ಮಂಗಳೂರು: ವಿದೇಶದಿಂದ ಸ್ವದೇಶಕ್ಕೆ ಬರುವ ಪ್ರಯಾಣಿಕರು ಅಕ್ರಮವಾಗಿ ಚಿನ್ನ ಸಾಗಿಸಲು ಹೊಸ ಹೊಸ ವಿಧಾನಗಳನ್ನು ಬಳಸುತ್ತಿದ್ದು, ಇದೀಗ ಟ್ರಾಲಿ ಬ್ಯಾಗ್ ನ ಚಕ್ರಗಳಲ್ಲಿ ಚಿನ್ನ ಸಾಗಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.
ಶುಕ್ರವಾರ ದುಬೈನಿಂದ ಬಂದ ಕಾಸರಗೋಡು ನಿವಾಸಿ ಶೇಕ್ ಹನೀಫ್ ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದಾಗ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಇದನ್ನೂ ಓದಿ:ವೈದ್ಯರಿಗೆ ವೀಸಾ, ರೋಗಿಗಳಿಗೆ ಏರ್ ಆ್ಯಂಬುಲೆನ್ಸ್: ಪ್ರಧಾನಿ ನರೇಂದ್ರ ಮೋದಿ
ಟ್ರಾಲಿ ಬ್ಯಾಗ್ ನ ಚಕ್ರಗಳಲ್ಲಿ ಮತ್ತು ವ್ಯಾಕ್ಯೂಮ್ ಕ್ಲೀನರ್ ನ ಪ್ಲೇಟ್ ಗಳಲ್ಲಿ ಪಾದರಸ ಲೇಪಿತ ಚಿನ್ನವನ್ನು ಸಾಗಾಟ ಮಾಡಲಾಗುತ್ತಿತ್ತು. 19,01,460 ರೂ ಮೌಲ್ಯದ 402 ಗ್ರಾಮ್ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ಎರಡು ದಿನಗಳ ಹಿಂದೆ ಸ್ಯಾನಿಟರಿ ನ್ಯಾಪ್ಕಿನ್ ಮತ್ತು ಪೌಚ್ ಗಳಲ್ಲಿ ಚಿನ್ನದ ಪುಡಿಯನ್ನು ಗಮ್ ನಲ್ಲಿ ಮಿಶ್ರಣ ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆ ಮಾಡಲಾಗಿತ್ತು.