Advertisement

ಫಾಸ್ಟಾಗ್‌ನಿಂದ ಶುಲ್ಕ ಸಂಗ್ರಹ ಹೆಚ್ಚು ; ನಗದು ಮೂಲಕ ಶುಲ್ಕ ಸಂಗ್ರಹ ಶೇ.30ಕ್ಕೆ ಕುಸಿತ

09:55 AM Dec 28, 2019 | |

ಹೊಸದಿಲ್ಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟಾಗ್‌ ಮೂಲಕ ಟೋಲ್‌ ಸಂಗ್ರಹ ಮಾಡಲು ಶುರು ಮಾಡಿದ ಬಳಿಕ ಆದಾಯ ಪ್ರಮಾಣ ಹೆಚ್ಚಾಗಿದೆ. ನವೆಂಬರ್‌ನಲ್ಲಿ ಪ್ರತಿ ದಿನ 26.4 ಕೋಟಿ ರೂ. ಸಂಗ್ರಹವಾಗುತ್ತಿದ್ದದ್ದು, ಈ ತಿಂಗಳ ಮೂರನೇ ವಾರದ ವೇಳೆಗೆ ಅದರ ಪ್ರಮಾಣ ಪ್ರತಿ ದಿನ 44 ಕೋಟಿ ರೂ.ಗೆ ಏರಿಕೆಯಾಗಿದೆ.

Advertisement

ಈ ಅವಧಿಯಲ್ಲಿ ನಗದು ಮೂಲಕ ಟೋಲ್‌ ಸಂಗ್ರಹ ಶೇ.30ರಷ್ಟು ಕುಸಿದಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಫಾಸ್ಟ್‌ಟ್ಯಾಗ್‌ ಅಳವಡಿಸಿಕೊಳ್ಳಲಿರುವುದರಿಂದ ಮೊತ್ತ ಸಂಗ್ರಹ ಪ್ರಮಾಣ ಹೆಚ್ಚಾಗಲಿದೆ ಎಂಬ ವಿಶ್ವಾಸದಲ್ಲಿದೆ ಕೇಂದ್ರ ಸರಕಾರ.

ಹೆಚ್ಚಳ: ಫಾಸ್ಟಾಗ್‌ ಮೂಲಕ ಶುಲ್ಕ ಪಾವತಿ ಮಾಡುವ ವಾಹನಗಳ ಸಂಖ್ಯೆ ಡಿ.1 ರಂದು 19.5 ಲಕ್ಷ ಇದ್ದದ್ದು 16ರ ವೇಳೆಗೆ 24.8 ಲಕ್ಷಕ್ಕೆ ಏರಿಕೆಯಾಗಿದೆ. ಹೀಗಾಗಿ ಜನರು ಹೊಸ ವ್ಯವಸ್ಥೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಒಪ್ಪಿಕೊಂಡಿದ್ದಾರೆ ಎನ್ನುವುದು ಕೇಂದ್ರದ ಪ್ರತಿಪಾದನೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವ ಟೋಲ್‌ಗ‌ಳಲ್ಲಿ ಪ್ರತಿ ದಿನಕ್ಕೆ 60 ಲಕ್ಷಕ್ಕೂ ಅಧಿಕ ವಾಹನಗಳಿಂದ ಶುಲ್ಕ ಸಂಗ್ರಹ ಮಾಡುವ ಸಾಮರ್ಥ್ಯ ಹೊಂದಿವೆ. ದೇಶಾ ದ್ಯಂತ ಸುಮಾರು 20 ಕೋಟಿ ನೋಂದಾಯಿತ ವಾಹನಗಳು ಇದ್ದು, ಈ ಪೈಕಿ 6 ಕೋಟಿ ನಾಲ್ಕು ಚಕ್ರ ವಾಹನಗಳೇ ಇವೆ.

ಕದ್ದ ಕಾರು ಪತ್ತೆ
ಕಳವಾಗಿರುವ ವಾಹನ ಪತ್ತೆ ಮಾಡಲೂ ಫಾಸ್ಟಾಗ್‌ ನೆರವಾಗಿದೆ. ಆಗಸ್ಟ್‌ನಲ್ಲಿ ಪುಣೆ ಬಿಲ್ಡರ್‌ ರಾಜೇಂದ್ರ ಜಗ್ತಾಪ್‌, ಮಹೀಂದ್ರಾ ಸ್ಕಾರ್ಪಿಯೊ ಖರೀದಿಸಿದ್ದರು ಬಳಿಕ ಅದು ಕಳವಾಗಿತ್ತು. ಡಿ.23ರಂದು ಎರಡು ಬಾರಿ ಫಾಸ್ಟಾಗ್‌ ಮೂಲಕ ಹಣ ಕಡಿತಗೊಂಡ ಸಂದೇಶ ಮೊಬೈಲ್‌ಗೆ ಬಂದಿದೆ.

Advertisement

ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆ ಮಾಹಿತಿಯನ್ವಯ, ವಾಹನ ಹೋದ ಜಾಗವನ್ನು ಜಿಪಿಎಸ್‌ ಮೂಲಕ ಹಿಂಬಾಲಿಸಿದ್ದಾರೆ. ಥಾಣೆಯ ಎಸ್ಟೇಟೊಂದರಲ್ಲಿ ಕಾರು ಪತ್ತೆಯಾಗಿದೆ. ಕಳ್ಳರು ಕಾರನ್ನು ಬಿಟ್ಟು ಓಡಿಹೋಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next