Advertisement

Cauvery Water; ಒಂದೇ ದಿನ ತಮಿಳುನಾಡಿಗೆ 2.25 ಲಕ್ಷ ಕ್ಯುಸೆಕ್‌ ನೀರು: ಡಿಕೆಶಿ

09:10 PM Jul 31, 2024 | Team Udayavani |

ಬೆಂಗಳೂರು: ಕಬಿನಿ ಹಾಗೂ ಕೆಆರ್‌ಎಸ್‌ಗೆ ಒಳಹರಿವು ಹೆಚ್ಚಳವಾಗಿದ್ದು ನದಿಗೆ ಹೆಚ್ಚಿನ ನೀರು ಬಿಡಲಾಗುತ್ತಿದೆ. ಹೀಗಾಗಿ ನದಿಪಾತ್ರದ ಜನರು ಎಚ್ಚರದಿಂದ ಇರುವಂತೆ ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮನವಿ ಮಾಡಿದ್ದಾರೆ.

Advertisement

ಬುಧವಾರ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕೇರಳ ಹಾಗೂ ಕರ್ನಾಟಕದಲ್ಲಿ ಉತ್ತಮ ಮಳೆ ಬರುತ್ತಿರುವುದರಿಂದ ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡುತ್ತಿದ್ದು ಈ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರ ಗಮನ ಸೆಳೆಯಲಾಗಿದೆ. ವಾಸ್ತವಾಂಶ ತಿಳಿಸಿದ್ದೇವೆ ಎಂದರು. ಕಾವೇರಿ ನಿರ್ವಹಣಾ ಸಮಿತಿಯು 40 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಲು ಆದೇಶಿಸಿತ್ತು. ಆದರೆ ಇದುವರೆಗೆ 80 ಟಿಎಂಸಿವರೆಗೆ ನೀರು ಬಿಟ್ಟಿದ್ದೇವೆ. ಇತಿಹಾಸದಲ್ಲೇ ಅತಿ ನೀರು ಹರಿಸಿದ್ದು ಮಂಗಳವಾರ ಒಂದೇ ದಿನ ತಮಿಳುನಾಡಿಗೆ 2.25 ಲಕ್ಷ ಕ್ಯುಸೆಕ್‌ ನೀರು ಹರಿದಿದೆ. ಮತ್ತೆ ಮಳೆ ತಗ್ಗಿರುವ ಹಿನ್ನೆಲೆಯಲ್ಲಿ 1.45 ಲಕ್ಷ ಕ್ಯುಸೆಕ್‌ ನೀರು ಹರಿಸುತ್ತಿದ್ದೇವೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ರೆಡ್‌ ಅಲರ್ಟ್‌ ಘೋಷಿಸಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next