Advertisement
ಬುಧವಾರ ನಾಪತ್ತೆಯಾಗಿದ್ದ 14 ವರ್ಷದ ಬಾಲಕಿ ಭಿಲ್ವಾರಾ ಜಿಲ್ಲೆಯಲ್ಲಿ ಸುಟ್ಟು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಕೆಯ ಸುಟ್ಟ ಅವಶೇಷಗಳು ಕಲ್ಲಿದ್ದಲು ಕುಲುಮೆಯಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ.
Related Articles
Advertisement
ಘಟನೆ ಏನು? ಕಳೆದ ಬುಧವಾರ ದನ ಮೇಯಿಸಲು ಹೋಗಿದ್ದ ವೇಳೆ ಅಪ್ರಾಪ್ತ ಬಾಲಕಿ ನಾಪತ್ತೆಯಾಗಿದ್ದಳು. ಆರೋಪಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಅದೇ ರಾತ್ರಿ ಆಕೆಯ ದೇಹವನ್ನು ಸುಟ್ಟು ಹಾಕಿದ್ದರು.
ಬಾಲಕಿಯ ದೇಹದ ಕೆಲವು ಭಾಗಗಳನ್ನು ಕುಲುಮೆಯಲ್ಲಿ ಸುಟ್ಟು ಹಾಕಲಾಗಿದೆ ಮತ್ತು ಇತರ ಭಾಗಗಳನ್ನು ಎಲ್ಲಾ ಸಾಕ್ಷ್ಯಗಳನ್ನು ನಾಶಪಡಿಸಲು ಹತ್ತಿರದ ಕೊಳದಲ್ಲಿ ವಿಲೇವಾರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನು “ಅಪರೂಪದಲ್ಲಿ ಅಪರೂಪದ ಪ್ರಕರಣ” ಎಂದು ಕರೆದ ಭಿಲ್ವಾರಾ ಎಸ್ಪಿ ಆದರ್ಶ್ ಸಿಧು, ಆರೋಪಿಗಳಿಗೆ ಮರಣದಂಡನೆ ವಿಧಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ:Gruha Jyothi Scheme ಚಾಲನೆಗೆ ಕ್ಷಣಗಣನೆ: ಊಟದ ಮೆನುವಿನಲ್ಲಿ ಲಡ್ಡು- ಪಲಾವ್
ಆರು ಪುರುಷರು ಮತ್ತು ನಾಲ್ವರು ಮಹಿಳೆಯರು ಸೇರಿದಂತೆ ಹತ್ತು ಆರೋಪಿಗಳು ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ಸಿಧು ಹೇಳಿದರು.
ಬಂಧಿತ ಆರೋಪಿಗಳನ್ನು ಕಲು ಲಾಲ್ (25) ಮತ್ತು ಕನ್ಹಾ (21), ಸಂಜಯ್ ಕುಮಾರ್ (20), ಮತ್ತು ಪಪ್ಪು (35) ಎಂದು ಗುರುತಿಸಲಾಗಿದೆ. ಬಂಧನದಲ್ಲಿರುವ ಅಪ್ರಾಪ್ತ ವಯಸ್ಕನ ವಯಸ್ಸನ್ನು ಪ್ರಸ್ತುತ ಕಂಡುಹಿಡಿಯಲಾಗುತ್ತಿದೆ ಎಂದು ಅವರು ಹೇಳಿದರು.
ಕನ್ಹಾ ಮತ್ತು ಕಾಲು ಸಾಮೂಹಿಕ ಅತ್ಯಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಎಸ್ಪಿ ಹೇಳಿದರು.
ಇಬ್ಬರು ಪುರುಷ ಆರೋಪಿಗಳ ಪತ್ನಿಯರು ಸೇರಿದಂತೆ ನಾಲ್ವರು ಮಹಿಳೆಯರೂ ಸಾಕ್ಷಿ ನಾಶದಲ್ಲಿ ಭಾಗಿಯಾಗಿದ್ದಾರೆ. ಇನ್ನು ಇಬ್ಬರು ಆರೋಪಿಗಳು ಆರೋಪಿಯ ತಾಯಿ ಹಾಗೂ ಮತ್ತೋರ್ವ ಆರೋಪಿಯ ಸಹೋದರಿ ಎಂದು ಎಸ್ಪಿ ತಿಳಿಸಿದ್ದಾರೆ.
ಕುಲುಮೆಗೆ ಹಾಕಿದಾಗ ಬಾಲಕಿ ಜೀವಂತವಾಗಿದ್ದಳೋ ಅಥವಾ ಪ್ರಜ್ಞಾಹೀನಳಾಗಿದ್ದಳೋ ಮತ್ತು ದೇಹವನ್ನು ಕತ್ತರಿಸಿದ ನಂತರ ಅದರಲ್ಲಿ ಎಸೆಯಲಾಗಿದೆಯೇ ಎಂಬುದನ್ನು ವಿಧಿವಿಜ್ಞಾನ ತಂಡವು ದೃಢಪಡಿಸುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.