Advertisement

ಜಾನುವಾರು ಹತ್ಯೆ ಪ್ರಕರಣ: 33ಕ್ಕೂ ಅಧಿಕ ಜನರು ವಶಕ್ಕೆ

12:15 PM Sep 03, 2017 | Team Udayavani |

ಹುನಗುಂದ(ಬಾಗಲಕೋಟೆ): ಪಟ್ಟಣದಲ್ಲಿ ಬಕ್ರೀದ್‌ ನಿಮಿತ್ತ ನಡೆದಿದೆ ಎನ್ನಲಾದ ಜಾನುವಾರು ಹತ್ಯೆ ಪ್ರಕರಣದ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಎರಡು ಗುಂಪುಗಳ ಮಧ್ಯೆ ಕಲ್ಲು ತೂರಾಟ ನಡೆದಿದೆ. ಇದರಿಂದ ಓರ್ವ ವ್ಯಕ್ತಿ
ಗಾಯಗೊಂಡಿದ್ದು, ಪೊಲೀಸರು 33ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ.

Advertisement

ಪಟ್ಟಣದ ಬಸ್‌ ನಿಲ್ದಾಣ ಹಿಂಬದಿಯ ಶಹಾನ್‌ ಷಾ ಓಣಿಯಲ್ಲಿ ಬಕ್ರೀದ್‌ ಹಬ್ಬದ ನಿಮಿತ್ತ ಜಾನುವಾರು ಬಲಿಕೊಡುತ್ತಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ಹಿಂದೂ ಪರ ಸಂಘಟನೆ ಯುವಕರು, ಜಾನುವಾರು ನಿಷೇಧ ಕಾಯ್ದೆ ಜಾರಿಯಲ್ಲಿದೆ, ಜಾನುವಾರು ಹತ್ಯೆ ಮಾಡಬೇಡಿ ಎಂದು ತಕರಾರು ತೆಗೆದಿದ್ದಾರೆ. ಇದಕ್ಕೆ ಸೊಪ್ಪು ಹಾಕದಿದ್ದಾಗ ಯುವಕರು, ಆ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ, ಇದು ಗಲಾಟೆ ತೀವ್ರಗೊಳ್ಳಲು ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಸುದ್ದಿ ಹರಡುತ್ತಿದ್ದಂತೆ ಮತ್ತಷ್ಟು ಜನ ಸೇರಿ ಕಲ್ಲು ತೂರಾಟ ನಡೆಸಿದ್ದಾರೆ. ಅದರಲ್ಲಿ ಓರ್ವ ಯುವಕನ ತಲೆಗೆ ಪೆಟ್ಟಾಗಿ,
ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌ ಹಿಂದೂ ಪರ ಸಂಘಟನೆಯ 5 ಹಾಗೂ ಮುಸ್ಲಿಂ ಸಮುದಾಯದ 28ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ
ನಡೆಸಿದ್ದಾರೆ. ಜತೆಗೆ ಶಾಂತಿ ಸುವ್ಯವಸ್ಥೆಗೆ ಸೂಚಿಸಿದ್ದು, ಘಟನೆಗೆ ಕಾರಣರಾದವರ ವಿರುದಟಛಿ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next