್ಬರು ಅಧಿಕಾರಿಗಳಾದ ಕಪಿಲ್ ಧನ್ಕಾಡ್, ಸ್ಟೆನೋ ಸಮೀರ್ ಕುಮಾರ್ ಸಿಂಗ್ ಹಾಗೂ ಡಿಎಸ್ಪಿ ಆರ್ ಕೆ ಸಾಂಗ್ವಾನ್ ಸಿಬಿಐ ದಾಳಿಯಲ್ಲಿ ಸಿಕ್ಕಿಬಿದ್ದಿರುವುದಾಗಿ ವರದಿ ತಿಳಿಸಿದೆ.

ಇದನ್ನೂ ಓದಿ:ಅರುಣ್ ಸಿಂಗ್ ಭೇಟಿಯಾದ ರೇಣುಕಾಚಾರ್ಯ: ಯೋಗೇಶ್ವರ್ ವಿರುದ್ಧ ದೂರು

ಬ್ಯಾಂಕ್ ವಂಚನೆ ಪ್ರಕರಣದಲ್ಲಿ ನೆರವು ನೀಡಲು ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಆರೋಪದಡಿ ತನ್ನದೇ ಅಧಿಕಾರಿಗಳ ವಿರುದ್ಧ ಸಿಬಿಐ ದೂರು ದಾಖಲಿಸಿಕೊಂಡಿದೆ. ಅಷ್ಟೇ ಅಲ್ಲ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ತನಿಖೆಯಲ್ಲಿ ಕೆಲವು ವಕೀಲರು ಮತ್ತು ಅಪರಿಚಿತ ವ್ಯಕ್ತಿಗಳು ಹೊಂದಾಣಿಕೆ ಮಾಡಿಕೊಂಡಿರುವುದಾಗಿಯೂ ಸಿಬಿಐ ಆರೋಪಿಸಿದೆ.

Advertisement

ಲಂಚ ಪಡೆಯುವ ಕುರಿತು ಖಚಿತ ಮಾಹಿತಿ ಪಡೆದಿದ್ದ ಸಿಬಿಐ ಅಧಿಕಾರಿಗಳು ತಮ್ಮದೇ ಏಜೆನ್ಸಿಯ ಅಧಿಕಾರಿಗಳನ್ನು ಬಂಧಿಸಲು ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಿರುವುದಾಗಿ ವರದಿ ವಿವರಿಸಿದೆ. ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಕಚೇರಿ ಮತ್ತು ನಿವಾಸಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.

ಇದನ್ನೂ ಓದಿ:ಇಂಡೋನೇಷ್ಯಾ: ಪ್ರಬಲ ಭೂಕಂಪನ, ಕುಸಿದು ಬಿದ್ದ ಆಸ್ಪತ್ರೆ; ಅವಶೇಷಗಳಡಿ ರೋಗಿಗಳು

ದೆಹಲಿ, ಗಾಜಿಯಾಬಾದ್, ನೋಯ್ಡಾ, ಗುರ್ಗಾಂವ್, ಮೀರತ್ ಮತ್ತು ಕಾನ್ಪುರ್ ಸೇರಿದಂತೆ ಆರೋಪಿಗಳಿಗೆ ಸೇರಿದ 14 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಸಿಬಿಐ ವಕ್ತಾರ ಆರ್ ಸಿ ಜೋಶಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next