Advertisement
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನ ಎಲ್ಲ ಸಿಟಿ ಬಸ್‌ಗಳಲ್ಲಿ ಕಾರ್ಡ್ ಮಾನ್ಯವಿರುತ್ತದೆ ಎಂದರು. ದೈನಂದಿನ ಪ್ರಯಾಣಿಕರು ಒಂದು ಟ್ರಿಪ್‌ಗೆ 10 ರೂ. ಪಾವತಿ ಮಾಡುತ್ತಾರೆ. ಸೂಪರ್ ಸೇವರ್ 399 ಯೋಜನೆಯ ಕಾರ್ಡ್‌ನೊಂದಿಗೆ ಅವರು 28 ದಿನಗಳಲ್ಲಿ 100 ಟ್ರಿಪ್ ಪ್ರಯಾಣಿಸಲು ಅವಕಾಶವಿದೆ. ಅವರು ಪ್ರತಿ ಟ್ರಿಪ್‌ಗೆ ಕೇವಲ 3.99 ರೂ. ನೀಡಿದಂತಾಗುತ್ತದೆ. ಈ ಪ್ಲಾನ್‌ಗಳನ್ನು 1 ದಿನದಲ್ಲಿ ಗರಿಷ್ಠ 4 ಟ್ರಿಪ್‌ಗ್ಳಿಗೆ ಉಪಯೋಗಿಸಲು ಅವಕಾಶವಿದೆ ಎಂದು ಅವರು ಹೇಳಿದರು.
ಶಾಲಾ-ಕಾಲೇಜುಗಳು ಆರಂಭದ ಬಳಿಕ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಸ್ ಪಾಸ್ ವ್ಯವಸ್ಥೆ ಜಾರಿಗೊಳಿಸುತ್ತೇವೆ. ನ. 14ರಂದು ಈ ವ್ಯವಸ್ಥೆಗೆ ಚಾಲನೆ ನೀಡಲಿದ್ದು, ಶೈಕ್ಷಣಿಕ ಅವಧಿಗೆ ಅನುಗುಣವಾಗಿ ಯೋಜನೆ ರೂಪಿಸುತ್ತೇವೆ. ಒಂದನೇ ತರಗತಿಯಿಂದ ಪಿಯುಸಿವರಗೆ ಮತ್ತು ಪದವಿ ವಿಭಾಗವಾಗಿ ವಿಂಗಡಿಸುತ್ತೇವೆ ಎಂದರು.
Related Articles
Advertisement
ಕಾರ್ಡ್ ಆಫರ್ ಏನಿದೆ?20 ರೂ. ಮೌಲ್ಯದ ಹೊಸ ಚಲೋ ಕಾರ್ಡನ್ನು ಪಡೆದು ಯಾವುದೇ ಮೊತ್ತಕ್ಕೆ ರೀಚಾರ್ಜ್ ಮಾಡಬಹುದು. 50 ರೂ. ಮೌಲ್ಯದ ಹೊಸ ಚಲೋ ಕಾರ್ಡ ಅನ್ನು ಪಡೆದು ವಾಲೆಟ್‌ನಲ್ಲಿ 30 ರೂ. ಬ್ಯಾಲೆನ್ಸ್ ಪಡೆಯಬಹುದಾಗಿದೆ. 100 ರೂ. ಮೌಲ್ಯದ ಕಾರ್ಡ್‌ನಲ್ಲಿ 80 ರೂ., 200 ರೂ. ರೀಚಾರ್ಚ್‌ನಲ್ಲಿ 210 ರೂ., 500 ರೂ. ರೀಚಾರ್ಚ್‌ನಲ್ಲಿ 550 ರೂ., 1,000 ರೂ. ರೀಚಾರ್ಚ್‌ನಲ್ಲಿ 1100 ರೂ. ಪಡೆಯಬಹುದಾಗಿದೆ ಎಂದು ದಿಲ್‌ರಾಜ್ ಆಳ್ವ ಹೇಳಿದರು.