ಜಗತ್ತಿನಾದ್ಯಂತ ಘೋಷಣೆಯಾಗಿರುವ ಲಾಕ್‌ಡೌನ್, ಆಟೋಮೊಬೈಲ್ ಮಾರುಕಟ್ಟೆ ಮೇಲೂ ಅಡ್ಡಪರಿಣಾಮ ಬೀರಿರುವುದು ಸುಳ್ಳೇನಲ್ಲ. ಭಾರತದಲ್ಲೂ ದಿನದಿಂದ ದಿನಕ್ಕೆ ಲಾಕ್ ಡೌನ್ ಸಡಿಲವಾಗುತ್ತಿದೆ. ಆಟೋಮೊಬೈಲ್ ಕಂಪನಿಗಳೂ ತಮ್ಮ ಮಾರುಕಟ್ಟೆ ಚುರುಕುಗೊಳಿಸಲು ಮುಂದಾಗಿವೆ. ಕೆಲವು ಕಂಪನಿಗಳು ಡೀಲರ್‌ಶಿಪ್ ತೆರೆದಿದ್ದರೆ, ಇನ್ನೂ ಕೆಲವು ಡೀಲರ್‌ಶಿಪ್ ಜತೆಯಲ್ಲೇ ಆನ್‌ಲೈನ್ ವಹಿವಾಟಿಗೂ ಮುಂದಾಗಿವೆ.
1 ಮಾರುತಿ: ದೇಶದ 1,960 ನಗರಗಳಲ್ಲಿ 3,080 ಡೀಲರ್‌ಶಿಪ್ ಗಳನ್ನು ಹೊಂದಿರುವ ಮಾರುತಿ ಸುಜುಕಿ, ಆನ್‌ಲೈನ್ ಬುಕಿಂಗ್ ಶುರು ಮಾಡಿದೆ. ಇದಷ್ಟೇ ಅಲ್ಲ, 474 ಅರೇನಾ, 80 ನೆಕ್ಸಾ ಮತ್ತು 45 ಸಿವಿ ಸೇಲ್ಸ್ ಔಟ್‌ಲೆಟ್‌ಗಳನ್ನೂ ಮಾರುತಿ ಸುಜುಕಿ ಕಂಪನಿ ಹೊಂದಿದೆ. ವೆಬ್‌ಸೈಟ್‌ಗಳಲ್ಲೇ ಕಾರಿನ ಮಾಹಿತಿ ನೋಡಿ, ಬುಕ್ ಮಾಡಬಹುದಾಗಿದೆ. ಡೀಲರ್‌ಶಿಪ್‌ಗ್ಳು, ಮನೆ ಬಾಗಿಲಿಗೇ ಕಾರು ತಂದುಕೊಡಲಿವೆ.
2 ಮಹೀಂದ್ರಾ: ಮಹೀಂದ್ರಾ ಕಂಪನಿಯ ವೆಬ್‌ಸೈಟ್‌ಗೆ ಹೋದರೆ, ಅಲ್ಲಿ ಲೈನ್ ಬುಕಿಂಗ್ ಲಿಂಕ್ ಸಿಗಲಿದೆ. ಇಲ್ಲಿ ನಮಗೆ ಬೇಕಾದ ಮಾಡೆಲ್, ಬಣ್ಣ ಸೇರಿದಂತೆ ಕಾರಿಗೆ ಬೇಕಾಗಿರುವ ಎಲ್ಲಾ ಆ್ಯಕ್ಸೆಸರಿಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಮಗೆ ಬೇಕಾದ ಡೀಲರ್‌ಶಿಪ್ ಅನ್ನೇ ಆಯ್ದುಕೊಳ್ಳಬಹುದು. ಜತೆಗೆ ಜನರ ಆಯ್ಕೆಗೆ ಬೇಕಾಗುವ ಇನ್ಷೊರೆನ್ಸ್, ಕಾಸಿನ ವ್ಯವಸ್ಥೆ, ಆರಂಭದಲ್ಲಿ ಹಣ ಕಟ್ಟಲೂ ವ್ಯವಸ್ಥೆ ಮಾಡಿಕೊಡಲಾಗಿದೆ. ಇದೆಲ್ಲಾ ಆದ ಮೇಲೆ, ಕಾರನ್ನು ಸ್ಯಾಲಿಟೈಸ್ ಮಾಡಿ ಕೊಡಲಾಗುತ್ತದೆ.
3 ಹೋಂಡಾ: ಹೋಂಡಾ ಫ್ರಮ್ ಹೋಮ್ ಹೋಂಡಾ ಕಾರ್ಸ್ ಕಂಪನಿ, ಕಳೆದ ತಿಂಗಳೇ ಆನ್‌ಲೈನ್ ಮಾರಾಟ ಶುರುಮಾಡಿಕೊಂಡಿದೆ. ಇದು ಹೋಂಡಾ ಫ್ರಮ್ ಹೋಮ್ ಹೆಸರಿನಲ್ಲಿ ಈ ಅವಕಾಶ ಸೃಷ್ಟಿಸಿದೆ. ಹೋಂಡಾ ವೆಬ್ ಸೈಟ್‌ನಲ್ಲೇ ಜನ ತಮಗೆ ಬೇಕಾದ ಕಾರನ್ನು ಬುಕ್ ಮಾಡಬಹುದಾಗಿದೆ.
4 ಹುಂಡೈ: ಕ್ಲಿಕ್ ಟು ಬೈ ಏಪ್ರಿಲ್ ತಿಂಗಳ ಆರಂಭದಲ್ಲೇ ಹುಂಡೈ ಕಂಪನಿ, ಆನ್ ಲೈನ್ ವ್ಯವಸ್ಥೆಗಾಗಿ ಕ್ಲಿಕ್ ಟು ಬೈ ಅವಕಾಶ ಸೃಷ್ಟಿಸಿತ್ತು. ಇದರಡಿಯಲ್ಲಿ 500 ಡೀಲರ್ ಶಿಪ್‌ಗ್ಳನ್ನು ಸೇರಿಸಲಾಗಿದೆ. ಈ ಕ್ಲಿಕ್ ಟು ಬೈನಲ್ಲಿ ಕಂಪನಿಯ ಹೊಸ ಕ್ರೀಟಾ ಮತ್ತು ವರ್ನಾ ಕಾರುಗಳೂ ಲಭ್ಯವಿವೆ.
5 ಪೋಕ್ಸ್ ವೋಗನ್: ಕಳೆದ ತಿಂಗಳ ಅಂತ್ಯದಲ್ಲಿ, ಪೋಕ್ಸ್ ವೋಗನ್ ಕಂಪನಿಯು ಆನ್‌ಲೈನ್ ಮಾರಾಟವನ್ನು ಆರಂಭಿಸಿದೆ. ತಮಗೆ ಬೇಕಾದ ಕಾರನ್ನು ಆಯ್ಕೆ ಮಾಡಿಕೊಳ್ಳಲು ಜನರಿಗೇ ಅವಕಾಶ ನೀಡಲಾಗಿದೆ. ಇದರಲ್ಲಿ 137 ಸೇಲ್ಸ್ ಮತ್ತು 116 ಸರ್ವೀಸ್ ಟಚ್ ಪಾಯಿಂಟ್‌ಗಳನ್ನು ಸೇರಿಸಲಾಗಿದೆ.
* ಸೋಮಶೇಖರ್ ಸಿ.ಜೆ