Advertisement

ಗುಡ್ಡಟ್ಟು: ಹತ್ತು ದಿನದ ಅಂತರದಲ್ಲಿ ಎರಡನೇ ಚಿರತೆ ಸೆರೆ

09:44 AM Dec 08, 2019 | keerthan |

ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಶಂಕರನಾರಯಣ ಅರಣ್ಯ ಇಲಾಖೆಯ ವ್ಯಾಪ್ತಿಯ ಗುಡ್ಡಟ್ಟು ಪ್ರದೇಶದಲ್ಲಿ ಹತ್ತು ದಿನದ ಅಂತರದಲ್ಲಿ ಎರಡೆನೇ ಚಿರತೆಯನ್ನು ಸೆರೆ ಹಿಡಿಯಲಾಗಿದೆ.

Advertisement

ಈ ಪರಿಸರದಲ್ಲಿ ಕಳೆದ ಆರು ತಿಂಗಳಿನಿಂದ ನಿರಂತರವಾಗಿ ಚಿರತೆ ಹಾವಳಿ ಪ್ರಕರಣಗಳು ಬರುತ್ತಿದ್ದು, ಕಳೆದ ಹತ್ತು ದಿನಗಳ ಹಿಂದೆಯಷ್ಟೆ ಚಿರತೆ ಸೆರೆಯಾಗಿತ್ತು.

ಸದ್ಯ ಸೆರೆಯಾದ ಚಿರತೆಯು ಕಳೆದ ಬಾರಿ ಚಿರತೆ ಸೆರೆಯಾದ ಚಂದ್ರಾವತಿ ಗುಡ್ಡೆಮನೆಯವರ ಜಾಗದಲ್ಲಿಯೇ ಸೆರೆಯಾಗಿದೆ. ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಸೆರೆಯಾದ ದಿನದಂದೆ ಇಂದು ಸೆರೆಯಾದ ಚಿರತೆ ಈ ಪ್ರದೇಶದಲ್ಲಿ ಭಯ ಹುಟ್ಟಿಸಿತ್ತು.

ಮತ್ತೆ ಪುನಃ ಚಿರತೆ ಓಡಾಟವಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮತ್ತೆ ಅದೇ ಜಾಗದಲ್ಲಿ ಬೋನಿಟ್ಟು ಮತ್ತೆ ಚಿರತೆಯನ್ನು ಸೆರೆ ಹಿಡಿದಿದ್ದಾರೆ.

Advertisement

ಚಿರತೆಯು ಸುಮಾರು 4ರಿಂದ 5 ವರ್ಷ ಪ್ರಾಯದ್ದಾಗಿದ್ದು, ಶಂಕರನಾರಾಯಣ ಅರಣ್ಯ ಇಲಾಖೆಯ ಸಿಬ್ಬಂದಿಗಳು ಚಿರತೆಯನ್ನು ಪರಿಶೀಲನೆ ನಡೆಸಿ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.


ಕಾರ್ಯಾಚರಣೆಯಲ್ಲಿ ಸಂತೋಷ್ ದೇವಾಡಿಗ, ರಮೇಶ್ ಗುಡ್ಡೆಮನೆ, ರವಿ ಮೊಗವೀರ, ಅರುಣ್ ಕುಮಾರ್ ಹೆಗ್ಡೆ, ಅರಣ್ಯ ರಕ್ಷಕರಾದ ಆನಂದ‌ಬಳೆಗಾರ, ಸಂತೋಷ ಜೋಗಿ, ರವೀಂದ್ರ, ಸುಧೀಪ ಶೆಟ್ಟಿ, ರವಿ ದೇವಾಡಿಗ, ಅರಣ್ಯ ವೀಕ್ಷಕರಾದ ಶಿವಣ್ಣ‌ವೇಷಗಾರ್, ಲಕ್ಷಣ ಮತ್ತು ವಾಹನ ಚಾಲಕ ರವಿ ಇವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next