ನವದೆಹಲಿ: ಜಲ್ಲಿಕಟ್ಟುವಿಗೆ ಎಲ್ಲಿಂದಲೂ, ಯಾರಿಂದಲೂ ವಿರೋಧ ಬರಬಾರದು ಎಂಬ ಕಾರಣಕ್ಕಾಗಿ ಸುಪ್ರೀಂಕೋರ್ಟ್‌ಗೆ
ಸಲ್ಲಿಕೆಯಾಗಿದ್ದುದು ಬರೋಬ್ಬರಿ 70 ಕೇವಿಯಟ್! ಜಲ್ಲಿಕಟ್ಟು ಕ್ರೀಡೆ ವಿಚಾರದಲ್ಲಿ ಕಳೆದ ಆರೇಳು ದಿನಗಳಿಂದಲೂ ತೀವ್ರ ಆತ್ಮಾಭಿಮಾನ ಮೆರೆದ ತಮಿಳರು, ಸುಗ್ರೀವಾಜ್ಞೆ ಹೊರ ತರುವಲ್ಲಿಯೂ ಯಶಸ್ವಿಯಾಗಿದ್ದರು. ಇದಷ್ಟೇ ಅಲ್ಲ, ಹೋರಾಟ ಮುಂದುವರಿಸಿ ಇದನ್ನು ಕಾನೂನು ಮಾಡಿಕೊಳ್ಳುವಲ್ಲಿಯೂ ಬಹುತೇಕ ಸಫಲರಾಗಿದ್ದಾರೆ. ಆದರೆ ಇವರ ಹೋರಾಟ ಎಷ್ಟು ವ್ಯವಸ್ಥಿತವಾಗಿತ್ತೆಂದರೆ, ಸುಪ್ರೀಂಕೋರ್ಟ್ ಎಲ್ಲಾದರೂ ಸುಗ್ರೀವಾಜ್ಞೆಗೆ ಅಥವಾ ರಾಜ್ಯ ಸರ್ಕಾರ ತರುವ ತಿದ್ದುಪಡಿ ಮಸೂದೆಗೆ ಅಡ್ಡಿ ಮಾಡಿದರೆ ಎಂಬ ಆತಂಕದಿಂದ ಜಲ್ಲಿಕಟ್ಟು ಬೆಂಬಲಿತ ಹೋರಾಟಗಾರರು ಮತ್ತು ನಾನಾ ಸಂಘಟನೆಗಳು ಕೋರ್ಟ್‌ಗೇ 70 ಕೇವಿಯಟ್ ಸಲ್ಲಿಸಿವೆ. ಅದರಲ್ಲೂ ವಿಶೇಷ ಅಧಿವೇಶನ ನಡೆದ ದಿನವಾದ ಸೋಮವಾರವೇ ಅತಿ ಹೆಚ್ಚು ಕೇವಿಯಟ್‌ಗಳು ಬಿದ್ದಿವೆ.
ಶನಿವಾರ ಸುಗ್ರೀವಾಜ್ಞೆ ಜಾರಿಗೆ ತಂದ ಕೂಡಲೇ ತಮಿಳುನಾಡು ಸರ್ಕಾರ ಮೊದಧಿಧಿಧಿಲಿಗೆ ಮಾಡಿದ ಕೆಲಸವೆಂದರೆ, ಮುಂಜಾಗ್ರತಾ ಕ್ರಮವಾಗಿ ಸುಪ್ರೀಂಕೋರ್ಟ್‌ಗೆ ಕೇವಿಯಟ್ ಸಲ್ಲಿಸಿದ್ದುದು. ಇದರಲ್ಲಿ ಸುಗ್ರೀವಾಜ್ಞೆ ಸಂಬಂಧ ಯಾವುದೇ ಆದೇಶ ಹೊರಡಿಸಬಾರದು ಎಂದು ಅದು ಮನವಿ ಮಾಡಿತ್ತು.
ಅಲ್ಲದೆ ಭಾನುವಾರವೂ ಹೋರಾಟ ಮುಂದುವರಿದ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಸೋಮವಾರ ವಿಶೇಷ ಅಧಿಧಿವೇಶ ಕರೆದು, ತಿದ್ದುಪಡಿ ಮಸೂದೆಗೆ ಅನುಧಿಮೋದನೆ ಪಡೆಯುವುದಾಗಿ ಹೇಳಿದರು. ಈ ಹಿನ್ನೆಲೆಯಲ್ಲಿ ಸೋಮಧಿವಾರವೇ ಸುಪ್ರೀಂಕೋರ್ಟ್ ಮತ್ತೆ ಈ ವಿಚಾರ ಸಂಬಂಧ ಯಾವುದೇ ಅರ್ಜಿ ವಿಚಾರಣೆಗೆ ತೆಗೆದುಕೊಳ್ಳಬಾರದು ಎಂಬ ಉದ್ದೇಶದಿಂದ ಒಂದಾದ ಮೇಲೊಂದರಂತೆ 70 ಕೇವಿಯಟ್‌ಗಳು ಸಲ್ಲಿಕೆಯಾದವು. ಆದರೆ ಸುಪ್ರೀಂಕೋರ್ಟ್ ರಿಜಿಸ್ಟ್ರಿ ಅವರು 16 ಕೇವಿಯಟ್‌ಗಳನ್ನು ವಿಚಾರಣೆಗೆ ಸ್ವೀಕರಿಸಿದ್ದಾರೆ ಎಂದು ವಕೀಲರೊಬ್ಬರು ಹೇಳಿದ್ದಾರೆ.
ಜನರ ರಕ್ಷಣೆಗೆ ಆದ್ಯತೆ ನೀಡಿ ಎಂದ ಹೈಕೋರ್ಟ್: ಯಾವುದೇ ಹಿಂಸಾಚಾರ ನಡೆಯದಂತೆ ಮುಂಜಾಗ್ರತೆ ವಹಿಸಿ, ಜನರ ಸುರಕ್ಷತೆ ಬಗ್ಗೆ ನಿಗಾ ವಹಿಸಿ ಎಂದು ಮದ್ರಾಸ್ ಹೈಕೋರ್ಟ್ ತಮಿಳುನಾಡು ಡಿಜಿಪಿಗೆ ಆದೇಶಿಸಿದೆ. ಪ್ರತಿಭಟನಾಕಾರರನ್ನು ಪೊಲೀಸರು ಚದುರಿಸಿದ ಬಳಿಕ, ಉದ್ವಿಗ್ನಗೊಂಡ ಹಿಂಸಾಚಾರ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ನೀಡಿದೆ.
ಜಲ್ಲಿಕಟ್ಟು ಪರ ಹೋರಾಟಗಾರರು ಶಾಂತ ರೀತಿಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇವರಿಗೆ ಸೂಕ್ತ ಭದ್ರತೆ ನೀಡಬೇಕು. ಇವರ ರಕ್ಷಣೆಗೆ ಆದ್ಯತೆ ನೀಡಬೇಕು ಎಂದಿತು. ಈ ವೇಳೆ ಉತ್ತರಿಸಿದ ಅಡ್ವೋಕೇಟ್ ಜನರಲ್ ಅವರು, ಸಮಾಜ ವಿರೋಧಿ ಶಕ್ತಿಗಳು ಈ ಹಿಂಸಾಚಾರದಲ್ಲಿ ಭಾಗಿಯಾಗಿವೆ. ಇದರಲ್ಲಿ ಪ್ರತಿಭಟನಾನಿರತರದ್ದು ಪಾತ್ರವಿಲ್ಲ ಎಂದರು. ಅಲ್ಲದೆ ಜ.19ರ ವರೆಗೆ ಮಾತ್ರ ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇದಾದ ನಂತರ ಇಲ್ಲಿ ಉಳಿದಿದ್ದವರು ಸಮಾಜ ವಿರೋಧಿ ಶಕ್ತಿಗಳೇ ಆಗಿದ್ದರು. ಈ ಬಗ್ಗೆ ಗುಪ್ತಚರ ಇಲಾಖೆ ವರದಿ ಆಧರಿಸಿ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿದರು ಎಂದು ಹೇಳಿದರು.
ಕೇವಿಯಟ್ ಎಂದರೇನು?
ನಮ್ಮ ಅಹವಾಲನ್ನು ಕೇಳದೇ ಯಾವುದೇ ಆದೇಶ ನೀಡಬೇಡಿ ಎಂದು ಕೋರ್ಟ್‌ಗೆ ಮನವಿ ಮಾಡುವುದನ್ನು ಕೆವಿಯಟ್ ಎನ್ನಲಾಗುತ್ತದೆ. ಒಂದು ವಿಚಾರದಲ್ಲಿ ಬೇರೊಬ್ಬರು ಅರ್ಜಿ ಸಲ್ಲಿಸಿದಾಕ್ಷಣ, ಅವರ ವಾದ ಕೇಳಿಯೇ ಎಂಥದ್ದೂ ಆದೇಶ ನೀಡಬಾರದು. ಆ ವಿಚಾರದಲ್ಲಿ ನಮ್ಮ ವಾದಕ್ಕೂ ಮನ್ನಣೆ ನೀಡಬೇಕು. ಈ ಬಳಿಕವಷ್ಟೇ ಆದೇಶ ಹೊರಡಿಸಿ ಎಂದು ಕೇಳಿಕೊಳ್ಳುವುದು.