Advertisement
ಜು.7 ರಂದು ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರ ಹಲವು ಇಲಾಖೆಗಳಲ್ಲಿ ಕಮಿಷನ್ ದಂಧೆ ನಡೆಯುತ್ತಿದೆ. ಈ ಮಾಹಿತಿ ಇರುವ ಪೆನ್‌ಡ್ರೈವ್ ತನ್ನ ಬಳಿಯಿದೆ ಎಂದಿದ್ದರು. ಆದರೆ, ಇಲ್ಲಿಯವರೆಗೂ ಯಾವುದೇ ಮಾಹಿತಿಯನ್ನು ನೀಡಿಲ್ಲ. ಅಲ್ಲದೆ, ಪೆನ್‌ಡ್ರೈವ್ ತೋರಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಲೀಗಲ್ ನೋಟಿಸ್ ನೀಡಲಾಗಿತ್ತು. ಆದರೆ, ಇದ್ಯಾವುದಕ್ಕೂ ಇದುವರೆಗೂ ಉತ್ತರ ಬಂದಿಲ್ಲ. ಪೆನ್‌ಡ್ರೈವ್ ಸ್ಪೀಕರ್‌ಗೆ ಅಥವಾ ಪೊಲೀಸರಿಗೂ ಇದುವರೆಗೂ ನೀಡಿಲ್ಲ. ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದವರು. ಈ ರೀತಿ ಮಾಡಿರುವುದು ಸರಿಯಲ್ಲ. ಈ ಹಿನ್ನೆಲೆ ಕುಮಾರಸ್ವಾಮಿ ವಿರುದ್ಧ ಬ್ಲ್ಯಾಕ್ ಮೇಲ್, ಬೆದರಿಕೆ, ಅಪರಾಧಿಕ ಸಂಚು ಹಾಗೂ ಎಕ್ಸಾಸ್ಟ್ರಾಕ್ಷನ್ ಆರೋಪದಡಿ ಕ್ರಮ ತೆಗೆದುಕೊಂಡು, ಜತೆಗೆ ಕುಮಾರಸ್ವಾಮಿಯವರ ಬಳಿ ಇರುವ ಪೆನ್‌ಡ್ರೈವ್ ಜಪ್ತಿ ಮಾಡಬೇಕು ಎಂದು ವಕೀಲ ಅಮೃತೇಶ್ ದೂರು ನೀಡಿದ್ದಾರೆ.
Advertisement
H. D. Kumaraswamy: ಪೆನ್‌ಡ್ರೈವ್ ತೋರಿಸಿ ಬ್ಲ್ಯಾಕ್‌ಮೇಲ್ ಎಚ್‌ಡಿಕೆ ವಿರುದ್ಧ ದೂರು
12:26 PM Oct 29, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.