ಬೆಂಗಳೂರು: ವಿಧಾನಸೌಧದಲ್ಲಿ ಪತ್ತೆಯಾದ ಹಣ, ಅಲೆಮಾರಿ ಅಭಿವೃದಿಟಛಿ ನಿಗಮದ ವತಿಯಿಂದ ಅಲೆಮಾರಿಗಳ ಕಾಲೋನಿಗಳಿಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಗುತ್ತಿಗೆ ಪಡೆಯಲು ಸಂಬಂಧಿಸಿದ್ದು ಎಂಬ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಭ್ರಷ್ಟಾಚಾರ ನಿಗ್ರಹ ಘಟಕ(ಎಸಿಬಿ) ತನಿಖೆ ನಡೆಸುತ್ತಿದೆ.
ಈ ಹಿಂದೆ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ಆಪ್ತ ಸಹಾಯಕರಾಗಿ ಕೆಲಸ ಮಾಡಿದ್ದ ಮಂಜುನಾಥ್ ಹಾಗೂ ಕೃಷ್ಣಪ್ಪ ಅವರ ವಿಚಾರಣೆ ವೇಳೆ ಈ ಕುರಿತು ತನಿಖಾಧಿಕಾರಿಗಳಿಗೆ ಈ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅಲೆಮಾರಿ ಕಾಲೋನಿಗಳಿಗೆ ಕಾಂಕ್ರೀಟ್ ರಸ್ತೆ
ನಿರ್ಮಾಣದ ಟೆಂಡರ್, ಅನುದಾನ ಬಿಡುಗಡೆ, ಅನುದಾನ ಬಾಕಿ ಕುರಿತ ಪ್ರಮುಖ ಕಡತಗಳನ್ನು ಪರಿಶೀಲಿಸಲಾಗುತ್ತಿದೆ. ಆದರೆ, ಯಾವ ನಿರ್ದಿಷ್ಟ ಗುತ್ತಿಗೆದಾರರು ಲಂಚ ನೀಡಲು ಉದ್ದೇಶಿಸಿದ್ದರು ಎಂಬುದು ಖಚಿತವಾಗಿಲ್ಲ ಎಂದು ಎಸಿಬಿ ಮೂಲಗಳು ತಿಳಿಸಿವೆ.
ಆರೋಪಿ ಮೋಹನ್ ಹೇಳಿದ್ದೇನು?: ಗುತ್ತಿಗೆದಾರರ ಪರ ಕೆಲಸ ಮಾಡಲು ಸಚಿವರಿಗೆ ಲಂಚ ನೀಡಲು ಹಣ ತೆಗೆದುಕೊಂಡು ಹೋಗುತ್ತಿದ್ದೆ ಎಂದುಮೋಹನ್ ಕುಮಾರ್ ಪುನರುಚ್ಚರಿಸಿದ್ದಾನೆ.
ಪ್ರಕರಣದ ಇನ್ನಿತರೆ ಆರೋಪಿಗಳಾದ ಅನಂತು, ಶ್ರೀನಿಧಿ, ಮಂಜು, ಕೃಷ್ಣಮೂರ್ತಿ ಹಣತಂದುಕೊಟ್ಟಿದ್ದಾರೆಂದು ಮೋಹನ್
ಕುಮಾರ್ ಹೇಳಿಕೆ ಆಧರಿಸಿ ಆತನ ದೂರವಾಣಿ ಕರೆಗಳನ್ನು ಪರಿಶೀಲಿಸಲಾಗಿದ್ದು, ಉಳಿದ ಆರೋಪಿಗಳ ದೂರವಾಣಿ ಸಂಖ್ಯೆಗಳಿಂದ ಕರೆವಿನಿಮಯ ಆಗಿರುವುದು ಧೃಡಪಟ್ಟಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ಮೋಹನ್ ಕುಮಾರ್ ಜೈಲಿಗೆ: ಆರೋಪಿ ಮೋಹನ್‌ಕುಮಾರ್‌ನನ್ನು ಎರಡು ದಿನಗಳ ವಿಚಾರಣೆ ಪೂರ್ಣಗೊಳಿಸಿದ ಎಸಿಬಿ ಅಧಿಕಾರಿಗಳು ಆತನನ್ನು ಶುಕ್ರವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ನ್ಯಾಯಾಲಯ ಮೋಹನ್ ಕುಮಾರ್‌ಗೆ 14ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.ಜಾಮೀನು ನೀಡುವಂತೆ ಕೋರಿ ಮೋಹನ್ ಅರ್ಜಿ ಸಲ್ಲಿಸಿದ್ದಾರೆ.