ಭೋಪಾಲ್ : ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರ ಕಾರು ಬೈಕ್ ವೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಮಧ್ಯ ಪ್ರದೇಶದ ರಾಜಗಢದಲ್ಲಿ ಗುರುವಾರ ( ಮಾ. 9 ರಂದು) ನಡೆದಿದೆ.
ದಿಗ್ವಿಜಯ್ ಸಿಂಗ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರಕಾಶ್ ಪುರೋಹಿತ್ ಅವರ ತಾಯಿ ನಿಧನರಾದ ಕಾರಣ ಅಂತಿಮ ದರ್ಶನ ಪಡೆದು ಮಧ್ಯಾಹ್ನ 3 ಗಂಟೆಗೆ ರಾಜಗಢಕ್ಕೆ ವಾಪಾಸ್ ಆಗುತ್ತಿದ್ದರು. ಈ ವೇಳೆ ಬೈಕ್ ಸವಾರನೊಬ್ಬ ವಿರುದ್ಧ ಧಿಕ್ಕಿನಲ್ಲಿ ಬರುವಾಗ ಏಕಾಏಕಿ ಬೈಕ್ ತಿರುಗಿಸಿದ್ದಾನೆ. ವೇಗದಲ್ಲಿದ್ದ ದಿಗ್ವಿಜಯ್ ಸಿಂಗ್ ಕಾರು ಬೈಕ್ ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಸವಾರನ ಜೀವ ಕಂಬಕ್ಕೆ ಹೋಗಿ ಬಡಿದಿದೆ.
ಘಟನೆ ನಡೆದ ಕೂಡಲೇ ದಿಗ್ವಿಜಯ್ ಸಿಂಗ್ ಕಾರಿನಿಂದ ಇಳಿದು ಸವಾರನನ್ನು ವಿಚಾರಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ. 20 ವರ್ಷದ ರಾಮ್‌ಬಾಬು ಅವರ ತಲೆಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಸ್ವರೂಪದ ಏಟಾಗಿದೆ. ಸಿಟಿ ಸ್ಕ್ಯಾನ್ ಗಾಗಿ ಬೇರೊಂದು ಆಸ್ಪತ್ರೆಗೆ ಗಾಯಾಳನ್ನು ರವಾನಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿ ತಿಳಿಸಿದೆ.
ಸಿಸಿಟಿವಿಯಲ್ಲಿ ಘಟನೆಯ ದೃಶ್ಯ ಸೆರೆಯಾಗಿದ್ದು, ದಿಗ್ವಿಜಯ್ ಸಿಂಗ್ ಅವರ ಕಾರು ಚಾಲಕ ಅಖ್ತರ್ ಖಾನ್ ನನ್ನು ಬಂಧಿಸಿ, ಕಾರನ್ನು ಜಪ್ತಿ ಮಾಡಲಾಗಿದೆ ಎಂದು ವರದಿಯಾಗಿದೆ.