Advertisement

Cauvery Issue: ಕುಡಿಯುವ ನೀರಿನಲ್ಲಿ ರಾಜಕೀಯ ಬೇಡ: ಜಗದೀಶ ಶೆಟ್ಟರ್

08:05 PM Sep 24, 2023 | Team Udayavani |

ರಬಕವಿ ಬನಹಟ್ಟಿ: ಕುಡಿಯುವ ನೀರಿನ ವಿಷಯದಲ್ಲಿ ರಾಜಕೀಯ ಬೆರೆಸದೆ ನಾವೆಲ್ಲರೂ ಒಗ್ಗಟ್ಟಾಗಿ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ. ರೈತರ ಹಿತಾಸಕ್ತಿಯನ್ನು ಕಡೆಗಣಿಸುತ್ತಿರುವುದು ಸರಿಯಾದುದಲ್ಲ. ಕಾವೇರಿ ವಿಷಯದಲ್ಲಿ ರಾಜ್ಯದ ಸಂಸದರು ಮೌನಕ್ಕೆ ಜಾರಿರುವುದು ಯಾವ ಕಾರಣಕ್ಕೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದರು.

Advertisement

ಭಾನುವಾರ ತಾಲ್ಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಮಾಜಿ ಉಪರಾಷ್ಟ್ರಪತಿ ಬಿ.ಡಿ.ಜತ್ತಿಯವರ 111ನೇ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಡಳಿತ ಸುಧಾರಾಣೆಗಾಗಿ 43 ತಾಲ್ಲೂಕುಗಳನ್ನು ಯಾವುದೇ ರೀತಿಯಲ್ಲಿ ಹಿಂದೇಟು ಹಾಕದೆ ನನ್ನಅಧಿಕಾರ ಅವಧಿಯಲ್ಲಿ ಘೋಷಣೆ ಮಾಡಿದ್ದೇನೆ. ಅದರಲ್ಲಿ36 ತಾಲ್ಲೂಕುಗಳು ಉತ್ತರ ಕರ್ನಾಟಕದಲ್ಲಿವೆ. ಭೌಗೋಳಿಕವಾಗಿ ಹತ್ತಿರವಿದ್ದರೂ ಆಡಳಿತದ ಅನುಕೂಲಕ್ಕಾಗಿ ರಚನೆ ಮಾಡಲಾಗಿದೆ. ಅವುಗಳಿಗೆ ಸೂಕ್ತ ಅನುದಾನ ನೀಡಿ ಅಭಿವೃದ್ಧಿ ಪಡಿಸಬೇಕಾಗಿದೆ.

ಸಮಾನತೆಗಾಗಿ 12ನೇ ಶತಮಾನದಿಂದಲೂ ಪ್ರಯತ್ನಗಳು ನಡೆದಿದ್ದು, ಕೊನೆಗೂ ಮಹಿಳೆಯರ ಸಮಾನತೆಗಾಗಿ ಮೀಸಲಾತಿ ಅನಿವಾರ್ಯವಾಯಿತೆಂದು ಎಂದು ಶೆಟ್ಟರ ತಿಳಿಸಿದರು.

ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿಶೇಷ ಅನುದಾನ ನೀಡಿ ಬಸವಣ್ಣನವರ ವಚನಗಳನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿ ಜಗತ್ತಿಗೆ ಪರಿಚಯ ಮಾಡಿರುವುದು ನೆಮ್ಮದಿಯ ವಿಷಯವಾಗಿದೆ. ಶರಣರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ರಾಜಕೀಯ ಮಾಡಿದವರು ಬಿ.ಡಿ. ಜತ್ತಿಯವರು ಎಂದು ಶೆಟ್ಟರ ತಿಳಿಸಿದರು.

Advertisement

ಅಥಣಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಉತ್ತಮ ಸಮಾಜದ ನಿರ್ಮಾಣ ಮಾಡುವಲ್ಲಿ ಜತ್ತಿ ಫೌಂಢೇಶನ್ ಉತ್ತಮ ಕಾರ್ಯ ಮಾಡುತ್ತಿದೆ. ರೈತರು ತಮ್ಮ ದುರಾಸೆಗಾಗಿ ಅಧಿಕ ಪ್ರಮಾಣದ ರಾಸಾಯನಿಕ ಹಾಗೂ ಇನ್ನೀತರ ವಸ್ತುಗಳ ಬಳಕೆಯಿಂದ ಜನರಿಗೆ ತೊಂದರೆಯಾಗುತ್ತಿದೆ. ಇದರಿಂದ ಸಮಾಜ ರೋಗಗ್ರಸ್ತವಾಗುತ್ತಿದೆ. ಇದರಿಂದಾಗಿ ಜನರು ವಿವಿಧ ರೋಗಗಳಿಂದ ಬಳಲುವಂತಾಗಿದೆ. ಉತ್ತಮ ಆಹಾರಗಳನ್ನು ಬೆಳೆಯುವುದರಿಂದ ರೋಗ ಮುಕ್ತ ಸಮಾಜವನ್ನು ನಿರ್ಮಾಣ ಮಾಡಬಹುದಾಗಿದೆ ಎಂದರು.

ಕಬ್ಬಿನ ಕಾರ್ಖಾನೆಯಲ್ಲಿ ರೈತರು ನೀಡುವ ಕಬ್ಬಿನಲ್ಲಿ ಮೋಸ ಮತ್ತು ಶೋಷಣೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ವಿಧಾನ ಪರಿಷತ್ತಿನಲ್ಲಿ ಚರ್ಚೆ ನಡೆಸಬೇಕು ಎಂದು ಸವದಿ ಶೆಟ್ಟರಿಗೆ ತಿಳಿಸಿದರು. ತಾವೂ ಕೂಡಾ ವಿಧಾನ ಸಭೆಯಲ್ಲಿ ಈ ಕುರಿತು ಚರ್ಚೆ ಮಾಡುವುದಾಗಿ ತಿಳಿಸಿದರು.

ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ತೊಂದರೆಯಾಗುವ ರೈತರಿಗೆ 522 ಮೀ, 524ಮೀ ಎಂದು ಪ್ರತ್ಯೇಕವಾಗಿ ಪರಿಹಾರ ನೀಡದೆ ಒಂದೇ ಬಾರಿಗೆ ಎಲ್ಲ ರೈತರಿಗೂ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.

ಜತ್ತಿ ಫೌಂಢೇಶನದ ಧೃವ ಜತ್ತಿ ಮಾತನಾಡಿದರು. ಇಳಕಲ್ ಗುರು ಮಹಾಂತ ಸ್ವಾಮೀಜಿ, ಹಿಪ್ಪರಗಿಯ ಪ್ರಭು ಬೆನ್ನಾಳೆ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ರಾಹುಲ ಐನಾಪುರ, ಸುನೀಲಕುಮಾರ ನೂಲಿ ಕೃಷಿ ಸಂವಾದ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next