Advertisement
ಆನ್‌ಲೈನ್ ಮೂಲಕ ಹಣ ಪಾವತಿ ಮಾಡುವವರು ಯಾವುದೇ ರೀತಿಯ ಸೈಬರ್ ಸುರಕ್ಷತೆಯ ಬಗ್ಗೆ ಜಾಗೃತವಾದಂತಿಲ್ಲ. ಯಾವುದೇ ತಿಳಿವಳಿಕೆ ಇಲ್ಲದೇ ಗುಪ್ತ ಮಾಹಿತಿಯನ್ನು ಹಂಚಿಕೊಳ್ಳುವಿಕೆ ಈ ವರ್ಗದಲ್ಲಿ ಹೆಚ್ಚು ಕಂಡುಬರುತ್ತಿದೆ. ಆನ್‌ಲೈನ್ ವ್ಯವಹಾರಗಳಿಂದ ಸೈಬರ್ ವಂಚಕರಿಗೆ ಸುಲಭವಾಗುವ ಸಾಧ್ಯತೆಯೇ ಹೆಚ್ಚು. ಇದನ್ನು ತಪ್ಪಿಸಿಕೊಳ್ಳಲು ನಾವು ಬಳಕೆದಾರರು ಎಚ್ಚರಿಕೆ ವಹಿಸಬೇಕಾಗಿದೆ.
Related Articles
ಆನ್‌ಲೈನ್ ಪಾವತಿಯಲ್ಲಿ ಕ್ಷಿಪ್ರಗತಿಯ ಏರಿಕೆ ಕಾಣುವಲ್ಲಿ ಯುಪಿಐ ನ ಪಾತ್ರ ಮಹತ್ತರವಾದದ್ದು. ಇದು ಅತ್ಯಂತ ಸುಲಭವಾಧ ಮಾರ್ಗವಾಗಿರುವುದರಿಂದ ಜನರು ಬೇಗನೆ ಹೊಂದಿಕೊಳ್ಳುತ್ತಾರೆ. ಇಲ್ಲಿ ನಗದನ್ನು ವರ್ಗಾಯಿಸುವಾಗ ಪಿನ್ ನಂಬರ್‌ಗಳನ್ನು ಬೇರೆಯವರಿಗೆ ಕಾಣದಂತೆ ನಮೂದಿಸಬೇಕಾಗಿದೆ. ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡುವ ಮೊದಲು ಸರಿಯಾಗಿದೆಯೆ ಎಂದು ಪರಿಶೀಲಿಸುವುದು ಅಗತ್ಯ. ಸಾರ್ವಜನಿಕ ಸ್ಥಳಗಳಲ್ಲಿ, ಹೊಟೇಲ್ ಮುಂತಾದ ಕಡೆಗಳಲ್ಲಿ ಕ್ಯೂಆರ್‌ಕೋಡ್ ಸ್ಕ್ಯಾನ್ ಮಾಡುವಾಗ ಸ್ವೀಕರಿಸುವವರ ಯುಪಿಐ ಪಿನ್ ಸರಿಯಾಗಿದೆಯೇ ಎಂದು ಅವರಿಂದ ಖಚಿತ ಪಡಿಸಿಕೊಳ್ಳುವುದು ಒಳ್ಳೆಯ ನಡೆ.
Advertisement
ಸೈಬರ್ ಸುರಕ್ಷತೆಗಾಗಿ ತಂತ್ರಜ್ಞಾನಇಂದು ಬರುತ್ತಿರುವ ಅನೇಕ ಪಾವತಿ ಮತ್ತು ಶಾಪಿಂಗ್ ಆ್ಯಪ್‌ಗ್ಳು ಸೈಬರ್ ವಂಚನೆಯನ್ನು ತಡೆಗಟ್ಟಲು ಕೆಲವು ಸುರಕ್ಷತಾ ವೈಶಿಷ್ಟéಗಳನ್ನು ಅಳವಡಿಸಿಕೊಳ್ಳುತ್ತಿವೆ. ಕೃತಕ ಬುದ್ಧಿಮತ್ತೆಯಿಂದ ಸೈಬರ್ ವಂಚನೆಯನ್ನು ತಡೆಯಲು ಪ್ರಯತ್ನಿಸುತ್ತಿದೆ. ಉದಾಹರಣೆಗಾಗಿ ನಿಮ್ಮ ಬ್ಯಾಂಕಿನ ಸಿಂಬಂದಿ ಎಂದು ಹೇಳಿ ನಿಮ್ಮ ಆಧಾರ್-ಪಾನ್ ನಂಬರ್ ಸಹಿತ ಬ್ಯಾಂಕಿನ ಕಾರ್ಡ್‌ಗಳ ನಂಬರ್ ಅನ್ನು ಪಡೆಯಲಾಗುತ್ತದೆ. ಇಂತಹ ಸ್ಪಾಮ್ ಕರೆಗಳು ಬಂದಾಗ ನಿಮ್ಮ ಮೊಬೈಲ್ ಸ್ಕ್ರೀನ್ ಮೇಲೆ “ಸ್ಪಾಮ್ ಕಾಲ್’ ಎಂದು ತೋರಿಸುತ್ತದೆ. ಇಂತಹ ಸಂದರ್ಭ ನೀವು ಯಾವುದೇ ಮಾಹಿತಿಯನ್ನು ನೀಡಬೇಡಿ. ನಮಗೆ ಕ್ರೆಡಿಟ್ ಕಾರ್ಡ್ ಕೊಡುವ ನೆಪದಲ್ಲಿ ಬರುವ ಕರೆಗಳಿಗೆ ಸ್ಪಂದಿಸಬೇಡಿ. ನೇರವಾಗಿ ಬ್ಯಾಂಕ್‌ಗೆ ಹೋಗಿ ವಿಚಾರಿಸಿ ಕಾರ್ಡ್‌ಗಳನ್ನು ಪಡೆಯಿರಿ. ಇಲ್ಲಿ ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳು ದುರ್ಬಳಕೆಯಾಗುವುದನ್ನು ತಪ್ಪಿಸಬಹುದು. ಕಾನುನು ಮತ್ತು ಕಾರ್ಯವಿಧಾನ
ಆನ್‌ಲೈನ್ ಪಾವತಿ ಮಾಡುವಾಗ ಬಳಕೆದಾರರ ಮುಜಾಗ್ರತೆಯ ಕೊರತೆಯಿಂದ ಆಗುವಂತಹ ಅನಾಹುತಗಳಿಗೆ ಬಳಕೆದಾರರೇ ಕಾರಣರಾಗಿರುತ್ತಾರೆ. ಈ ಕುರಿತಂತೆ ಬ್ಯಾಂಕಿಂಗ್‌ಗೆ ದೂರು ನೀಡಿ ಸಂಸ್ಥೆಯ ಸಹಾಯ ಪಡೆಯಬಹುದು. ಇಂತಹ ವಂಚನೆ ನಡೆದ ಕೂಡಲೇ ಬ್ಯಾಂಕಿಗೆ ಮಾಹಿತಿ ನೀಡುವುದು ಅಗತ್ಯ. ಯಾವುದೇ ರೀತಿಯ ಸೈಬರ್ ವಂಚನೆಗಳು ನಡೆದಾಗ ಅಪರಾಧ ಪ್ರಕ್ರಿಯೆ ಸಂಹಿತೆ 1973ರ ಕಾಯಿದೆ 156 (3)ರ ಅಡಿಯಲ್ಲಿ ನ್ಯಾಯ ಪಡೆಯಬಹುದಾಗಿದೆ. ಬ್ಯಾಂಕ್ ಖಾತೆಯ
ವಂಚನೆ;ಜಾಗೃತಿ ಅಗತ್ಯ
ಬಳಕೆದಾರರು ಸಾಮಾನ್ಯವಾಗಿ ಬ್ಯಾಂಕ್ ಖಾತೆಗಳನ್ನು ತೆರೆದು ಅದರಲ್ಲಿರುವ ಅಪ್ಲಿಕೇಶನ್‌ಗಳ ಪಾಲನೆ ಮಾಡದೇ ಇರುವುದರಿಂದ ತಮ್ಮ ಖಾತೆಗಳ ವಂಚನೆ ಆಗುತ್ತದೆ. ಈ ದಿನಗಳಲ್ಲಿ ಬ್ಯಾಂಕುಗಳು ನೆಟ್ ಬ್ಯಾಂಕಿಂಗ್ ಹಾಗೂ ಇತರ ವಿಧಾನಗಳ ಮೂಲಕ ಉತ್ತಮ ಸೇವೆಯನ್ನು ನೀಡುತ್ತವೆ. ಆದರೂ ಬಳಕೆದಾರರು ತಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಲು ಅನುಮಾನಾಸ್ಪದ ಲಾಗಿನ್‌ಗಳನ್ನು ತಪ್ಪಿಸಲಾಗಿದೆಯೇ ಪರೀಕ್ಷಿಸಿಕೊಳ್ಳಬೇಕು. ಒಂದು ವೇಳೆ ನಿಮ್ಮ ಖಾತೆಯ ವಂಚನೆ ನಡೆದಿದ್ದಲ್ಲಿ ಅದನ್ನು ಸ್ಕ್ರೀನ್‌ಶಾಟ್ ತೆಗೆದು ಮತ್ತು ಕರೆಯ ಪ್ರತಿಗಳನ್ನು ಸಂಬಂಧಪಟ್ಟ ಹಣಕಾಸು ಸಂಸ್ಥೆಗಳಿಗೆ ನೀಡಬೇಕು. ಇದರಿಂದ ಮುಂದಾಗುವ ಅನಾಹುತವನ್ನು ತಪ್ಪಿಸಬಹುದಾಗಿದೆ. – ವಿಜಿತಾ ಅಮೀನ್, ಬಂಟ್ವಾಳ