Advertisement

ಅಮೆಜಾನ್‌ನಲ್ಲಿ “ಕ್ಯಾಶ್‌ಲೆಸ್‌’ಮಳಿಗೆ!

06:25 AM Jan 23, 2018 | Harsha Rao |

ವಾಷಿಂಗ್ಟನ್‌: ಹೆಸರಾಂತ ಆನ್‌ಲೈನ್‌ ಮಾರಾಟ ಸಂಸ್ಥೆ “ಅಮೆಜಾನ್‌’, ಸದ್ಯದಲ್ಲೇ ಅಮೆರಿಕದ ಸೀಟಲ್‌ ನಗರದಲ್ಲಿ ಒಂದು ಪ್ರಾಯೋಗಿಕ ದಿನಸಿ ಮಳಿಗೆ (ಶೋರೂಂ)ಯನ್ನು ತೆರೆಯಲಿದೆ. ಇದರ ವಿಶೇಷತೆಯೇ ನೆಂದರೆ, ಇದರಲ್ಲಿ ಕ್ಯಾಶ್‌ ಕೌಂಟರೇ ಇಲ್ಲ! ವಿಷಯ ಏನಂದ್ರೆ, ಅಮೆಜಾನ್‌ ಗೋ ಎಂಬ ಆ್ಯಪ್‌ ಅನ್ನು ಗ್ರಾಹಕರು ತಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡಿರಬೇಕು ಹಾಗೂ ಆ ಆ್ಯಪ್‌ನಲ್ಲಿ ಬರುವ ಅಮೆಜಾನ್‌ ಅಕೌಂಟ್‌ನಲ್ಲಿ ಹಣ ತುಂಬಿರಬೇಕು.

Advertisement

ಮಳಿಗೆ ಪ್ರವೇಶಿಸುತ್ತಿದ್ದಂತೆ, ಮಳಿಗೆಯಲ್ಲಿರುವ ವಿಶೇಷ ಸೆನ್ಸರ್ಸ್‌ ಹಾಗೂ ಸ್ಕ್ಯಾನರ್‌ಗಳು ನಿಮ್ಮನ್ನು ಗುರುತಿಸಿ, ಅಂಗಡಿಯಲ್ಲಿ ನೀವು ಯಾವ ಶೆಲ್ಫ್ನಿಂದ ಯಾವ ಸಾಮಗ್ರಿಯನ್ನು, ಎಷ್ಟೆಷ್ಟು ಆಯ್ಕೆ ಮಾಡಿದ್ದೀರೆಂದು ಲೆಕ್ಕ ಇಡುತ್ತವೆ. ಅವೆಲ್ಲವೂ ಚಿತ್ರದ ರೂಪದಲ್ಲಿ ನಿಮ್ಮ ಮೊಬೈಲ್‌ನಲ್ಲಿರುವ ಅಮೆಜಾನ್‌ ಗೋ ಆ್ಯಪ್‌ನ ಬಾಸ್ಕೆಟ್‌ನಲ್ಲಿ ಪಟ್ಟಿಯಾಗುತ್ತವೆ.

ಮಳಿಗೆಯಿಂದ ಹೊರಬರುವಾಗ, ಆ್ಯಪ್‌ ಬಾಸ್ಕೆಟ್‌ನಲ್ಲಿರುವ ಚೆಕ್‌ಔಟ್‌ ಐಕಾನ್‌ ಒತ್ತಿದಾಗ ಕ್ಯುಆರ್‌ ಕೋಡ್‌ ಮೂಡುತ್ತದೆ. ಅದನ್ನು ದ್ವಾರದ ಬಳಿಯಿರುವ ವಿಶಾಲ ಸೆನ್ಸರ್‌ ಕಡೆಗೆ ತೋರಿದರೆ, ನೀವು ಕೊಂಡ ಸಾಮಗ್ರಿಗಳ ಹಣವು ನಿಮ್ಮ ಅಮೆಜಾನ್‌ ಅಕೌಂಟ್‌ನಿಂದ ಕಡಿತಗೊಳ್ಳುತ್ತದೆ. ಅಷ್ಟೇ, ಶಾಪಿಂಗ್‌ ಮುಗೀತು!

Advertisement

Udayavani is now on Telegram. Click here to join our channel and stay updated with the latest news.