Advertisement
ಜುಲೈ ಕೊನೇ ವಾರಕ್ಕೂ ಮುಂಚೆ 77 ಅಡಿಗೆ ಕುಸಿದಿತ್ತು. ನಂತರ ಜುಲೈ ಕೊನೇ ವಾರದಲ್ಲಿ ಕಾವೇರಿ ಕೊಳ್ಳದಲ್ಲಿ ಮುಂಗಾರು ಮಳೆ ಚುರುಕುಗೊಂಡ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿತ್ತು. ಇದರಿಂದ ಜಲಾಶಯದ ನೀರಿನ ಮಟ್ಟ ಏರಿಕೆ ಕಂಡಿತು. ಕೇವಲ 10 ದಿನದಲ್ಲಿ 10 ಅಡಿಗೂ ಹೆಚ್ಚು ನೀರು ಹರಿದು ಬಂದಿತ್ತು. ನಂತರ ಸುರಿದ ಭಾರಿ ಮಳೆಯಿಂದ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿತ್ತು. ಇದರಿಂದ ಜು.31ರಂದು ಜಲಾಶ ಯದಲ್ಲಿ 113.04 ಅಡಿಗೆ ನೀರು ಬಂದಿತ್ತು. ಆಗ ಒಳ ಹರಿವು 8,768 ಕ್ಯೂಸೆಕ್ ಇದ್ದರೆ, ಹೊರ ಹರಿವು 3,177 ಕ್ಯೂಸೆಕ್ ಇತ್ತು.
Related Articles
Advertisement
ಅಕ್ಟೋಬರ್‌ಗೆ ತುಂಬುವ ನಿರೀಕ್ಷೆ?:
ಆಗಸ್ಟ್ ತಿಂಗಳಿಗೆ 113 ಅಡಿ ತಲುಪಿರುವ ಜಲಾಶಯವು ಮತ್ತೆ ಏರಿಕೆ ಕಾಣಲೇ ಇಲ್ಲ. ಅಲ್ಲದೆ, ಮಳೆಯೂ ಕ್ಷೀಣಿಸಿರುವುದರಿಂದ ಕಾವೇರಿ ಕೊಳ್ಳದ ರೈತರಲ್ಲಿ ಆತಂಕ ಮನೆ ಮಾಡಿದೆ. ಮುಂದೆ ಜಲಾಶಯ ತುಂಬುವ ನಿರೀಕ್ಷೆಯೂ ಇಲ್ಲದಂತಾಗಿದೆ. ಆದರೆ ಕಳೆದ ಹದಿನೈದು ವರ್ಷಗಳಲ್ಲಿ ಅಕ್ಟೋಬರ್ ತಿಂಗಳಲ್ಲಿ ತುಂಬಿರುವ ಉದಾಹರಣೆಗಳು ಇವೆ. 2012ರಲ್ಲಿ ಸೆ.15ರಂದು 110.42 ಅಡಿ ತುಂಬಿದ್ದು ಬಿಟ್ಟರೆ ಅಕ್ಟೋಬರ್‌ನಲ್ಲಿ ಜಲಾಶಯ ಗರಿಷ್ಠ ಮಟ್ಟ ತಲುಪಿದೆ. ಕಳೆದ 2021ರಲ್ಲಿ ಅ.28ರಂದು 124.80 ಅಡಿ ತಲುಪಿತ್ತು. ಅದರಂತೆ 2010ರಲ್ಲಿ ಅ.18ರಂದು 124.10 ಅಡಿ ತಲುಪಿತ್ತು. 2017ರಲ್ಲಿ ಅ.23ರಂದು 114.32 ಅಡಿ ಮಾತ್ರ ತುಂಬಿತ್ತು. ಆದ್ದರಿಂದ ಅಕ್ಟೋಬರ್ ತಿಂಗಳಾಂತ್ಯದಲ್ಲಿ ಭರ್ತಿಯಾಗುವ ನಿರೀಕ್ಷೆ ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
ಮಳೆ ಬಾರದಿದ್ದರೆ ಕುಡಿವ ನೀರಿಗೂ ತೊಂದರೆ:
ಮುಂದಿನ ಸೆಪ್ಟಂಬರ್ ಹಾಗೂ ಅಕ್ಟೋಬರ್‌ನಲ್ಲಿ ವರುಣ ಕೃಪೆ ತೋರದಿದ್ದರೆ ಮುಂದಿನ ಬೇಸಿಗೆಗೆ ಕುಡಿಯುವ ನೀರಿನ ಅಭಾವ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಜಲಾಶಯ 102 ಅಡಿಗೆ ಇಳಿದಿದೆ. ಮುಂದೆ ಇದೇ ರೀತಿ ತಮಿಳುನಾಡಿಗೆ ನೀರು ಹರಿಸಿದರೆ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ಇತರೆ ಜಿಲ್ಲೆಗಳಿಗೂ ಕುಡಿಯುವ ನೀರಿನ ಕೊರತೆ ಕಾಡಲಿದೆ.
ನಿಲ್ಲದ ವಿವಿಧ ರೈತ ಸಂಘಟನೆಗಳ ಹೋರಾಟ:
ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಜಿಲ್ಲೆಯ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಹೆದ್ದಾರಿ ತಡೆ ಸೇರಿದಂತೆ ನಗರದಲ್ಲಿ ಸರಣಿ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಸರ್ಕಾರದ ವಿರುದ್ಧ ರೈತರು, ಮುಖಂಡರು, ರಾಜಕೀಯ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಆದರೂ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಮಾತ್ರ ನಿಲ್ಲಿಸಿಲ್ಲ.
ಬರದ ಕರಿಛಾಯೆ:
ಈಗಾಗಲೇ ಮಳೆ ಕೊರತೆ ಹಾಗೂ ಬೆಳೆ ಬಿತ್ತನೆಯೂ ಕುಂಠಿತವಾಗಿರುವುದರಿಂದ ಬರದ ಕರಿಛಾಯೆಆವರಿಸುವಂತಾಗಿದೆ. ಈಗಾಗಲೇ ಬಿತ್ತನೆ ಮಾಡಿರುವ ಬೆಳೆಯನ್ನು ಉಳಿಸಿಕೊಳ್ಳಲು ರೈತರು ಪರದಾಡುವಂತಾಗಿದೆ. ಇಷ್ಟೊತ್ತಿಗಾಗಲೇ ಶೇಕಡವಾರು ಬಿತ್ತನೆ ಪ್ರಮಾಣ ಹೆಚ್ಚಾಗಬೇಕಾಗಿತ್ತು. ಮಳೆ ಕೊರತೆಯಾಗಿರುವುದರಿಂದ ಜಿಲ್ಲೆಯಲ್ಲಿ ಬರ ಆವರಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಜಿಲ್ಲಾದ್ಯಂತ ಬಿತ್ತನೆ ಕುಂಠಿತ:
ಈಗಾಗಲೇ ಜಿಲ್ಲಾದ್ಯಂತ ಸಮರ್ಪಕವಾಗಿ ಮಳೆಯೂ ಸುರಿದಿಲ್ಲ. ಇತ್ತ ಜಲಾಶಯದಿಂದ ನಿರಂತರವಾಗಿ ನಾಲೆಗಳಿಗೂ ನೀರು ಹರಿಸುತ್ತಿಲ್ಲ. ಕಟ್ಟುಪದ್ಧತಿಯಲ್ಲಿ ನೀರು ಬಿಡುತ್ತಿದ್ದರೂ ಕೇವಲ ಖುಷ್ಕಿ ಬೆಳೆ ಬೆಳೆಯುವಂತೆ ಸೂಚಿಸಲಾಗಿದೆ. ಇದರಿಂದ ಜಿಲ್ಲಾದ್ಯಂತ ರೈತರಿಗೆ ಸಂಕಷ್ಟ ಎದುರಾಗಿದೆ. ಕೇವಲ ಕೊಳವೆ ಬಾವಿ ಇರುವ ರೈತರು ಮಾತ್ರ ಭತ್ತ, ಕಬ್ಬು ಬಿತ್ತನೆಗೆ ಮುಂದಾಗಿದ್ದಾರೆ.
-ಎಚ್.ಶಿವರಾಜು