Advertisement

ಇನ್ಫಿ ವಿರುದ್ಧ ಮಾಜಿ ಉದ್ಯೋಗಿ ದೂರು

11:36 AM Jun 23, 2017 | Karthik A |

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್‌ ವಿರುದ್ಧ ಅಮೆರಿಕದಲ್ಲಿ ಅದರ ಮಾಜಿ ಉದ್ಯೋಗಿ ಕೇಸು ದಾಖಲಿಸಿದ್ದಾರೆ. ದಕ್ಷಿಣ ಏಷ್ಯಾ ಮೂಲದವರು ಮತ್ತು ಅಮೆರಿಕದವರ ನಡುವೆ ಕಂಪೆನಿ ತಾರತಮ್ಯ ನಡೆಸುತ್ತಿದೆ ಎಂಬುದು ಅವರ ಆರೋಪ. ಈ ಬಗ್ಗೆ 19ರಂದು ಟೆಕ್ಸಾಸ್‌ನ ಪೂರ್ಜ ಜಿಲ್ಲಾ ಕೋರ್ಟಲ್ಲಿ ದೂರು ದಾಖಲಾಗಿದೆ. ಅದರಲ್ಲಿ ಕಂಪೆನಿಯ ಹಿರಿಯ ಅಧಿಕಾರಿಗಳಾದ ವಾಸುದೇವ ನಾಯಕ್‌, ವಿನೋದ್‌ ಹಂಪಾಪುರ್‌ ವಿರುದ್ಧ ಆರೋಪ ಮಾಡಿದ್ದಾರೆ. ವಾಸುದೇವ ನಾಯಕ್‌ ಕಳೆದ ವರ್ಷ ಇನ್ಫೋಸಿಸ್‌ಗೆ ರಾಜೀನಾಮೆ ನೀಡಿದ್ದರು. ಅವರಿಬ್ಬರು ದಕ್ಷಿಣ ಏಷ್ಯಾದವರಿಗೆ ಆದ್ಯತೆ ನೀಡಿ, ಸ್ಥಳೀಯರನ್ನು ಕಡೆಗಣಿಸುತ್ತಿದ್ದರು ಎಂದು ದೂರುದಾರರ ವಕೀಲರು ಆರೋಪಿಸಿದ್ದಾರೆ. ಸಂಸ್ಥೆ ವಿರುದ್ಧ ಒಟ್ಟು 53 ಪುಟಗಳ ದೂರು ಸಲ್ಲಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next