ಆಧುನಿಕ ಜಗತ್ತಿನಲ್ಲಿ ಕಾಟೂìನ್‌ಗಳು ತುಂಬಾ ಜನಪ್ರಿಯತೆಗಳನ್ನು ಗಳಿಸಿದೆ. ಈ ಕಾರ್ಟೂನ್ ಗಳು ಮಕ್ಕಳಿಗೆ ಹಗಲು ರಾತ್ರಿ ದೂರದರ್ಶನ ವೀಕ್ಷಿಸುವ ಚಪಲವನ್ನು ಹೆಚ್ಚಿಸಿವೆ. ಕಾರ್ಟೂನ್ ಗಳು ದೃಶ್ಯಗಳ ಒಂದು ನೋಟ, ಹಿನ್ನೋಟದ ಇಂಪಾದ ಸಂಗೀತ ಪ್ರಭಾವವನ್ನು ಬೀರುತ್ತವೆಂಬುದು ಕೆಲವು ಸಂಶೋಧನೆಗಳಿಂದ ವ್ಯಕ್ತವಾಗಿದೆ. ಇದರಿಂದ ಕೆಟ್ಟ ಪರಿಣಾಮವೇ ಹೆಚ್ಚು ಎಂಬುದು ಬೆಳಕಿಗೆ ಬಂದಿದೆ. ಭಾವನಾತ್ಮಕ ಮಾನಸಿಕ ಹಾಗೂ ಸಾಮಾಜಿಕ ವಲಯಗಳಲ್ಲಿ ನಡೆಸಿದ ಸಂಶೋಧನೆಯಿಂದಲೂ ಈ ದುಷ್ಪರಿಣಾಮಗಳು ಹೆಚ್ಚು ಎಂದು ಕಂಡು ಬಂದಿದೆ. ಸಂಶೋಧಕರ ಪ್ರಕಾರ ಅತಿಯಾದ ಕಾರ್ಟೂನ್ ವೀಕ್ಷಣೆಯಿಂದ ಮಕ್ಕಳಲ್ಲಿ ಹಠಮಾರಿತನ, ಒಂಟಿಯಾಗಿ ಇರಲು ಇಚ್ಛಿಸುವುದು, ಅತಿಯಾದ ತುಂಟಿತನ, ಸಿಡುಕುವುದು ಕಾಣಬಹುದು.
ಮಣಿಪಾಲದ ವಾಕ್ ಶ್ರವಣ ಸಂಸ್ಥೆಯಿಂದ ನಡೆಸಲಾದ ಅಧ್ಯಯನದ ಮುಖಾಂತರ ಪಾಶ್ಚಾತ್ಯ ಕಾರ್ಟಾನ್‌ಗಳ ವೀಕ್ಷಣೆಗೆ ಗುರಿಯಾದ ಮಕ್ಕಳಲ್ಲಿ ಹಾಗೂ ಕಾರ್ಟೂನ್ ಗಳನ್ನು ನೋಡದ ಮಕ್ಕಳಲ್ಲಿರುವ ವ್ಯತ್ಯಾಸವನ್ನು ಕಂಡುಹಿಡಿಯಲಾಯಿತು. ಶ್ರವಣ ಪರೀಕ್ಷೆ ಮಾಡಿದ ಮೇಲೆ ಕೆಲವು ಪರೀಕ್ಷೆಗಳನ್ನು ನಡೆಸಲಾಯಿತು. ಮುಖ್ಯವಾಗಿ-ಸೂಚಿಸುವ ಪದವನ್ನು ಗುರುತಿಸುವುದು, ವಾಕ್ಯವನ್ನು ಪುನರತ್ಛರಿಸುವುದು, ನಾವು ಹೇಳಿದ ವಾಕ್ಯವನ್ನು ಗಮನ ಕೊಟ್ಟು ಕೇಳಿ ಅದನ್ನು ಅನುಸರಿಸುವುದು, ಕತೆಯನ್ನು ಪುನರತ್ಛರಿಸುವುದು ಮುಂತಾದ ಪ್ರಯೋಗಗಳನ್ನು NEFSY ಐಐಯಿಂದ ಪಡೆಯಲಾಗಿದೆ. ಈ ಅಧ್ಯಯನದಿಂದ ಪಾಶ್ಚಾತ್ಯ ಕಾರ್ಟೂನ್ ಗಳನ್ನು ಹೆಚ್ಚಾಗಿ ನೋಡುವ ಮಕ್ಕಳ ಕಾರ್ಯಕ್ಷಮತೆ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಮಕ್ಕಳ ಆಡಿಟರಿ ಪ್ರೊಸೆಸಿಂಗ್ ಮೇಲೆ ಹಾನಿಯುಂಟಾಗುತ್ತದೆ.
ನಮಗೆ ತಿಳಿದಂತೆ ಆಡಿಟರಿ ಪ್ರೊಸೆಸಿಂಗ್ ಭಾಷೆಯ ಕಲಿಯುವಿಕೆ ಮತ್ತು ಮಾತನ್ನು ಅರ್ಥಮಾಡಿಕೊಳ್ಳುವ ಜಾಣ್ಮೆಗೆ ಸಹಕರಿಸುತ್ತದೆ. ಶ್ರವಣ ಶಕ್ತಿ ಅಥವಾ ಆಡಿಟರಿ ಪ್ರೊಸೆಸಿಂಗ್ ಮೇಲೆ ಏನಾದರೂ ಕೆಟ್ಟ ಪರಿಣಾಮ ಉಂಟಾದರೆ ಮಕ್ಕಳ ಶಾಲಾ ಚಟುವಟಿಕೆ ಕುಂಠಿತವಾಗುತ್ತದೆ.
ಪಾಶ್ಚಾತ್ಯ ಕಾರ್ಟೂನ್ ಗಳು ಮಕ್ಕಳನ್ನು ತಾತ್ಕಾಲಿಕವಾಗಿ ಸಮಾಧಾನ ಪಡಿಸಿದರೂ ಅದು ಖಾಯಂ ಉತ್ತರವಲ್ಲ. ಅತಿಯಾದ ವೀಕ್ಷಣೆಯಿಂದ ಮಕ್ಕಳ ಮನಸ್ಸಿನ
ಮೇಲೆ ಹಾಗೂ ಅವರ ಇಂದ್ರಿಯಗಳ ಮೇಲೆ ದೀರ್ಘ ದುಷ್ಪರಿಣಾಮ ಉಂಟಾಗುತ್ತದೆ ಎಂಬುದನ್ನು ಗಮನಿಸುವುದು ಅಗತ್ಯ.
ವಿದ್ಯಾವಂತ ಪೋಷಕರು ಮಕ್ಕಳೊಂದಿಗೆ ಹೆಚ್ಚಿನ ಸಮಯ ವಿನಿಯೋಗಿಸುವುದರಿಂದ ಹಾಗೂ ಮಕ್ಕಳನ್ನು ಹೊರಾಂಗಣ ಆಟ ಆಡಲು ಉತ್ತೇಜಿಸುವುದರಿಂದ ಮಕ್ಕಳನ್ನು ದೂರದರ್ಶನ ಹಾಗೂ ಮೊಬೈಲ್‌ನಿಂದ ದೂರವಿರಿಸಲು ಸಾಧ್ಯ.
-ಪ್ರತೀಕ್ಷಾ ಬಿ.
ನಿಖೀತಾ ಸಾಲಿಯಾನ್
ಪ್ರಥಮ ಎಂಎಸ್‌ಸಿ, ಆಡಿಯಾಲಜಿ
ಕಿಶನ್ ಎಂ.ಎಂ.
ಅಸೋಸಿಯೇಟ್ ಪ್ರೊಫೆಸರ್
ಡಿಪಾರ್ಟ್‌ಮೆಂಟ್ ಆಫ್ ಸ್ಪೀಚ್ ಆ್ಯಂಡ್ ಹಿಯರಿಂಗ್, ಎಂಸಿಎಚ್‌ಪಿ, ಮಣಿಪಾಲ