Advertisement
ಚಂದ್ರಶೇಖರ್ ಕುಟುಂಬದವರು ಕೊಲೆ ಎಂದೇ ಹೇಳುತ್ತಿದ್ದಾರೆ. ಆದರೆ ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಮರಣೋತ್ತರ ಪರೀಕ್ಷೆ ವರದಿ ಬರುವವರೆಗೆ ಯಾವುದನ್ನೂ ಖಚಿತ ಪಡಿಸುವಂತಿಲ್ಲ. ಚಂದ್ರಶೇಖರ್ ಸಾವಿನ ಕುರಿತಂತೆ ಡಯಾಟಮ್ ಪರೀಕ್ಷೆ ವರದಿ ಪೊಲೀಸ್ ಇಲಾಖೆ ಕೈ ಸೇರಿದೆ ಎನ್ನಲಾಗುತ್ತಿದೆ. ಆದರೆ ಇಲಾಖೆ ಖಚಿತಪಡಿಸುತ್ತಿಲ್ಲ.
ಯಾರಾದರೂ ನೀರಿನಲ್ಲಿ ಮುಳುಗಿ ಸತ್ತರೆ ಶ್ವಾಸಕೋಶದಲ್ಲಿ ನೀರು ಸಂಗ್ರಹವಾಗಿರುತ್ತದೆ. ಸಾವಿನ ಬಳಿಕ ನೀರು ಶ್ವಾಸಕೋಶಕ್ಕೆ ಸೇರುವ ಸಾಧ್ಯತೆ ಇರುವುದಿಲ್ಲ. ಶವ ಪತ್ತೆಯಾಗಿರುವ ಜಾಗದ ನೀರು ಮತ್ತು ಶ್ವಾಸಕೋಶದಲ್ಲಿನ ನೀರನ್ನು ಪರೀಕ್ಷೆಗೆ ಒಳಪಡಿಸುವುದೇ ಡಯಾಟಮ್ ಪರೀಕ್ಷೆ. ಚಂದ್ರಶೇಖರ್ ಶವ ಪತ್ತೆಯಾದ ತುಂಗಾ ನಾಲೆಯ ಮತ್ತು ಶ್ವಾಸಕೋಶದಲ್ಲಿ ಸಂಗ್ರಹವಾಗಿದ್ದ ನೀರಿನ ಪರೀಕ್ಷೆ ನಡೆಸಲಾಗಿದೆ. ಮೂಲಗಳ ಪ್ರಕಾರ ಚಂದ್ರಶೇಖರ್ ಸಾವಿಗೂ ಮುನ್ನ ನಾಲೆಗೆ ಬಿದ್ದಿದ್ದು, ನಾಲೆಯ ನೀರು ಕುಡಿದಿದ್ದಾರೆ ಎನ್ನಲಾಗುತ್ತಿದೆ. ಆದರೆ ಸಂಬಂಧಿ ಸಿದವರು ಯಾವುದನ್ನೂ ಖಚಿತಪಡಿಸುತ್ತಿಲ್ಲ.