Advertisement

ಡಿಕೆಶಿ ಕುಟುಂಬ ಸದಸ್ಯರ ವಿಡಿಯೋ ಬಳಕೆ 2 ಯುಟ್ಯೂಬ್‌ ವಾಹಿನಿ ವಿರುದ್ಧ ಕೇಸ್‌

01:13 PM Feb 07, 2023 | Team Udayavani |

ಬೆಂಗಳೂರು: ಅನುಮತಿ ಇಲ್ಲದೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಮಕ್ಕಳ ಫೋಟೋ ಬಳಸಿಕೊಂಡ ಆರೋಪ ಸಂಬಂಧ 2 ಯುಟ್ಯೂಬ್‌ ವಾಹಿನಿಗಳ ವಿರುದ್ಧ ಬೆಂಗಳೂರು ಕೇಂದ್ರ ವಿಭಾಗದ ಸೆನ್‌(ಸಿಇಎನ್‌) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಡಿ.ಕೆ.ಶಿವಕುಮಾರ್‌ ಕುಟುಂಬದ ಆಪ್ತರಾದ ಉಮೇಶ್‌ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಬಿ4ಯುಕನ್ನಡ ಹಾಗೂ ಇಂಡಿಯಾ ರಿಪೋರ್ಟ್‌ ಹೆಸರಿನ 2 ಯೂಟ್ಯೂಬ್‌ ವಾಹಿನಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ‘

ಇವರ ಮಕ್ಕಳು ಮೀಡಿಯಾ ಮುಂದೆ ಬರೋದಿಲ್ಲ ಏಕೆ?’ ಎಂದು ಇಂಡಿಯಾ ರಿಪೋರ್ಟ್‌ ವರದಿ ಮಾಡಿದೆ. ಹಾಗೆಯೇ ‘ಹೂ ಇಸ್‌ ಅಭರಣ ಡಿ.ಕೆ. ಶಿವಕುಮಾರ್‌ ಕೆಪಿಸಿಸಿ’ ಎಂದು ಬಿ4ಕನ್ನಡ ಯುಟ್ಯೂಬ್‌ ಚಾಲನ್‌ ವರದಿ ಮಾಡಿವೆ.

ಈ ಕುರಿತು 2 ಯುಟ್ಯೂಬ್‌ ಚಾನಲ್‌ಗ‌ಳ ಲಿಂಕ್‌ಗಳನ್ನು ಉಲ್ಲೇಖೀಸಿ ದೂರು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next