ಭೋಪಾಲ್: ಇತ್ತೀಚಿನ ದಿನಗಳಲ್ಲಿ ಯುವ ಜನರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದೆ. ಅಂಥದ್ದೇ ಆಘಾತಕಾರಿ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಶನಿವಾರ(ಜೂ.17 ರಂದು) ಬರ್ವಾನಿಯಲ್ಲಿ ಈ ನಡೆದಿದ್ದು,ಎಕ್ಲಾರ ಬಸಾಹತ್ ನಿವಾಸಿ ಅಶೋಕ್ ಸೋಲಂಕಿ ಅವರು ಬೈಕ್ ಚಲಿಸಿಕೊಂಡು ಬರುವ ವೇಳೆಯೇ ಅವರಿಗೆ ಹೃದಯಾಘಾತ ಸಂಭವಿಸಿದೆ. ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಿದ ವಾಹನಗಳಿಗೆ ಢಿಕ್ಕಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆ ತಂದರೂ ಅವರು ಆದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: Kerala: ಹೃದಯಾಘಾತಕ್ಕೆ 8 ತಿಂಗಳ ಮಗು ಬಲಿ; ಆಸ್ಪತ್ರೆಯ ವಿರುದ್ಧ ಆರೋಗ್ಯ ಸಚಿವರಿಗೆ ದೂರು
ಘಟನೆ ಬಗ್ಗೆ ಮಾಹಿತಿ ತಿಳಿದ ಸಮಾಜ ಸೇವಕ ಅಜಿತ್ ಜೈನ್ ಅವರು ಸ್ಥಳಕ್ಕೆ ತಲುಪಿ ಆಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದರೆ ಆಂಬ್ಯುಲೆನ್ಸ್ ಟ್ರಾಫಿಕ್ ಕಾರಣದಿಂದ ವೇಗವಾಗಿ ಆಸ್ಪತ್ರೆಗೆ ತಲುಪಲು ಆಗಿಲ್ಲ ಎಂದು ವರದಿ ತಿಳಿಸಿದೆ.
ಮೃತ ಯುವಕ ಕೂಲಿ ಕೆಲಸ ಮಾಡುತ್ತಿದ್ದರು. ಎದೆ ನೋವು ಕಾರಣದಿಂದ ಆಸ್ಪತ್ರೆಗೆ ಹೋಗಿ ಬರುವುದಾಗಿ ಕೆಲಸ ಬಿಟ್ಟು ಬಂದಿದ್ದಾರೆ. ದಾರಿ ಮಧ್ಯ ಆತ ಮೆಡಿಕಲ್ ಗೆ ಹೋಗಿ ಮಾತ್ರೆವೊಂದನ್ನು ತೆಗೆದುಕೊಂಡಿದ್ದಾನೆ. ಮೆಡಿಕಲ್ ಸಿಬ್ಬಂದಿ ಆತನಿಗೆ ಆಸ್ಪತ್ರೆಗೆ ದಾಖಲಾಗುವಂತೇ ಹೇಳಿದ್ದಾರೆ. ಆತನ ಮಾತನ್ನು ಕೇಳಿ ಯುವಕ ಆಸ್ಪತ್ರೆಗೆ ದಾಖಲಾಗಲು ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಸಮಾಜ ಸೇವಕ ಅಜಿತ್ ಜೈನ್ ಹೇಳಿರುವುದಾಗಿ ವರದಿ ತಿಳಿಸಿದೆ.
ಘಟನೆಯ ವಿಡಿಯೋ ಅಂಗಡಿಯೊಂದರ ಸಿಸಿಟಿವಿಯಲ್ಲಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.