Advertisement

ನಾಲ್ಕು ಕಿವಿಗಳುಳ್ಳ ಬೆಕ್ಕು ಈಗ ಫುಲ್ ಫೇಮಸ್‌

06:55 PM Nov 21, 2021 | Team Udayavani |

ಮನುಷ್ಯ, ಪ್ರಾಣಿ ಯಾವುದೇ ಆಗಲಿ, ಎಲ್ಲದಕ್ಕೂ ಎರಡೇ ಕಿವಿಗಳಿರುವುದು. ಆದರೆ ಟರ್ಕಿಯ ಅಂಕಾರಾದಲ್ಲಿರುವ ಬೆಕ್ಕೊಂದಕ್ಕೆ ನಾಲ್ಕು ಕಿವಿಗಳಿವೆ! ನಾಲ್ಕು ಕಿವಿಗಳಿರುವ ಆ ನಾಲ್ಕು ತಿಂಗಳ ಬೆಕ್ಕಿನ ಮರಿ ಮಿದಾಸ್‌ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್‌ ಆಗಿದೆ.

Advertisement

ರಸ್ತೆಯಲ್ಲಿದ್ದ ಬೆಕ್ಕಿನ ಮರಿಯನ್ನು ಕಂಡ ಕ್ಯಾನಿಸ್‌ ಡೋಸೆಮಸಿ ಹೆಸರಿನ ಮಹಿಳೆ ಅದನ್ನು ಮನೆಗೆ ತಂದು ಸಾಕಲಾರಂಭಿಸಿದ್ದಾರೆ.

ವಿಶೇಷವಾಗಿ ನಾಲ್ಕು ಕಿವಿಗಳಿದ್ದ ಆ ಬೆಕ್ಕಿಗೆ ಪುರಾಣ ಕಥೆಗಳಲ್ಲಿ ವಿಶೇಷ ಕಿವಿ ಹೊಂದಿದ್ದ ರಾಜ ಮಿದಾಸ್‌ನ ಹೆಸರನ್ನೇ ಇಡಲಾಗಿದೆ.

ಆ ಮುದ್ದಾದ ಬೆಕ್ಕಿನ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

ಅವುಗಳು ವೈರಲ್‌ ಆಗಿದ್ದು, ಇದೀಗ ಮಿದಾಸ್‌ ನೋಡಲೆಂದೇ ಸಾಕಷ್ಟು ಜನರು ಆಕೆಯ ಮನೆಗೆ ಬರುತ್ತಿದ್ದಾರಂತೆ.

Advertisement

ಇದನ್ನೂ ಓದಿ:ಕಡಬ: ಕಡ್ಯ ಕೊಣಾಜೆ ಪ್ರದೇಶದಲ್ಲಿ ಹಾಡಹಗಲೇ ಮನೆ ಅಂಗಳಕ್ಕೆ ನುಗ್ಗಿದ ಕಾಡಾನೆ

Advertisement

Udayavani is now on Telegram. Click here to join our channel and stay updated with the latest news.

Next