Advertisement

Cash-for-tweet ಕುಟುಕು ಕಾರ್ಯಾಚರಣೆ: ಸಿಕ್ಕಿಬಿದ್ದ ನಟ-ನಟಿಯರು

06:01 AM Feb 20, 2019 | udayavani editorial |

ಹೊಸದಿಲ್ಲಿ : ರಾಜಕೀಯ ಪಕ್ಷಗಳಿಂದ ಅಪಾರ ಮೊತ್ತದ ಹಣ ಪಡೆದು ಅವುಗಳ ಪರವಾಗಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಚುನಾವಣಾ ಪ್ರಚಾರಾಭಿಯಾನ ಕೈಗೊಳ್ಳುವ ಡೀಲ್‌ ಗೆ 30ಕ್ಕೂ ಅಧಿಕ ಭಾರತೀಯ ಸಿನೆಮಾ ಮತ್ತು ಟಿವಿ ನಟ-ನಟಿಯರು ಒಪ್ಪಿಕೊಂಡಿರುವುದು ಇದೀಗ ಕುಟುಕು ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿದೆ. 

Advertisement

ರಾಜಕೀಯ ಪಕ್ಷಗಳು ತೆರಿಗೆ ಒಳಪಡದಂತೆ ನಗದು ರೂಪದಲ್ಲಿ ತಮಗೆ ಹಣ ಪಾವತಿಸಬೇಕು ಎಂದು ಈ ನಟ-ನಟಿಯರು ಕೇಳಿಕೊಂಡಿದ್ದು ಈ ಮೂಲಕ ಅವರ ಈ ಅಕ್ರಮ ಸಂಭಾವನೆ ಕಾಳಧನವಾಗಲಿದೆ. 

ಈ ರೀತಿಯ ಒಪ್ಪಂದವನ್ನು ರಾಜಕೀಯ ಪಕ್ಷಗಳೊಂದಿಗೆ ಮಾಡಿಕೊಂಡಿರುವ ಮತ್ತು ಕುಟುಕು ಕಾರ್ಯಾಚರಣೆಯ ಕ್ಯಾಮೆರಾದಲ್ಲಿ ಸೆರೆ ಸಿಕ್ಕ ನಟ-ನಟಿಯರೆಂದರೆ ವಿವೇಕ್‌ ಒಬೆರಾಯ್‌, ಶಕ್ತಿ ಕಪೂರ್‌, ಜಾಕಿ ಶ್ರಾಫ್, ಆಮಿಷಾ ಪಟೇಲ್‌, ಮಹಿಮಾ ಚೌಧರಿ ಮತ್ತು ಸೋನು ಸೂದ್‌; ಗಾಯಕರ ಪೈಕಿ ಕೈಲಾಶ್‌ ಖೇರ್‌, ಅಭಿಜಿತ್‌ ಮತ್ತು ಮಿಕಾ ಅವರ ಹೆಸರು ಕೂಡ ಬಹಿರಂಗವಾಗಿದೆ.

ಸುದ್ದಿ ವೆಬ್‌ ಸೈಟ್‌ ಕೋಬ್ರಾ ಪೋಸ್ಟ್‌ ಕಳೆದ ವರ್ಷ ಮೂರು – ನಾಲ್ಕು ತಿಂಗಳ ಅವಧಿಯಲ್ಲಿ ನಡೆಸಿದ್ದ ಕ್ಯಾಮೆರಾ ಕುಟುಕು ಕಾರ್ಯಾಚರಣೆಯಲ್ಲಿ ಈ ನಟ-ನಟಿಯರು ಕ್ಯಾಶ್‌ ಫಾರ್‌ ಟ್ವೀಟ್‌ ಕೊಡುಗೆಯನ್ನು ಸ್ವೀಕರಿಸಿರುವುದು ದಾಖಲಾಗಿದೆ.  

ಕೋಬ್ರಾ ಪೋಸ್ಟ್‌ ನಿನ್ನೆ ಮಂಗಳವಾರ ಬಿಡುಗಡೆ ಮಾಡಿದ್ದ ‘ಆಪರೇಶನ್‌ ಕರೋಕೆ’ ಶೀರ್ಷಿಕೆಯ ಕುಟುಕು ಕಾರ್ಯಾಚರಣೆಯ ವಿಡಿಯೋ ಡಾಕ್ಯುಮೆಂಟರಿ ಇದೀಗ ರಾಜಕೀಯ ವಲಯಗಳಲ್ಲಿ ಸಂಚಲನ ಉಂಟುಮಾಡಿದೆ. 

Advertisement

ನಟ – ನಟಿಯರು ಮಾತ್ರವಲ್ಲದೆ ಡ್ಯಾನ್ಸರ್‌ಗಳು, ಸಿಂಗರ್‌ ಗಳು, ಮಾಡೆಲ್‌ಗ‌ಳು ಮುಂತಾಗಿ ಹಲವು ಬಗೆಯ ಕಲಾವಿದರು ಈ ಕುಟುಕು ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿರುವುದನ್ನು ವಿಡಿಯೋ ಡಾಕ್ಯುಮೆಂಟರಿಯಲ್ಲಿ ದಾಖಲಿಸಲಾಗಿದೆ. 

ಕಾಂಗ್ರೆಸ್‌, ಬಿಜೆಪಿ, ಆಮ್‌ ಆದ್ಮಿ ಪಾರ್ಟಿಯ ಏಜಂಟರುಗಳು ಈ ಕಲಾವಿದರಿಗೆ ಶೇ.10ರಿಂದ 20ರಷ್ಟು ಮುಂಗಡ ಹಣವನ್ನು ಚೆಕ್‌ ಅಥವಾ ಬ್ಯಾಂಕ್‌ ವರ್ಗಾವಣೆ ಮೂಲಕ ಮತ್ತು ಉಳಿದ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸುವ ಕೊಡುಗೆಯನ್ನು ನೀಡಲಾಗಿದ್ದು ಅವರದನ್ನು ಸ್ವೀಕರಿಸಿರುವುದು ದಾಖಲಾಗಿದೆ. 

ವಿಶೇಷವೆಂದರೆ ರಾಜಕೀಯ ಪಕ್ಷಗಳ ಏಜಂಟರುಗಳ ಈ ಕೊಡುಗೆಯನ್ನು ತಿರಸ್ಕರಿಸಿದವರೆಂದರೆ ವಿದ್ಯಾ ಬಾಲನ್‌, ರಜಾ ಮುರಾದ್‌, ಅರ್ಷದ್‌ ವಾರ್ಸಿ, ಮತ್ತು ಟಿವಿ ನಟ ಸೌಮ್ಯ ಟಂಡನ್‌. 

ನಟ – ನಟಿಯರ ಬ್ರ್ಯಾಂಡ್‌ ವ್ಯಾಲ್ಯೂಗೆ ಅನುಗುಣವಾಗಿ ತಲಾ ಮೆಸೇಜ್‌ಗೆ 2 ಲಕ್ಷ ದಿಂದ 20 ಲಕ್ಷ ರೂ. ವರೆಗೆ ಹಣ ನೀಡುವ ಕೊಡುಗೆಯನ್ನು ಏಜಂಟರು ನೀಡಿದ್ದರು. ಟ್ಟಿಟರ್‌ ನಲ್ಲಿ ಅಪಾರ ಸಂಖ್ಯೆ ಹಿಂಬಾಲಕರನ್ನು ಹೊಂದಿರುವ ಕೆಲವು ಸೆಲೆಬ್ರಿಟಿಗಳಿಗೆ 20 ಕೋಟಿ ರೂ. ಕೊಡುಗೆಯನ್ನೂ ನೀಡಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next