Advertisement

Kalaburagi; ಗೋದಾಮಿನಲ್ಲಿ ಅಕ್ಕಿ ನಾಪತ್ತೆ ಪ್ರಕರಣ; ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಬಂಧನ

08:54 PM Jul 16, 2024 | Team Udayavani |

ಯಾದಗಿರಿ: ಬಿಜೆಪಿ ಮುಖಂಡ ಮಣಿಕಂಠ ರಾಠೋಡನನ್ನು ಕಲಬುರಗಿಯಲ್ಲಿ ಶಹಾಪುರ ಪೊಲೀಸರು ಮಂಗಳವಾರ ಸಂಜೆ 7 ಗಂಟೆಗೆ ಬಂಧಿಸಿದ್ದಾರೆ.

Advertisement

ಟಿಎಪಿಸಿಎಮ್ ಸಿ ಗೋದಾಮಿನಲ್ಲಿ ಅಕ್ಕಿ ನಾಪತ್ತೆ ಪ್ರಕರಣದಲ್ಲಿ ಮಣಿಕಂಠ ರಾಠೋಡನನ್ನು ಹುಡುಕಾಟದಲ್ಲಿದ್ದ ಶಹಾಪುರ ಪೊಲೀಸರು ಇಂದು‌ ಕಲಬುರಗಿಯಲ್ಲಿ ಬಂಧಿಸಿದ್ದಾರೆ.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಆಹಾರ ಇಲಾಖೆ ಉಪ ನಿರ್ದೇಶಕ ಭೀಮರಾಯ ಮಸಾಲಿ ಅಕ್ಕಿ ನಾಪತ್ತೆಯಾದ ಬಗ್ಗೆ ಶಹಾಪುರ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ಯಾದಗಿರಿ ಜಿಲ್ಲೆಯ ಶಹಾಪುರನ TAPCMC ಗೋದಾಮಿನಲ್ಲಿ ಸಂಗ್ರಹವಾದ ಅನ್ನ ಭಾಗ್ಯಅಕ್ಕಿಯನ್ನು ಗೋದಾಮಿನಲ್ಲಿ ಸಂಗ್ರಹಿಸಿದ 6077 ಕ್ವಿಂಟಾಲ್ ಅಕ್ಕಿ ಅಂದಾಜು 2.6 ಕೋಟಿ ಮೌಲ್ಯದ ಅಕ್ಕಿ ನಾಪತ್ತೆ ಪ್ರಕರಣದಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡನನ್ನು ಶಹಾಪುರ ಪಿಎಸ್ಐ ಎಸ್.ಎಂ ಪಾಟೀಲ ನೇತೃತ್ವದಲ್ಲಿ ಬಂಧನವಾಗಿದೆ.

ಮಣಿಕಂಠ ರಾಠೋಡ ಸಹೋದರ ರಾಜು ರಾಠೋಡಗೆ ಸೇರಿದ ಗುರುಮಠಕಲ್ ಪಟ್ಟಣದ ಹೊರಭಾಗದ ಶ್ರೀಲಕ್ಷ್ಮಿ ತಿಮ್ಮಪ್ಪ ರೈಸ್ ಮಿಲ್ ಮೇಲೆ ಶಹಾಪುರ ಪೊಲೀಸರು ದಾಳಿ ಮಾಡಿ 700 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಿದ್ದರು.

Advertisement

ನವೆಂಬರ್ ತಿಂಗಳು ಪ್ರಕರಣ ದಾಖಲಿಸಿಕೊಂಡು ಅಕ್ಕಿ ನಾಪತ್ತೆ ಬಗ್ಗೆ ತನಿಖೆಯಲ್ಲಿದ್ದ ಶಹಾಪುರ ಪೊಲೀಸರು‌ ಮಣಿಕಠ ರಾಠೋಡನನ್ನು ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದರು. ವಿಚಾರಣೆಗೆ ಹಾಜರಾಗದೆ ಇದ್ದ ಮಣಿಕಂಠನನ್ನು‌ ಇಂದು ಕಲಬುರಗಿಯಲ್ಲಿ ಬಂಧಿಸಿದ್ದಾರೆ.

ಅಕ್ಕಿ ನಾಪತ್ತೆಯಲ್ಲಿ ಮಣಿಕಂಠ ರಾಠೋಡ ಭಾಗಿಯಾಗಿರುವ ಮಾಹಿತಿ ಹಿನ್ನಲೆ ಮಣಿಕಂಠ ರಾಠೋಡಗಾಗಿ ಶೋಧ ನಡೆಸುತ್ತಿದ್ದ ಶಹಾಪುರ ಪೊಲೀಸರು ಇಂದು ಮಣಿಕಂಠನನ್ನು ವಶಕ್ಕೆ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next