Advertisement

Cauvery Water: ತಿಂಗಳೊಳಗೆ ಬರಲಿದೆ ಕಾವೇರಿ 5ನೇ ಹಂತದ ನೀರು

10:59 AM Aug 21, 2024 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನ 110 ಹಳ್ಳಿಗಳಿಗೆ ಕಾವೇರಿ ನೀರು ಹರಿಸುವ ಉದ್ದೇಶದಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕೈಗೊಂಡಿರುವ 5ನೇ ಹಂತದ ಯೋಜ ನೆಯ ಕಾಮಗಾರಿ ಮುಕ್ತಾಯಗೊಂಡಿದೆ.

Advertisement

ಇದೀಗ ಅಂತಿಮ ಹಂತದಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಿ ಕೊಳವೆ ಪರೀಕ್ಷೆ (ಟೆಸ್ಟಿಂಗ್‌) ಕಾರ್ಯ ಭರದಿಂದ ಸಾಗಿದೆ. ಕಾವೇರಿ 5ನೇ ಹಂತದ ಯೋಜನೆಯ ಕಾಮಗಾ ರಿಯು ಕೊನೆಗೂ ಮುಕ್ತಾಯಗೊಂಡಿದ್ದು, ಕೊಳವೆಗಳ ಟೆಸ್ಟಿಂಗ್‌ ಕಾರ್ಯ ಮುಗಿಯುತ್ತಿದ್ದಂತೆ 110 ಹಳ್ಳಿಗಳಿಗೆ ಕಾವೇರಿ ಹರಿದು ಬರಲಿದ್ದಾಳೆ. ಸೆಪ್ಟೆಂಬರ್‌ 2ನೇ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಯೋಜನೆಗೆ ಚಾಲನೆ ನೀಡುವ ಸಾಧ್ಯತೆಗಳಿವೆ. ಇನ್ನೂ ಸೂಕ್ತ ದಿನಾಂಕ ನಿಗದಿಯಾಗಿಲ್ಲ. ಸದ್ಯ ಕಿಲೋಮೀಟರ್‌ ಲೆಕ್ಕದಲ್ಲಿ ಪ್ರತಿದಿನ ಜಲಮಂಡಳಿ ಅಧಿಕಾರಿಗಳು ಹಂತ-ಹಂತ ವಾಗಿ ನೀರಿನ ಕೊಳವೆಗಳನ್ನು ಪರಿಶೀಲಿಸುತ್ತಿದ್ದಾರೆ.

ಕೊಳವೆ ಟೆಸ್ಟಿಂಗ್‌ ಹೇಗೆ?: ನಗರದ ಟಿ.ಕೆ.ಹಳ್ಳಿಯಲ್ಲಿರುವ ಮೊದಲ ಪಂಪಿಂಗ್‌ ಸ್ಟೇಷನ್‌ನಿಂದ ಹಾರೋಹಳ್ಳಿಯ 2ನೇ ಪಂಪಿಂಗ್‌ ಸ್ಟೇಷನ್‌ವರೆಗೆ ಕಾವೇರಿ ನೀರು ಹರಿಸಲಾಗಿದೆ. ಹಾರೋಹಳ್ಳಿಯಿಂದ ತಾತಗುಣಿ ಯಲ್ಲಿರುವ 3ನೇ ಪಂಪಿಂಗ್‌ ಸ್ಟೇಷನ್‌ಗೆ ನೀರು ಹರಿಸುವ ಕೆಲಸ ನಡೆಯುತ್ತಿದೆ. ಕಾವೇರಿ ನದಿಯಿಂದ ಪಂಪಿಂಗ್‌ ಸ್ಟೇಷನ್‌ಗಳಿಗೆ ಸಂಪರ್ಕಿಸಿ ರುವ ಬೃಹತ್‌ ಆಕಾರದ ಕೊಳವೆಗಳಲ್ಲಿ ಏನಾದರೂ ಸಮಸ್ಯೆ ಇದೆಯಾ ಅಥವಾ ಸರಾಗವಾಗಿ ನೀರು ಹರಿದು ಹೋಗಲಿವೆಯಾ ಎಂಬುದನ್ನು ಪರೀಕ್ಷಿಸುವ ಉದ್ದೇಶದಿಂದ ಪ್ರಾಯೋಗಿಕವಾಗಿ ಕೈಗೊಂಡಿದ್ದ ನೀರು ಹರಿಸುವ ಕಾರ್ಯ ಮುಕ್ತಾಯಗೊಂಡಿದೆ. ಇದೀಗ ಹೆಚ್ಚಿನ ಒತ್ತಡದಲ್ಲಿ ವೇಗವಾಗಿ (ಪ್ರಜರ್‌) ನೀರನ್ನು ಹರಿಸಿ ಕೊಳವೆಗಳಲ್ಲಿ ಸೋರಿಕೆ ಇವೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.

ಬಹುತೇಕ ಕಡೆ ಕೊಳವೆಗಳು ಸರಿಯಾಗಿವೆ: 110 ಹಳ್ಳಿಗಳಿಗೆ ಅಳವಡಿಸಿರುವ ನೂರಾರು ಕಿಲೋ ಮೀಟರ್‌ ಉದ್ದದ ಕೊಳವೆಗಳನ್ನು ಹಂತ-ಹಂತವಾಗಿ ಪರೀಕ್ಷಿಸಲಾಗುತ್ತಿದೆ. ಬಹುತೇಕ ಕಡೆ ಕೊಳವೆಗಳಲ್ಲಿ ಯಾವುದೇ ಸಮಸ್ಯೆಗಳು ಕಂಡು ಬಂದಿಲ್ಲ. ನೀರು ಹರಿಸಲು ಯೋಗ್ಯವಾಗಿದೆ ಎಂದು ಎಂಜಿನಿಯರ್‌ ಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ ನೀರಿನ ಕೊಳವೆಗಳಿಗೆ ಅಳವಡಿಸಿರುವ ವಾಲ್ಸ್‌ಗಳು ಸಡಿಲಗೊಂಡಿವೆಯೇ, ನೀರು ಹರಿಯುವಿಕೆ ಸರಾಗ ವಾಗಿವೆಯೇ, ಪೈಪ್‌ ಹಾನಿಯಾದ ಕೆಲವು ಕಡೆ ಅನ್ನು ಕೂಡಲೇ ರಿಪೇರಿ ಪಡಿಸುವುದು ಸೇರಿದಂತೆ ತಾಂತ್ರಿಕ (ಟೆಕ್ನಿಕಲ್‌) ವಿಚಾರಕ್ಕೆ ಸಂಬಂಧಿಸಿದ ಅಂಶಗಳ ಕುರಿತು ಪರಿಶೀಲನೆ ಅಂತಿಮ ಹಂತದಲ್ಲಿದೆ. ಲೋಪ ಗಳು ಕಂಡು ಬಂದಲೆಲ್ಲ ಅದನ್ನು ಕೂಡಲೇ ಬಗೆಹರಿ ಸಲಾಗಿದೆ ಎಂದು ಜಲಮಂಡಳಿ ಮೂಲಗಳು ತಿಳಿಸಿವೆ.

Advertisement

ನೀರಿನ ಸಂಪರ್ಕ ಪಡೆಯಲು ಹಿಂದೇಟು: ಕಾವೇರಿ 5ನೇ ಹಂತದ ಯೋಜನೆಯ ಮೂಲಕ ಒಟ್ಟು 775 ಎಂಎಲ್‌ಡಿ ಕಾವೇರಿ ನೀರನ್ನು ಬೆಂಗಳೂರಿನ 110 ಹಳ್ಳಿಗಳಿಗೆ ಹರಿಸುವ ಸಾಮರ್ಥ್ಯವಿದೆ. 110 ಹಳ್ಳಿಗಳಲ್ಲಿ 3.50 ಲಕ್ಷ ಕಡೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸಲು ಅವಕಾಶಗಳಿದ್ದರೂ, ಇದುವರೆಗೆ ಕೇವಲ 55 ಸಾವಿರ ಪ್ರದೇಶಗಳಲ್ಲಿ ಮಾತ್ರ ಕಾವೇರಿ 5ನೇ ಹಂತದ ಯೋಜನೆಯ ಸಂಪರ್ಕ ಅಳವಡಿಸಲಾಗಿದೆ. ಹೀಗಾಗಿ 775 ಎಂಎಲ್‌ಡಿ ಕಾವೇರಿ ನೀರು ತರಿಸಿದರೆ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅಗತ್ಯಕ್ಕೆ ತಕ್ಕಷ್ಟು ನೀರನ್ನು ಪೂರೈಕೆ ಮಾಡಲು ಜಲಮಂಡಳಿಯು ನಿರ್ಧರಿಸಿದೆ.

ಕಾವೇರಿ ನೀರಿನ ಸೌಲಭ್ಯ ಪಡೆಯುವ ಅವಕಾಶಗಳಿದ್ದರೂ 3 ಲಕ್ಷ ಕುಟುಂಬಗಳು ಬೋರ್‌ ವೆಲ್‌ ನೀರನ್ನೇ ಆಶ್ರಯಿಸಲು ಹೆಚ್ಚಿನ ಒಲವು ತೋರುತ್ತಿದೆ. ಈ ಪ್ರದೇಶಗಳಿಗೆ ಸರ್ಕಾರವು ಉಚಿತವಾಗಿ ಬೋರ್‌ವೆಲ್‌ ನೀರನ್ನು ಹರಿಸುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

5ನೇ ಹಂತದ ಯೋಜನೆಯ ಕಾಮಗಾರಿ ಪೂರ್ಣಗೊಂಡಿದ್ದು, ಸದ್ಯ ಅಂತಿಮ ಹಂತದಲ್ಲಿ ಪರೀಕ್ಷಿಸುವ ಕಾರ್ಯಗಳು ನಡೆಸಲಾಗುತ್ತಿದೆ. ಆ ವೇಳೆ ಯಾವುದೇ ಸಮಸ್ಯೆಗಳು ಕಂಡು ಬಂದರೆ ಅದನ್ನು ಬಗೆಹರಿಸಲಾಗುವುದು. ಶೀಘ್ರದಲ್ಲೇ ಯೋಜನೆಗೆ ಚಾಲನೆ ನೀಡಲು ಸಿದ್ಧತೆಗಳು ಭರದಿಂದ ಸಾಗಿದೆ. ಡಾ.ವಿ.ರಾಮ್‌ ಪ್ರಸಾತ್‌ ಮನೋಹರ್‌, ಜಲಮಂಡಳಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next