Advertisement

ಕಾವೇರಿ ನೀರು: ಅರ್ಜಿ ಸಲ್ಲಿಸಲು ತಮಿಳು ನಾಡಿಗೆ ಸುಪ್ರೀಂ ಅನುಮತಿ

12:26 PM Jul 05, 2017 | udayavani editorial |

ಹೊಸದಿಲ್ಲಿ : ತನಗೆ ನ್ಯಾಯ ಪ್ರಕಾರವಾಗಿ ಬರಬೇಕಾಗಿದ್ದ 22.5 ಟಿಎಂಸಿ ಅಡಿ ಕಾವೇರಿ ನೀರನ್ನು ಕರ್ನಾಟಕ ಪೂರೈಸಿಲ್ಲ ಎಂದು ತಮಿಳು ನಾಡು ಹೇಳಿದೆ.

Advertisement

ಈ ಕುರಿತ ದೂರಿನ ಅರ್ಜಿಯನ್ನು ಸಲ್ಲಿಸುವುದಕ್ಕೆ ಸುಪ್ರೀಂ ಕೋರ್ಟ್‌, ಇಂದು ಬುಧವಾರ ತಮಿಳು ನಾಡಿಗೆ ಅನುಮತಿ ನೀಡಿದೆ. 

ಈ ನಡುವೆ ಕರ್ನಾಟಕ ಸರಕಾರ ತಮಿಳು ನಾಡಿಗೆ ಕಾವೇರಿ ನೀರನ್ನು ಕೆಆರ್‌ಎಸ್‌ ಡ್ಯಾಮ್‌ ಮೂಲಕ ಬಿಡುತ್ತಿದ್ದು ಇದಕ್ಕೆ ರೈತರ ವ್ಯಾಪಕ ವಿರೋಧ, ಪ್ರತಿಭಟನೆ ವ್ಯಕ್ತವಾಗುತ್ತಿದೆ. 

ತಾನು ಕಾನೂನು ಪ್ರಕಾರವೇ ತಮಿಳು ನಾಡಿಗೆ ಕಾವೇರಿ ನೀರನ್ನು ಬಿಡುತ್ತಿದ್ದೇನೆ ಎಂದು ಕರ್ನಾಟಕ ಸರಕಾರ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next