Advertisement

ಜಾತಿ ರಾಜಕಾರಣ ತೊಲಗಲಿ

04:31 PM Jun 05, 2017 | Team Udayavani |

ವಾಡಿ: ಜಾತಿ ನಾಶವಾಗಲಿ ಎಂದು ಶರಣು ಹೋರಾಡಿದರೆ, ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ರಾಜಕಾರಣ ಜಾತಿ ಬಲದ ಮೇಲೆಯೇ ನಿಂತಿದೆ. ಇದು ಆದಷ್ಟು ಬೇಗ ತೊಲಗಬೇಕು ಎಂದು ಚಿತ್ರದುರ್ಗ ಆದಿಜಾಂಬವ ಪೀಠದ ಪೂಜ್ಯ ಶ್ರೀ ಷಡಕ್ಷರಿಮುನಿ ದೇಶಿಕೇಂದ್ರ ಸ್ವಾಮೀಜಿ ನುಡಿದರು.

Advertisement

ಮಾಜಿ ಉಪಪ್ರಧಾನಿ ಡಾ| ಬಾಬು ಜಗಜೀವನರಾಂ ಅವರ 110ನೇ ಜಯಂತಿ ನಿಮಿತ್ತ ಮಾದಿಗ ಸಮಾಜದ ವತಿಯಿಂದ ಪಟ್ಟಣದ ಮಹಾತ್ಮಾಗಾಂ ಧಿ ವೃತ್ತದಲ್ಲಿ ಏರ್ಪಡಿಸಲಾಗಿದ್ದ ಮಾದಿಗರ ಮಹಾ ಸಮಾವೇಶದ ಸಾನ್ನಿಧ್ಯ ವಹಿಸಿ ಶ್ರೀಗಳು ಅಶೀರ್ವಚನ ನೀಡಿದರು. 

ತುಳಿತಕ್ಕೊಳಗಾದ ಜಾತಿಯ ಜನಾಂಗವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲೆತ್ತಬೇಕಾದ ಇಂದಿನ ರಾಜಕಾರಣಿಗಳು, ಜಾತ್ಯತೀತತೆ ಹೆಸರಿನಲ್ಲಿ ಜಾತಿ ರಾಜಕಾರಣವನ್ನೇ ಮಾಡಿಕೊಂಡು ಬರುತ್ತಿವೆ. ಇದು ಸಮಾಜದ ಪ್ರಗತಿಗೆ ಅಡ್ಡಿಯಾಗುತ್ತಿದೆ ಎಂದು ಹೇಳಿದರು.  

ಮಾಜಿ ಶಾಸಕ ವಾಲ್ಮೀಕಿ ನಾಯಕ ಮಾತನಾಡಿ, ದಲಿತರು ಶಿಕ್ಷಣ ಸೌಲಭ್ಯದ ಲಾಭ ಪಡೆದು ಅಧಿ ಕಾರದ ಚುಕ್ಕಾಣಿ ಹಿಡಿಯಬೇಕು. ಅನ್ಯಾಯದ ವಿರುದ್ಧ ಪ್ರತಿಭಟಿಸಿ ಸಾಮಾಜಿಕವಾಗಿ ಜಾಗೃತರಾಗಬೇಕು ಎಂದು ಹೇಳಿದರು. ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ, ಮಾದಿಗ ಸಮಾಜದ ಹಿರಿಯ ಮುಖಂಡ ರಾಜು ಮುಕ್ಕಣ್ಣ ಮಾತನಾಡಿದರು. 

ಎಸಿಸಿ ಕಾರ್ಖಾನೆಯ ಸೌತ್‌ ಕ್ಲಸ್ಟರ್‌ ಹೆಡ್‌ ಡಾ| ಎಸ್‌.ಬಿ.ಸಿಂಗ್‌, ಉದಯಕುಮಾರ ಪವಾರ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ರಿಚ್ಚರ್ಡ್‌ ಮರೆಡ್ಡಿ, ಗೌರವಾಧ್ಯಕ್ಷ ಚಂದಪ್ಪ ಕಟ್ಟಿಮನಿ, ಮುಖಂಡರಾದ ಪರಶುರಾಮ ಕಟ್ಟಿಮನಿ, ಶರನಪ್ಪ ಪಗಲಾಪುರ, ರವಿ ಹೊಸಮನಿ, ದಶರಥ ಕಲಗುರ್ತಿ, ಶಿವಲಿಂಗಪ್ಪ ಪುಟಗಿ, ಖಂಡೆಪ್ಪ ದಾಸನ, ಜಯಪ್ರಕಾಶ ಪವಾರ ಮತ್ತಿತರರು ಪಾಲ್ಗೊಂಡಿದ್ದರು. 

Advertisement

ಪುರಸಭೆ ಸದಸ್ಯ ದೇವಿಂದ್ರ ಕರದಳ್ಳಿ ಸ್ವಾಗತಿಸಿದರು. ಗುರುನಾಥ ಮಣಿಗಿರಿ ನಿರೂಪಿಸಿ, ವಂದಿಸಿದರು. ಸಂಜೆ ಡಾ| ಬಾಬು ಜಗಜೀವನರಾಂ ಅವರ ಭಾವಚಿತ್ರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ನಡೆಯಿತು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಮಾದಿಗ ಸಮಾಜದ ಸಾವಿರಾರು ಜನರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next