Advertisement

ಜಾಬಗೆರೆಯಲ್ಲಿ ಕಾವೇರಿ ನೀರು ಪೂರೈಕೆ

05:09 AM Jun 13, 2020 | Lakshmi GovindaRaj |

ಹುಣಸೂರು: ತಾಲೂಕಿನ ಜಾಬಗೆರೆಯಲ್ಲಿ ಸ್ಥಗಿತಗೊಂಡಿದ್ದ ಕಾವೇರಿ ನೀರು ಪೂರೈಕೆಗೆ ಶಾಸಕ ಮಂಜುನಾಥ್‌ ಮರು ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶಾಸಕರು, ತಮ್ಮ ಹಿಂದಿನ ಅವ ಧಿಯಲ್ಲಿ 35 ಲಕ್ಷ ರೂ. ವೆಚ್ಚದಲ್ಲಿ  ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗಿತ್ತು. ಕೆಲತಿಂಗಳ ಕಾಲ ಕಾವೇರಿ ನೀರು ಬಂತಾದರೂ ತಾಂತ್ರಿಕ ಸಮಸ್ಯೆ ಗಳಿಂದ ಸ್ಥಗಿತಗೊಂಡಿತ್ತು. ಮತ್ತೆ ಅದರತ್ತ ಯಾರೂ ಗಮನಹರಿಸಲಿಲ್ಲ. ಗ್ರಾಮದಲ್ಲಿ ನೀರಿನ ಸಮಸ್ಯೆಯನ್ನು ಗಮನಿಸಿ ಮತ್ತೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

Advertisement

ಗ್ರಾಮಸ್ಥರ ಸಮಸ್ಯೆಗೆ ಸ್ಪಂದನೆ: ಉಪ ಚುನಾವಣೆಯಲ್ಲಿ ಗೆದ್ದು ಬಂದ ಮೇಲೆ ಜಾಬಗೆರೆ ಗ್ರಾಮಸ್ಥರು ನೀರಿಗಾಗಿ ಪರದಾಡುತ್ತಿದ್ದೇವೆ. ಸಮರ್ಪಕ ನೀರು ಪೂರೈಕೆಯಾಗುವಂತೆ ಮನವಿ ಮಾಡಿಕೊಂಡಿದ್ದರು. ಅಧಿಕಾರಿಗಳನ್ನು ಸ್ಥಳಕ್ಕೆ  ಕರೆದೊಯ್ದು ಜಾಬಗೆರೆಗೆ ನೀರು ಪೂರೈಸುತ್ತಿದ್ದ ಜಾಕ್‌ವೆಲ್‌ನ್ನು ಪರಿಶೀಲಿಸಿ ತಾಂತ್ರಿಕ ಸಮಸ್ಯೆ ದುರಸ್ತಿಪಡಿಸಿ ನೀರು ಪೂರೈಸಲಾಗಿದೆ ಎಂದು ಹೇಳಿದರು.

ಕೆ.ಆರ್‌.ನಗರದ ಮುಖ್ಯರಸ್ತೆಯ ನೀರು ಶುದ್ಧೀಕರಣ ಘಟಕದಿಂದ ಹೊಸ ಪೈಪ್‌ಲೈನ್‌ ಅಳವಡಿಸಿ ದ್ದರಿಂದ ಜಾಬಗೆರೆಗೆ ಸಮರ್ಪಕ ನೀರು ಹರಿಯಲು ಕಾರಣರಾದ ಶಾಸಕರನ್ನು ಗ್ರಾಮಸ್ಥರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ತಾಪಂ  ಸದಸ್ಯ ತಿಮ್ಮನಾಯ್ಕ, ಜಿಪಂ ಮಾಜಿ ಸದಸ್ಯ ದೇವರಾಜ್‌, ತಾಪಂ ಇಒ ಗಿರೀಶ್‌, ನೀರು ಪೂರೈಕೆ ಯೋಜನೆಯ ಎಇಇ ರಮೇಶ್‌, ಗ್ರಾಪಂ ಅಧ್ಯಕ್ಷೆ ಶೋಭಾ, ಸದಸ್ಯರಾದ ಕುಮಾರ್‌, ಬಿಳಿಗೌಡ, ಪಿಡಿಒ ವಿಷಕಂಠಚಾರಿ, ಮುಖಂಡರಾದ  ಲೋಕನಾಥರಾವ್‌ ಕದಂ, ರಾಮು, ಪ್ರಸಾದ್‌, ಅನಿಲ್‌ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next