Advertisement

ಜಲಾಶಯಗಳ ಮುಚ್ಚುಗಡೆ: ಜಿಲ್ಲೆಯಲ್ಲಿ ಗಣತಿ ಜಾರಿ?

08:28 PM May 13, 2019 | Sriram |

ಕಾಸರಗೋಡು: ಜಿಲ್ಲೆಯ ಜಲಾಶಯಗಳನ್ನು ಮತ್ತು ಕಿರು ಜಲಾಶಯಗಳನ್ನು ಮಣ್ಣು ಹಾಕಿ ಮುಚ್ಚಲಾಗುತ್ತಿರುವುದನ್ನು ಪತ್ತೆಮಾಡುವ ನಿಟ್ಟಿನಲ್ಲಿ ಆರನೇ ಕಿರು ನೀರಾವರಿ ಗಣತಿ ಮತ್ತು ವಾಟರ್‌ ಬೋಡಿ ಸೆನ್ಸಸ್‌ ಜಾರಿಗೊಳ್ಳಲಿದೆ.

Advertisement

ಕೇಂದ್ರ ನೀರಾವರಿ ಸಚಿವಾಲಯದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ನಡೆಸುವ ಗಣತಿಯನ್ನು ರಾಜ್ಯದಲ್ಲಿ ಕಿರು ನೀರಾವರಿ ಇಲಾಖೆ ನಡೆಸುತ್ತಿದೆ. 5 ವರ್ಷಗಳಿಗೊಮ್ಮೆ ನಡೆಸಲಾಗುವ ಈ ಗಣತಿ ಮೂಲಕ ಬಾವಿ, ಕೆರೆ, ಕಿರು ಜಲಾಶಯಗಳು ಇತ್ಯಾದಿಗಳನ್ನು ಪತ್ತೆಮಾಡಿ ಗಣನೆ ಮಾಡಲಾಗುವುದು. ಜಿಲ್ಲೆಯಲ್ಲಿ ಸುಮಾರು 75 ಮಂದಿಯನ್ನು ಗಣತಿ ಕಾಯಕಕ್ಕಾಗಿ ನೇಮಿಸಲಾಗಿದೆ.

ಜಿ.ಪಿ.ಎಸ್‌. ತಾಂತ್ರಿಕತೆಯ ಮೊಬೈಲ್‌ ಆ್ಯಪ್‌ ಬಳಸಿ ಜಲಾಶಯಗಳ ಚಿತ್ರಪಡೆದು, ಜಾಗವನ್ನೂ ದಾಖಲಿಸಲಾಗುವುದು.

ಎಪ್ರಿಲ್‌ ತಿಂಗಳಲ್ಲಿ ಆರಂಭಗೊಳ್ಳಬೇಕಿದ್ದ ಈ ಗಣತಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈಗ ಆರಂಭಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಗ್ರಾಮ ಪಂಚಾಯತ್‌ಗಳ ಮತ್ತು ನಗರಸಭೆಗಳ ಸೂಪರ್‌ವೈಸರ್‌ಗಳಿಗೆ, ಎನ್ಯುಮರೇಟರ್‌ಗಳಿಗೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮ ಸಿವಿಲ್‌ ಸ್ಟೇಷನ್‌ನ ಡಿ.ಪಿ.ಸಿ. ಸಭಾಂಗಣದಲ್ಲಿ ನಡೆಯಿತು. ಕಿರು ನೀರಾವರಿ ವಿಭಾಗ ಕಾರ್ಯಕಾರಿ ಎಂಜಿನಿಯರ್‌ ವರ್ಗೀಸ್‌ ಕೆ.ವರ್ಗೀಸ್‌ ಅಧ್ಯಕ್ಷತೆ ವಹಿಸಿದ್ದರು.

ಸ್ಟಾಟಿಸ್ಟಿಕಲ್‌ ಅಧಿಕಾರಿ ಎಂ. ನಿಝಾಮುದ್ದೀನ್‌, ಸ್ಟಾಟಿಸ್ಟಿಕಲ್‌ ಸಹಾಯಕಿ ಅಂಜನಾ ಕೃಷ್ಣನ್‌ ತರಗತಿ ನಡೆಸಿದರು. ಮೇ 14 ರಂದು ಆಯ್ದ ಪ್ರದೇಶಗಳಿಗೆ ತೆರಳಿ ಪ್ರಾಯೋಗಿಕ ತರಬೇತಿನೀಡಲಾಗುವುದು ಎಂದು ತಿಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next