Advertisement

ಬಿಹಾರದಲ್ಲಿ ಇಂದಿನಿಂದ ಜಾತಿ ಆಧಾರಿತ ಜನಗಣತಿ ಆರಂಭ

09:53 PM Jan 07, 2023 | Team Udayavani |

ಪಾಟ್ನಾ : ಪ್ರತಿಪಕ್ಷಗಳ ವಿರೋಧದ ನಡುವೆಯೇ ಬಿಹಾರದಲ್ಲಿ ಶನಿವಾರ ಜಾತಿ ಆಧಾರಿತ ಜನಗಣತಿ ಅಧಿಕೃತವಾಗಿ ಆರಂಭಗೊಂಡಿದೆ.

Advertisement

ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿಯೂ ಇದು ಮಹತ್ವ ಪಡೆದುಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಹಾರ ಡಿಸಿಎಂ ತೇಜಸ್ವಿ ಯಾದವ್‌ “ಇದೊಂದು ಐತಿಹಾಸಿಕ ಹೆಜ್ಜೆ’ ಎಂದು ಬಣ್ಣಿಸಿದ್ದಾರೆ.

ಒಟ್ಟು 2 ಹಂತಗಳಲ್ಲಿ ನಡೆಯಲಿರುವ ಯೋಜನೆ ಮೇನಲ್ಲಿ ಮುಕ್ತಾಯಗೊಳ್ಳಲಿದೆ. 1932ರಲ್ಲಿ ನಡೆಸಲಾಗಿದ್ದ ಜಾತಿಗಣತಿಯ ಪ್ರಕಾರ ದೇಶದಲ್ಲಿ ಒಬಿಸಿ ಸಮುದಾಯದವರು ಶೇ.52 ಮಂದಿ ಇದ್ದಾರೆ.

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಸಾಮಾಜಿಕ ಮತ್ತು ಆರ್ಥಿಕ ಗಣತಿಯನ್ನು 2011ರಲ್ಲಿ ನಡೆಸಿದ್ದರೂ, ಅದರ ಮಾಹಿತಿ ಬಿಡುಗಡೆ ಮಾಡಲಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next