ಮುಂಬೈ: ಖ್ಯಾತ ಬಾಲಿವುಡ್ ನಟ ಸೈಫ್ ಅಲಿ ಖಾನ್ ಹೊಸ ವಿದಾದವೊಂದನ್ನು ಮೈಗೆಳೆದುಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ‘ಆದಿಪುರುಷ್’ ಸಿನಿಮಾದ ಕುರಿತು ಮಾತನಾಡಿರುವ ಇವರು ರಾವಣನನ್ನು ‘ಮಾನವೀಯ ವ್ಯಕ್ತಿ’ ಎನ್ನುವ ಮೂಲಕ ಆತ ಸೀತೆಯನ್ನು ಅಪಹರಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೈಫ್ ಅಲಿ ಖಾನ್ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ವಿವಾದಕ್ಕೆ ಒಳಗಾಗಿದ್ದಾರೆ.
ಈ ಕುರಿತಾಗಿ ಉತ್ತರ ಪ್ರದೇಶ ಮೂಲದ ವಕೀಲರೊಬ್ಬರು ಸೈಫ್ ಅಲಿ ಖಾನ್ ಮೇಲೆ ಕೇಸ್ ದಾಖಲಿಸಿದ್ದು. ರಾಮ ಎನ್ನುವ ವ್ಯಕ್ತಿತ್ವ ಸನಾತನ ಧರ್ಮದ ಒಂದು ನಂಬಿಕೆ . ಆತ ಸನಾತನ ಧರ್ಮದಲ್ಲಿ ಒಳ್ಳೆಯದರ ಸಂಕೇತವಾಗಿ ಕಾಣಿಸಿಕೊಳ್ಳುತ್ತಾನೆ ಹಾಗೂ ರಾವಣ ಕೆಟ್ಟದರ ಸಂಕೇತವಾಗಿ ಗುರುತಿಸಿಕೊಳ್ಳುತ್ತಾನೆ ಎಂದಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನನಗೆ ರಾಕ್ಷಸ ರಾವಣನ ಪಾತ್ರದಲ್ಲಿ ನಟಿಸಲು ಬಹಳ ಸಂತೋಷವಿದೆ. ಕಾರಣ ಆ ಪಾತ್ರದಲ್ಲಿ ಯಾವುದೆ ವಿಧವಾದ ಮಿತಿ ಇಲ್ಲ. ಚೌಕಟ್ಟು ಗಳಿಲ್ಲ. ಆದರೆ ಜನರ ಮನೋರಂಜನೆಯ ದೃಷ್ಟಿಯಿಂದಾಗಿ ಕೆಲವು ಮಾನವೀಯ ಅಂಶಗಳನ್ನು ಚಿತ್ರದಲ್ಲಿ ಸೇರಿಸಲಿದ್ದೇವೆ. ರಾಮನ ಸಹೋದರ ಲಕ್ಷ್ಮಣ ರಾವಣನ ತಂಗಿಯಾದ ಶೂರ್ಪನಖಿಯ ಮೂಗು ಕತ್ತರಿಸಿದ ಕಾರಣದಿಂದಲೆ ಆತ ಸೀತೆಯನ್ನು ಅಪಹರಿಸಿದ ಮತ್ತು ರಾಮನೊಂದಿಗೆ ಯುದ್ಧ ಮಾಡಿದ ಎಂದಿದ್ದರು.
ಇದನ್ನೂ ಓದಿ:ಬಾಲಿವುಡ್ ಗೆ ರಶ್ಮಿಕಾ ಎಂಟ್ರಿ
ಘಟನೆಯ ನಂತರ ನಟ ಸೈಫ್ ಅಲಿ ಖಾನ್ ತಾನು ನೀಡಿರುವ ಹೇಳಿಕೆಯನ್ನು ಹಿಂದೆಗೆದುಕೊಂಡಿದ್ದು ನಾನು ಯಾವುದೇ ಧರ್ಮದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ದೃಷ್ಟಿಯಿಂದ ಮಾತನಾಡಿಲ್ಲ. ನಾನು ಪ್ರತಿಯೊಬ್ಬರಲ್ಲೂ ಈ ವಿಚಾರದಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ. ನಟ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ರಾವಣನ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ