Advertisement

ಜಾತಿ ಪ್ರಮಾಣಪತ್ರ ಪ್ರಕರಣ: ಸಮೀರ್‌ ವಾಂಖೆಡೆ ಮುಸ್ಲಿಂ ಸಮುದಾಯದವರಲ್ಲ’

10:04 PM Aug 13, 2022 | Shreeram Nayak |

ಮುಂಬೈ: ನಾರ್ಕೋಟಿಕ್ಸ್‌ ನಿಯಂತ್ರಣ ಬ್ಯೂರೋ(ಎನ್‌ಸಿಬಿ)ದ ಮುಂಬೈ ವಿಭಾಗದ ಮಾಜಿ ನಿರ್ದೇಶಕ ಸಮೀರ್‌ ವಾಂಖೆಡೆ ಅವರ ಮೇಲಿದ್ದ ನಕಲಿ ಜಾತಿ ಪ್ರಮಾಣಪತ್ರದ ಆರೋಪವನ್ನು ಜಾತಿ ಪರಿಶೀಲನಾ ಸಮಿತಿಯು ತಳ್ಳಿ ಹಾಕಿದೆ.

Advertisement

ಸಮೀರ್‌ ಅವರು ಮುಸ್ಲಿಂ ಸಮುದಾಯದವರಲ್ಲ, ಬದಲಾಗಿ ಹಿಂದೂ ಧರ್ಮದ ಪರಿಶಿಷ್ಟ ಜಾತಿಯವರು ಎಂದು ಸಮಿತಿಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಸಮೀರ್‌ ಇಸ್ಲಾಂ ಧರ್ಮದವರಾಗಿದ್ದು, ಸರ್ಕಾರಿ ಕೆಲಸಕ್ಕಾಗಿ ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆಂದು ಮಹಾರಾಷ್ಟ್ರದ ಮಾಜಿ ಸಚಿವ, ಎನ್‌ಸಿಪಿ ನಾಯಕ ನವಾಬ್‌ ಮಲಿಕ್‌ ದೂರು ದಾಖಲಿಸಿದ್ದರು. ಆ ಹಿನ್ನೆಲೆ ಜಾತಿ ಸಮಿತಿ ಸೂಕ್ತ ಪರಿಶೀಲನೆ ನಡೆಸಿದೆ. ಸಮೀರ್‌ ಮತ್ತು ಅವರ ತಂದೆ ಪರಿಶಿಷ್ಟ ಮಹರ್‌ ಜಾತಿಯವರು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next