Advertisement

ಸಿಎಂ ಪಳನಿಸ್ವಾಮಿ ವ್ಯಂಗ್ಯಚಿತ್ರ: Cartoonist ಬಾಲಾಗೆ ಬೇಲ್‌

12:06 PM Nov 06, 2017 | udayavani editorial |

ಚೆನ್ನೈ : ತಮಿಳು ನಾಡು ಮುಖ್ಯಮಂತ್ರಿ ಇ ಪಳನಿಸ್ವಾಮಿ ಅವರ ಅಶ್ಲೀಲ ಬಗೆಯ ವ್ಯಂಗ್ಯಚಿತ್ರವನ್ನು ಪ್ರಕಟಿಸಿ ಬಂಧಿತರಾಗಿದ್ದ  Cartoonist ಜಿ ಬಾಲಾ ಅವರಿಗೆ ಇಂದು ಸೋಮವಾರ ತಿರನೆಲ್ವೇಲಿ ಜಿಲ್ಲಾ ನ್ಯಾಯಾಲಯ ಜಾಮೀನು ಬಿಡುಗಡೆಯನ್ನು ಮಂಜೂರು ಮಾಡಿದೆ.

Advertisement

“ಆರಂಭದಲ್ಲಿ ಯಾವುದೇ ವಕೀಲರು ಬಾಲಾ ಪರವಾಗಿ ಕೋರ್ಟಿನಲ್ಲಿ ಹಾಜರಾಗಲು ಇಷ್ಟಪಡಲಿಲ್ಲ’ ಎಂದು ಸಿಎನ್‌ಎನ್‌ ನ್ಯೂಸ್‌ 18 ವರದಿ ಮಾಡಿದೆ.

ತಿರುನೆಲ್ವೇಲಿಯಲ್ಲಿನ ಕಾರ್ಮಿಕ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಲು ಮುಖ್ಯಮಂತ್ರಿ ಮತ್ತು ಅವರ ಸರಕಾರ ವಿಫ‌ಲವಾಗಿದ್ದುದನ್ನು ಬಾಲಾ ಅವರು ಕಾಟೂìನ್‌ನಲ್ಲಿ ಚಿತ್ರಿಸಿದ್ದರು. 

ಬಾಲಾ ಅವರು ತಮ್ಮ ಈ Cartoon ನನ್ನು ಫೇಸ್‌ ಬುಕ್‌ ನಲ್ಲಿ ಹಾಕಿದ್ದರು. ಅದನ್ನು 40,000 ಮಂದಿ ಶೇರ್‌ ಮಾಡಿಕೊಂಡಿದ್ದರು. ಟ್ವಿಟರ್‌ನಲ್ಲೂ ಇದು ಸಾಕಷ್ಟು ಪ್ರಮಾಣದಲ್ಲಿ ಶೇರ್‌ ಆಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next