Advertisement

ಆನ್‌ಲೈನ್‌ನಲ್ಲಿ ಜಾತಿ, ಆದಾಯ ಪ್ರಮಾಣ ಪತ್ರ

09:42 AM Jan 31, 2018 | |

ಬೆಂಗಳೂರು: ಜಾತಿ ಹಾಗೂ ಆದಾಯ ಪ್ರಮಾಣ ಪತ್ರ, ವಾಸ ದೃಢೀಕರಣ ಪತ್ರ ಇನ್ಮುಂದೆ ಆನ್‌ಲೈನ್‌ನಲ್ಲೇ ಪಡೆಯಬಹುದು. ಜಾತಿ ಹಾಗೂ ಆದಾಯ ಪ್ರಮಾಣ ಪತ್ರ, ವಾಸ ದೃಢೀಕರಣ ಪತ್ರ ಆನ್‌ಲೈನ್‌ ಮೂಲಕ ತಾವಿರುವ ಸ್ಥಳದಲ್ಲೇ ಅಥವಾ ಸೈಬರ್‌ ಕೆಫೆಯಲ್ಲಿ ಪಡೆಯಲು ಅನುಕೂಲವಾಗುವಂತೆ ಕಂದಾಯ ಇಲಾಖೆ ಸಾಫ್ಟ್ವೇರ್‌ ಸಿದ್ಧಪಡಿಸಿದೆ. ಅಲ್ಲದೇ, ರಾಜ್ಯದ 30 ಜಿಲ್ಲೆಗಳ ನಾಲ್ಕು ಕೋಟಿ ವೈಯಕ್ತಿಕ ಹಾಗೂ 80 ಲಕ್ಷ ಕುಟುಂಬಗಳ ಜಾತಿ, ಆದಾಯ, ವಾಸ ದೃಢೀಕರಣ ಪತ್ರ ಸಿದ್ಧಪಡಿಸಿದೆ.

Advertisement

ದೇಶದಲ್ಲೇ ಮೊದಲ ಬಾರಿಗೆ ಇಂತದ್ದೊಂದು ವ್ಯವಸ್ಥೆ ಜಾರಿಗೆ ತರಲಾಗಿದ್ದು, ಸಾರ್ವಜನಿಕರು ದಿನದ 24 ಗಂಟೆ ಎಲ್ಲೇ ಇದ್ದರೂ ತಮಗೆ ಬೇಕಾದ ಜಾತಿ, ಆದಾಯ ಪ್ರಮಾಣ ಪತ್ರ ಹಾಗೂ ವಾಸ ದೃಢೀಕರಣ ಪತ್ರ ಪಡೆಯಬಹುದು ಎಂದು ಕಂದಾಯ ಇಲಾಖೆಯ
ಭೂಮಿ ವಿಭಾಗದ ನಿರ್ದೇಶಕ ಮುನೀಷ್‌ ಮೌದ್ಗಿಲ್‌ ತಿಳಿಸಿದ್ದಾರೆ. ಈ ಹಿಂದೆ ಕಂದಾಯ ಇಲಾಖೆ ಪ್ರತಿವರ್ಷ 800 ನಾಡಕಚೇರಿಗಳ ಮೂಲಕ ಒಂದು ಕೋಟಿಯಷ್ಟು ಜಾತಿ, ಆದಾಯ ಪ್ರಮಾಣ ಪತ್ರ, ವಾಸ ದೃಢೀಕರಣ ಪತ್ರ ವಿತರಿಸುತ್ತಿತ್ತು. ಅರ್ಜಿ ಸ್ವೀಕರಿಸಿದ ನಂತರ ಗ್ರಾಮ ಲೆಕ್ಕಿಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರವೇ ನೀಡಲಾಗುತ್ತಿತ್ತು. ಆದರೆ, ಇದೀಗ ನಾಗರಿಕರು ತಾವಿರುವ
ಸ್ಥಳದಲ್ಲೇ ಆನ್‌ಲೈನ್‌ ಮೂಲಕ ಪಡೆಯಬಹುದು ಎಂದು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗೆ www.nadakacheri.karnataka.gov.in/ ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next