Advertisement

ಕರ್ನಾಟಕ ಪರ ನ್ಯಾಯವಾದಿಗೆ ಶಹಬ್ಟಾಸ್‌ಗಿರಿ

06:15 AM Feb 19, 2018 | Team Udayavani |

ನವದೆಹಲಿ/ಸೇಲಂ: ಕಳೆದ ವಾರವಷ್ಟೇ ಕಾವೇರಿ ಜಲವಿವಾದಕ್ಕೆ ಸಂಬಂಧಿಸಿ ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌ ತನ್ನ 465 ಪುಟಗಳ ತೀರ್ಪಿನಲ್ಲಿ ಕರ್ನಾಟಕದ ಪರ ವಾದ ಮಂಡಿಸಿದ ಹಿರಿಯ ವಕೀಲ ಫಾಲಿ ಎಸ್‌. ನಾರಿಮನ್‌ ಅವರನ್ನು ಶ್ಲಾ ಸಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

Advertisement

ಪ್ರಕರಣದ ವಿಚಾರಣೆಯ ವೇಳೆ ನಡೆದ ಸಂಗತಿಯನ್ನು ಪ್ರಸ್ತಾಪಿಸಿ ಈ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ. 2016ರಲ್ಲಿ ತಮಿಳುನಾಡಿಗೆ 6 ಸಾವಿರ ಕ್ಯೂಸೆಕ್‌ ನೀರು ಬಿಡುವಂತೆ ಕರ್ನಾಟಕಕ್ಕೆ ಸುಪ್ರೀಂಕೋರ್ಟ್‌ ಸೂಚಿಸಿತ್ತು. ಆದರೆ, ಈ ಆದೇಶದ ಬೆನ್ನಲ್ಲೇ ರಾಜ್ಯದಲ್ಲಿ ಭಾರೀ ಹಿಂಸಾಚಾರ ನಡೆದ ಕಾರಣ, ಕೋರ್ಟ್‌ ಆದೇಶವನ್ನು ಪುರಸ್ಕರಿಸಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಿರಾಕರಿಸಿತ್ತು.

ಅಲ್ಲದೆ, ಸರ್ವಪಕ್ಷ ಸಭೆ ನಡೆಸಿದ್ದ ಸಿಎಂ, ನಾವು ರಾಜ್ಯದ ಜನತೆಯ ಹಿತಾಸಕ್ತಿಗೆ ಗೌರವ ನೀಡುತ್ತೇವೆ. ಹಾಗಾಗಿ, ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲವೆಂಬ ನಿರ್ಣಯವನ್ನೂ ಕೈಗೊಂಡಿದ್ದರು.

ಇದರ ಬೆನ್ನಲ್ಲೇ ಅಂದರೆ ಸೆ.30ರಂದು ಕೋರ್ಟ್‌ಗೆ ಹಾಜರಾದ ನಾರಿಮನ್‌, ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸುವವರೆಗೂ ನಾನು ಕರ್ನಾಟಕದ ಪರ ವಾದ ಮಂಡಿಸುವುದಿಲ್ಲವೆಂದು ಸುಪ್ರೀಂಕೋರ್ಟ್‌ಗೆ ತಿಳಿಸಿದ್ದರು. 

ಅಂದಿನ ಘಟನೆಯನ್ನು ಇದೀಗ ಸುಪ್ರೀಂ ಕೋರ್ಟ್‌ ನ್ಯಾಯಪೀಠವು ತೀರ್ಪಿನಲ್ಲಿ ಉಲ್ಲೇಖೀಸಿದ್ದು, “ಇಲ್ಲಿ ನಾವು ಒಂದು ವಿಚಾರವನ್ನು ಪ್ರಸ್ತಾಪಿಸಲೇಬೇಕು. ಅದೆಂದರೆ, ಮಿಸ್ಟರ್‌ ನಾರಿಮನ್‌ ಅವರು ಧೈರ್ಯವಾಗಿ ಬಾರ್‌(ವಕೀಲರ ಸಂಘ)ನ ಅತ್ಯುನ್ನತ ಸಂಪ್ರದಾಯವನ್ನು ಎತ್ತಿಹಿಡಿದಿದ್ದಾರೆ. ನಾರಿಮನ್‌ ಅವರ ನಿಲುವು ನ್ಯಾಯವಾದಿಗಳ ನಂಬಿಕೆ ಹಾಗೂ ಮೌಲ್ಯವನ್ನು ಎತ್ತಿಹಿಡಿದಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.

Advertisement

ಮೇಲ್ಮನವಿ ಕುರಿತು ಸದ್ಯದಲ್ಲೇ ನಿರ್ಧಾರ: ಇದೇ ವೇಳೆ, ಸುಪ್ರೀಂಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ
ಕುರಿತು ಕಾನೂನು ತಜ್ಞರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಮಿಳುನಾಡಿನ ಸಿಎಂ ಪಳನಿಸ್ವಾಮಿ ತಿಳಿಸಿದ್ದಾರೆ. ಭಾನುವಾರ ಸೇಲಂನಲ್ಲಿ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕೋರ್ಟ್‌ ತೀರ್ಪನ್ನು ಸರಿಯಾಗಿ ಪರಿಶೀಲಿಸಿದ ಬಳಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ. ಇದೇ ವೇಳೆ, ತಮಿಳುನಾಡಿನ ಜನತೆ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಗೌರವಿಸಿದ್ದಾರೆ. ಅಂತೆಯೇ, ಕರ್ನಾಟಕ ಕೂಡ ತೀರ್ಪನ್ನು ಪಾಲಿಸಿ, ರಾಜ್ಯಕ್ಕೆ ನೀಡಬೇಕಾದ 177.25 ಟಿಎಂಸಿ ನೀರನ್ನು ಹರಿಸುವಂತೆ ನೋಡಿಕೊಳ್ಳುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ತಮಿಳುನಾಡಿನ ಸಿಪಿಐ ನಾಯಕ ಡಿ. ಪಾಂಡ್ಯನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next