ಚೆನ್ನೈ: ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕದ ವಿರುದ್ಧ ನೆರೆಯ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದೆ. ಕರ್ನಾಟಕದ 4 ಅಣೆಕಟ್ಟುಗಳಲ್ಲಿ 75 ಟಿಎಂಸಿ ನೀರು ಸಂಗ್ರಹವಿದೆ. ಆದರೆ ತಮಿಳುನಾಡಿನ ಮೆಟ್ಟೂರು ಡ್ಯಾಂನಲ್ಲಿ 13.808 ಟಿಎಂಸಿ ನೀರು ಮಾತ್ರ. ಆದರೂ ಕರ್ನಾಟಕ ನೀರು ಬಿಡಲು ಒಪ್ಪುತ್ತಿಲ್ಲ ಎಂದು ಸಿಎಂ ಎಂ.ಕೆ.ಸ್ಟಾಲಿನ್ ಆರೋಪಿಸಿದ್ದಾರೆ. ತ.ನಾಡಿಗೆ 8,000 ಕ್ಯುಸೆಕ್ ನೀರು ಬಿಡುವುದಾಗಿ ಕರ್ನಾಟಕ ಸರ್ವ ಪಕ್ಷಗಳ ಸಭೆಯಲ್ಲಿ ತೀರ್ಮಾನವಾಗಿತ್ತು. ಅದನ್ನು ವಿರೋಧಿಸಿರುವ ತಮಿಳುನಾಡು ಸರಕಾರ, ಸಿಡಬ್ಲ್ಯುಆರ್‌ಸಿ ನಿರ್ದೇಶನದಂತೆ 1 ಟಿಎಂಸಿ ನೀರು ಕರ್ನಾಟಕ ಬಿಡುತ್ತಿಲ್ಲೆಂದು ಆರೋಪಿಸಿದೆ.
ಇಂದು ತ.ನಾಡಿನಲ್ಲಿ ಸರ್ವಪಕ್ಷಗಳ ಸಭೆ
ಕರ್ನಾಟಕ ತಮಿಳುನಾಡಿಗೆ ನೀರು ಬಿಡುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಮಂಗಳ ವಾರ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅಧ್ಯಕ್ಷತೆ ಯಲ್ಲಿ ಸರ್ವಪಕ್ಷ ಸಭೆ ನಡೆಯಲಿದೆ. ಕರ್ನಾಟಕ ಕಾವೇರಿ ನೀರು ಬಿಡದ ಬಗ್ಗೆ ಮುಂದಿನ ಕ್ರಮದ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಸ್ಟಾಲಿನ್ ಹೇಳಿದ್ದಾರೆ.