Advertisement

ಗೇರಿನ ರಕ್ಷಣೆಗೆ ಬಂದಿದೆ “ಕ್ಯಾಶ್ಯೂ ಪ್ರೊಟೆಕ್ಟ್’

11:19 PM Feb 20, 2023 | Team Udayavani |

ಪುತ್ತೂರು: ಇಲ್ಲಿನ ರಾಷ್ಟ್ರೀಯ ಗೇರು ಸಂಶೋಧನ ಕೇಂದ್ರವು ಗೇರು ಕೃಷಿಕರಿಗೆ ಅನುಕೂಲವಾಗುವಂತೆ “ಕ್ಯಾಶ್ಯೂ ಪ್ರೊಟೆಕ್ಟ್’ ಜಾಲತಾಣ ಹಾಗೂ ಕಿರುತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ.

Advertisement

ಕೃಷಿಕರಿಗೆ ಗೂಗಲ್‌ ಪ್ಲೇಸ್ಟೋರ್‌ನಲ್ಲಿ https://cashewprotect.icar.gov.in ಮತ್ತು ಆ್ಯಪಲ್‌ ಪ್ಲೇಸ್ಟೋರಿನಲ್ಲಿ Cashew Protect ಹೆಸರಿನಲ್ಲಿ ಕಿರುತಂತ್ರಾಂಶ ಲಭ್ಯ.
ಗೇರು ಸಂಶೋಧನ ಕೇಂದ್ರದ ವಿಜ್ಞಾನಿಗಳಿಗೆ ಹಲವಾರು ಕೃಷಿಕರು ಛಾಯಾಚಿತ್ರಗಳನ್ನು ಕಳುಹಿಸಿ ಪರಿಹಾರ ಕೇಳುತ್ತಾರೆ. ಆದರೆ ಈ ವ್ಯವಸ್ಥೆಯನ್ನು ನಿರಂತರವಾಗಿ ನಿರ್ವಹಣೆ ಮಾಡುವುದು ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ಜಾಲತಾಣವನ್ನು ನಿರ್ಮಿಸಲಾಗಿದ್ದು, ಈ ಮೂಲಕ ಕೃಷಿಕರು ಸುಲಭವಾಗಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ.

ಕೃಷಿಕರು ಫೋಟೋ ತೆಗೆದು ಅಪ್‌ಲೋಡ್‌ ಮಾಡಿದ ತತ್‌ಕ್ಷಣ ಪರಿಹಾರ ಪಡೆಯಬಹುದು. ಫೋಟೋದಲ್ಲಿರುವ ಬಾಧೆಯನ್ನು ಹೋಲುವ ಅಥವಾ ಅತ್ಯಂತ ಹತ್ತಿರ ಇರುವ ಬಾಧೆಯನ್ನು ತಂತ್ರಾಂಶ ಫೋಟೋ ಸಮೇತ ನೀಡಿ ಶೇಕಡ ಎಷ್ಟು ಹೋಲುತ್ತದೆ ಎಂಬುದನ್ನೂ ತಿಳಿಸುತ್ತದೆ. ಜತೆಗೆ ಬಾಧೆಯ ಗುಣಲಕ್ಷಣಗಳನ್ನು ಹಾಗೂ ಪರಿಹಾರೋಪಾಯಗಳನ್ನೂ ಸೂಚಿಸು
ತ್ತದೆ. ಇದು ಸಮಾಧಾನ ನೀಡದಿದ್ದರೆ ಸಂಬಂಧಪಟ್ಟ ತಜ್ಞರಿಗೂ ಚಿತ್ರಗಳನ್ನು ಕಳುಹಿಸಿ ಉತ್ತರಗಳನ್ನು ಪಡೆಯಬಹುದು.

ಗೇರಿಗೆ ಬಾಧೆ ನೀಡುವ 60 ಕೀಟ, 20 ರೋಗ ಹಾಗೂ ಹತ್ತು ಪೋಷಕಾಂಶಗಳ ಕೊರತೆಯನ್ನು ಪತ್ತೆ ಹಚ್ಚಿ ಪರಿಹಾರ ನೀಡುವ ಉದ್ದೇಶ ಹೊಂದಿದೆ. ಸದ್ಯಕ್ಕೆ 6 ಕೀಟಗಳು (ಚಹಾ ಸೊಳ್ಳೆ, ಕಾಂಡ ಹಾಗೂ ಬೇರು ಕೊರಕ, ಹಿಟ್ಟು ತಿಗಣೆ, ಎಲೆಕೊರಕ, ರಸ ಹೀರುವ ಕೀಟ, ಹಣ್ಣು ಮತ್ತು ಕಾಯಿಕೊರಕ) ಹಾಗೂ 1 ರೋಗವನ್ನು ಮಾತ್ರ ಪತ್ತೆಹಚ್ಚುತ್ತದೆ. ಕನ್ನಡ, ಮಲಯಾಳ, ಇಂಗ್ಲಿಷ್‌, ಹಿಂದಿ ಸಹಿತ 11 ಭಾಷೆಗಳಲ್ಲಿ ಮಾಹಿತಿಯನ್ನು ಅಳವಡಿಸಲಾಗಿದೆ.

ಜಗತ್ತಿನಲ್ಲೇ ಮೊದಲು
ಜಗತ್ತಿನ ಯಾವ ಎಐ ಆ್ಯಪ್‌ನಲ್ಲೂ ಗೇರು ಇಲ್ಲದಿರುವುದನ್ನು ಮನಗಂಡು ಅಧ್ಯಯನ ಮಾಡಿ ಪ್ರಾಜೆಕ್ಟ್ ವರದಿ ಸಲ್ಲಿಸಿದೆ. ಭಾರತೀಯ ಪರಿಣತ ವಿಜ್ಞಾನಿಗಳು 1 ವರ್ಷ ಪ್ರಾಜೆಕ್ಟ್ ಅಧ್ಯಯನ ಮಾಡಿದ ಬಳಿಕ ಅಂಗೀಕಾರ ನೀಡಿದರು. ವಿಜ್ಞಾನಿಗಳಾದ ಡಾ| ವನಿತಾ, ಡಾ| ರಾಜಶೇಖರ, ಡಾ| ಸಂಶುದ್ದೀನ್‌ ಮತ್ತು ಡಾ| ಕಬಿತಾ ಸೇಥಿ ಸೇರಿದಂತೆ ದೇಶದ 13 ವಿಜ್ಞಾನಿಗಳು ಕೈಜೋಡಿಸಿದ್ದಾರೆ. ಈ ಆ್ಯಪ್‌ ಜಗತ್ತಿನಲ್ಲೇ ಮೊದಲು ಎಂದು ಡಾ| ಮೋಹನ್‌ ತಲಕಾಲುಕೊಪ್ಪ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next