Advertisement

ರಾಷ್ಟ್ರಧ್ವಜ ಅವಮಾನ ಪ್ರಕರಣ: ಹಾರ್ದಿಕ್‌ ಕೇಸು ವಾಪಸ್‌

11:25 AM Oct 12, 2017 | udayavani editorial |

ರಾಜ್‌ಕೋಟ್‌: ಎರಡು ವರ್ಷಗಳ ಹಿಂದೆ ತ್ರಿವರ್ಣ ಧ್ವಜವನ್ನು ಅವಮಾನಿಸಿದರೆಂಬ ಕಾರಣಕ್ಕೆ ಪಟೇಲ್‌ ಮೀಸಲಾತಿ ಆಂದೋಲನದ ನೇತಾರ ಹಾರ್ದಿಕ್‌ ಪಟೇಲ್‌ ವಿರುದ್ಧ ದಾಖಲಿಸಲಾಗಿದ್ದ ಕೇಸನ್ನು ಗುಜರಾತ್‌ ಸರಕಾರ ಹಿಂಪಡೆದಿದೆ.

Advertisement

ರಾಜ್ಯ ಸರಕಾರದ ಸೂಚನೆಯನ್ನು ಅನುಸರಿಸಿ ರಾಜ್‌ಕೋಟ್‌ ಕಲೆಕ್ಟರ್‌ ವಿಕ್ರಾಂತ್‌ ಪಾಂಡೆ ಅವರು ಹಾರ್ದಿಕ್‌ ಪಟೇಲ್‌ ವಿರುದ್ಧದ ಕೇಸನ್ನು ಹಿಂಪಡೆಯುವ ಆದೇಶವನ್ನು ಹೊರಡಿಸಿದರು. 

ಈ ಪ್ರಕರಣಕ್ಕೆ ಸಂಬಂಧಿಸಿ ಹಾರ್ದಿಕ್‌ ಪಟೇಲ್‌ ವಿರುದ್ಧ ಕೇವಲ ಒಂದು ಎಫ್ಐಆರ್‌ ಅನ್ನು ಮಾತ್ರವೇ ದಾಖಲಿಸಲಾಗಿತ್ತು. ಈಗಿನ್ನು ಆತನ ವಿರುದ್ಧ ಕೇಸು ಹಿಂಪಡೆಯುವ ಪ್ರಕ್ರಿಯೆಯನ್ನು ಕೋರ್ಟಿನಲ್ಲಿ ಮುಗಿಸಲಾಗುವುದು ಎಂದು ಮೂಲಗಳು ತಿಳಿಸಿವೆ. 

ಇದೇ ವೇಳೆ ಪತಿದಾರ್‌ ಆಂದೋಲನದ ಇತರ ಐವರ ವಿರುದ್ಧದ ಕೇಸನ್ನು ಕೂಡ ಹಿಂಪಡೆಯಲಾಗಿದೆ ಎಂದು ಕಲೆಕ್ಟರ್‌ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next