ಬೀಜಿಂಗ್: ಚೀನದ ಗುವಾಂಗ್‌ಡಾಂಗ್‌ನ ದಕ್ಷಿಣ ಪ್ರಾಂತ್ಯದ ಚಾಝೌ ನಗರದಲ್ಲಿ ಟೆಸ್ಲಾ ಕಂಪನಿಯ ಮಾಡಲ್ ವೈ ಆಟೋಮೆಟಿಕ್ ಕಾರು ಚಾಲಕನ ನಿಯಂತ್ರಣ ತಪ್ಪಿ ವೇಗವಾಗಿ ಚಲಿಸಿದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
ಸ್ಥಳೀಯ ಪೊಲೀಸರ ಸೂಚನೆ ಮೇರೆಗೆ ಟೆಸ್ಲಾ ಕಂಪನಿಯು ಮೂರನೇ ಮೌಲ್ಯಮಾಪನ ಸಂಸ್ಥೆಯ ನರೆವಿನೊಂದಿಗೆ ಘಟನೆಯಲ್ಲಿ ನಿಜವಾಗಿ ಏನು ನಡೆಯಿತು ಎಂಬುದನ್ನು ಪರಿಶೀಲನೆಗೆ ಮುಂದಾಗಿದೆ.
55 ವರ್ಷದ ವ್ಯಕ್ತಿಯೊಬ್ಬ ಕಾರು ಚಲಾಯಿಸಿಕೊಂಡು ಬಂದು, ಅಂಗಡಿಯೊಂದರ ಮುಂದೆ ಪಾರ್ಕ್ ಮಾಡಲು ಹೋಗುತ್ತಾರೆ. ಆದರೆ ಕಾರು ಇದಕ್ಕಿಂದಂತೆ ವೇಗವಾಗಿ ರಸ್ತೆಯಲ್ಲಿ ಚಲಿಸುತ್ತದೆ. ರಸ್ತೆ ಮತ್ತು ರಸ್ತೆ ಬದಿಯಲ್ಲಿ ಚಲಿಸುತ್ತಿದ್ದ ಬಾಲಕಿ ಸೇರಿದಂತೆ ಇಬ್ಬರು ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ. ಈ ಕುರಿತ ಸಿಸಿಟಿವಿ ದೃಶ್ಯಾವಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.