Advertisement

ಇಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ

11:31 AM Nov 10, 2017 | |

ಬೆಂಗಳೂರು: ನಗರದ ಮೈಸೂರು ರಸ್ತೆಯ ಕೆಂಗೇರಿ ಬಳಿಯ ಕೃಷ್ಣಪ್ರಿಯ ಕಲ್ಯಾಣ ಮಂಟಪದ ಸಮೀಪ 2100 ಮಿ.ಮೀ. ವ್ಯಾಸದ ಎಂ.ಎಸ್‌.ಕೊಳವೆ ಮಾರ್ಗದ 300 ಮಿ.ಮೀ. ವ್ಯಾಸದ ಸ್ಕೌರ್‌ ವಾಲ್‌ ಬದಲಿಸುವ ಕಾಮಗಾರಿ ನಡೆಸುತ್ತಿರುವುದರಿಂದ ನಗರದ ಕೆಲವು ಭಾಗಗಳಲ್ಲಿ ಕಾವೇರಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. 

Advertisement

ನ.10ರಂದು ಬೆಳಗ್ಗೆ 11 ಗಂಟೆಯಿಂದ ಆರ್‌.ಆರ್‌.ನಗರ, ವಿದ್ಯಾನಗರ, ವಿಜಯನಗರ, ಗೋವಿಂದರಾಜನಗರ, ರಾಜಾಜಿನಗರ, ಬ್ಯಾಟರಾಯನಪುರ, ಯಲಹಂಕ, ಎಚ್‌ಬಿಆರ್‌ ಹಾಗೂ ನಾಗಾವರ ಮಹಾಲಕ್ಷ್ಮೀಬಡಾವಣೆ, ಬಸವೇಶ್ವರನಗರ, ಪಶ್ಚಿಮ ವಿಭಾಗದ ಕೆಲವು ಪ್ರದೇಶಗಳು, ಜಿಕೆವಿಕೆ, ಉತ್ತರ ವಿಭಾಗ ವ್ಯಾಪ್ತಿಯ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ಭಾಗಶಃ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಮಂಡಳಿ ಕೋರಿದೆ. 

ಸಂಸ್ಕರಣಾ ಘಟಕಗಳ ಉದ್ಘಾಟನೆ: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಸ್ಥಾಪಿಸಿರುವ 136 ಎಂ.ಎಲ್‌.ಡಿ ಸಾಮರ್ಥಯದ ತ್ಯಾಜ್ಯ ನೀರು ಸಂಸ್ಕರಣೆ ಘಟಕಗಳನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಶುಕ್ರವಾರ(ನ.6) ಚಾಲನೆ ನೀಡಲಿದ್ದಾರೆ. ಬೆಳ್ಳಂದೂರು ಅಮಾನಿಕೆರೆಯ ಬಳಿ 90 ಎಂ.ಎಲ್‌.ಡಿ., ಹೊರಮಾವು ಅಗರ ಬಳಿ 20 ಎಂ.ಎಲ್‌.ಡಿ., ದೊಡ್ಡಬೆಲೆ ಬಳಿ 20 ಎಂ.ಎಲ್‌.ಡಿ., ಕಾಡುಗೋಡಿ ಬಳಿ 6 ಎಂ.ಎಲ್‌.ಡಿ., ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು ಕಾರ್ಯಾರಂಭ ಮಾಡಲಿವೆ.

Advertisement

Udayavani is now on Telegram. Click here to join our channel and stay updated with the latest news.

Next