Advertisement
ಇತ್ತೀಚೆಗೆ ಮೀರಾ ಭಯಂದರ್ ಮುನ್ಸಿಪಲ್ ಕಾರ್ಪೊರೇಷನ್ ಯಾವುದೇ ಸೂಚನೆಯಿಲ್ಲದೆ ಮನೆಯೊಂದರಲ್ಲಿ ವಾಸಿಸುತ್ತಿದ್ದವರನ್ನು ಹೊರಹಾಕಿ ಕಟ್ಟಡವನ್ನು ನೆಲಸಮಗೊಳಿಸಲು ಬಂದಿದ್ದಾರೆ. ಇದರಿಂದ ಕುಟುಂಬದ ಮಹಿಳೆಯರು, ಮಕ್ಕಳು ಸೇರಿದಂತೆ ನಿವಾಸಿಗಳು ರಸ್ತೆಯಲ್ಲೇ ಪರದಾಡಬೇಕಾಗುವ ಸ್ಥಿತಿ ನಿರ್ಮಾಣವಾಗಿದ್ದು, ಈ ಕಷ್ಟವನ್ನು ಮಹಿಳೆಯೊಬ್ಬರು ಥಾಣೆ ಜಿಲ್ಲೆಯ ಮೀರಾ ಭಯಂದರ್‌ನ ಶಾಸಕಿ ಗೀತಾ ಜೈನ್ ಅವರ ಬಳಿ ಹೇಳಿದ್ದಾರೆ.
Related Articles
Advertisement
ಜೂನಿಯರ್ ಸಿವಿಕ್ ಎಂಜಿನಿಯರ್‌ಗಳು ನೆಲಸಮ ಮಾಡಿದ ಮನೆಯ ಒಂದು ಭಾಗ ಮಾತ್ರ ಅಕ್ರಮವಾಗಿದೆ ಮತ್ತು ಅದರ ನಿವಾಸಿಗಳು ಅಕ್ರಮ ಭಾಗವನ್ನು ತೆಗೆದುಹಾಕುವುದಾಗಿ ಭರವಸೆ ನೀಡಿದ್ದಾರೆ. ಮಹಿಳೆಯರು ಮನೆ ತೆರವನ್ನು ವಿರೋಧಿಸುವಾಗ ಅಧಿಕಾರಿಗಳು ಅವರ ಕೂದಲನ್ನು ಎಳೆದಿದ್ದಾರೆ. ಇಬ್ಬರು ಇಂಜಿನಿಯರ್‌ಗಳು ಬಿಲ್ಡರ್‌ಗಳ ಸಹಕಾರದೊಂದಿಗೆ ಖಾಸಗಿ ಜಮೀನಿನಲ್ಲಿ ನೆಲಸಮ ಕಾರ್ಯವನ್ನು ನಡೆಸುತ್ತಿದ್ದಾರೆ ಎಂದು ಗೀತಾ ಜೈನ್ ಹೇಳಿದ್ದಾರೆ. ತನ್ನ ಕೃತ್ಯಕ್ಕೆ ವಿಷಾದಿಸುವುದಿಲ್ಲ ಮತ್ತು ಯಾವುದೇ ಶಿಕ್ಷೆಯನ್ನು ಎದುರಿಸಲು ಸಿದ್ಧ ಎಂದು ಅವರು ಹೇಳಿದ್ದಾರೆ.
“ಈ ವಿಷಯವನ್ನು ನಾನು ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತೇನೆ. ಅವರು (ಕಪಾಳಮೋಕ್ಷ ಮಾಡಿದ ಎಂಜಿನಿಯರ್) ನನ್ನ ವಿರುದ್ಧ ಪ್ರಕರಣ ದಾಖಲಿಸಲಿ. ಅದನ್ನು ಎದುರಿಸಲು ನಾನು ಸಿದ್ಧನಿದ್ದೇನೆ. ಪೌರ ಅಧಿಕಾರಿಗಳು ಖಾಸಗಿ ಭೂಮಿಯಲ್ಲಿ ನಿರ್ಮಿಸಿದ ಕಟ್ಟಡಗಳನ್ನು ಕೆಡವುವುದನ್ನು ಹೇಗೆ ಸಹಿಸಿಕೊಳ್ಳುವುದು?” ಎಂದು ಶಾಸಕರು ಪ್ರಶ್ನಿಸಿದರು.
ಗೀತಾ ಜೈನ್ 2019 ರ ಅಸೆಂಬ್ಲಿ ಚುನಾವಣೆಯಲ್ಲಿ ಸ್ವತಂತ್ರವಾಗಿ ಗೆದ್ದರು ಆದರೆ ನಂತರ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾದ ನಂತರ ಶಿವಸೇನೆಗೆ ಬೆಂಬಲ ನೀಡಿದರು. ಆದರೆ, ಕಳೆದ ವರ್ಷ ಜೂನ್‌ನಲ್ಲಿ ಏಕನಾಥ್ ಶಿಂಧೆ ಬಂಡಾಯದ ನಂತರ ಗೀತಾ ಜೈನ್ ಈಗ ಭಾರತೀಯ ಜನತಾ ಪಕ್ಷದ ಪಾಳೆಯದಲ್ಲಿದ್ದಾರೆ.