Advertisement

ಭಿತ್ತಿಯಲ್ಲಿ ಚಿತ್ರಗಳದ್ದೇ ಕಾರುಬಾರು

02:25 AM Apr 20, 2019 | Sriram |

ಮನೆಯ ಗೋಡೆಗಳಿಗೆ ಯಾವುದೋ ಒಂದು ಬಣ್ಣ ಬಳಿದು ಬಿಟ್ಟರೆ ಸಾಕು ಮನೆ ಅಂದವಾಗಲು ಎಂಬ ಮಾತೊಂದಿತ್ತು . ಆದರೆ ಈಗ ಹಾಗಲ್ಲ. ಭಿತ್ತಿಗಳಿಗೆ ನಮ್ಮ ಇಷ್ಟದ ಬಣ್ಣವನ್ನು ಕಲಾತ್ಮಕ ರೀತಿಯಲ್ಲಿ ಬಳಿದರೂ ಸಾಕಾಗುವುದಿಲ್ಲ. ಖಾಲಿ ಖಾಲಿ ಕಾಣಿಸುತ್ತದೆಂಬುದು ಸಮಸ್ಯೆ. ಈ ತೊಂದರೆ ತಪ್ಪಿಸಿ ಮನೆಯನ್ನು ಇನ್ನಷ್ಟು ಹೆಚ್ಚು ಅಲಂಕರಿಸಲು ಸುಲಭ ವಿಧಾನವೆಂದರೆ ಗೋಡೆಯಲ್ಲಿ ಫೋಟೋಗಳನ್ನು ನೇತು ಹಾಕುವುದು. ಇದು ಲೇಟೆಸ್ಟ್‌ ಟ್ರೆಂಡ್‌ ಕೂಡ ಹೌದು.

Advertisement

ಕಲೆಯಲ್ಲಿ ಆಸಕ್ಕಿ ಇರುವ ಹೆಚ್ಚಿನವರಿಗೂ ಮನೆ ಅಲಂಕಾರಕ್ಕೆ ಇದು ಸಹಕಾರಿ ಅಥವಾ ನಿಮ್ಮದೇ ಒಂದಷ್ಟು ನೆನಪಿನ ಫೋಟೋಗಳು ವಾರ್ಡ್‌ ರೋಬ್‌ನಲ್ಲಿ ಸುಮ್ಮನೆ ಕುಳಿತಿದ್ದರೆ ಅದಕ್ಕೊಂದು ಆಕೃತಿ ಕೊಟ್ಟು ಮನೆಯನ್ನು ಅಲಂಕರಿಸಬಹುದು. ಆದರೆ ಕೆಲವೊಂದು ಭಾರಿ ಯಾವ ಫೋಟೋಗಳನ್ನು ಎಲ್ಲಿ ಹಾಕಬೇಕೆಂದು ತಿಳಿಯದೆ ಅಭಾಸವಾಗಿ ಬಿಡುವುದಿದೆ. ಅದಕ್ಕಾಗಿ ಇಲ್ಲಿವೆ ಕೆಲವು ಟಿಪ್ಸ್‌ಗಳುಯಾವ ಕೋಣೆಗೆ ಯಾವ ಫೋಟೋ ?

ನಿಮ್ಮಲ್ಲಿ ಒಂದಷ್ಟು ರಾಶಿ ಫೋಟೋಗಳಿದ್ದರೆ ಅದನ್ನು ಮನೆಯ ಗೋಡೆಗಳಲ್ಲಿ ಎಲ್ಲೆಂದರಲ್ಲಿ ಜೋಡಿಸಬೇಡಿ. ಇದರಿಂದ ಮನೆ ಅಂದವಾಗುವುದಕ್ಕಿಂತ ಕೆಡುವ ಸಂಭವವೇ ಜಾಸ್ತಿ. ಆದುದರಿಂದ ಮೊದಲು ಮನೆಯ ಯಾವ ಕೋಣೆಯ ಗೋಡೆಗೆ ಫೋಟೋ ಹಾಖಬೇಕು ಎಂಬುದನ್ನು ನಿರ್ಧರಿಸಬೇಕು.

ಹಾಲ್‌, ಆಫೀಸ್‌ ರೂಮ್‌ಗಳಲ್ಲಿ ನಿಮ್ಮ ವೈಯುಕ್ತಿಕ
ಫೋಟೋಗಳ ಹೆಚ್ಚು ಪ್ರದರ್ಶನ ಬೇಡ. ಒಂದೆರೆಡು ಅವಿಸ್ಮರಣೀಯ ನೆನಪುಗಳಿಗೆ ಫ್ರೆàಮ್‌ ಹಾಕಿ ಈ ಕೋಣೆಗಳಲ್ಲಿಡಿ. ಉಳಿದಂತೆ ನಿಮ್ಮ ಪ್ರವಾಸದ ಸಮಯದಲ್ಲಿ ಕ್ಲಿಕ್ಕಿಸಿದ ಪ್ರಕೃತಿ ರಮಣೀಯ ದೃಶ್ಯ ಹಾಗೂ ಕಲಾವಿದರ ಪೈಂಟಿಂಗ್ಸ್‌ಗಳನ್ನು ಹಾಲ್‌ ಮತ್ತು ಆಫೀಸ್‌ ರೂಮ್‌ನ ಗೋಡೆಗಳಲ್ಲಿ ಜೋಡಿಸಿ. ಗೆಸ್ಟ್‌ ರೂಂ ಹಾಗೂ ಬೆಡ್‌ರೂಮ್‌ಗಳಲ್ಲಿ ಕುಟುಂಬ ಭಾವಚಿತ್ರಗಳಿಗೆ ಆದ್ಯತೆ ನೀಡಿ. ಮಕ್ಕಳ ಕಾಟೂìನ್‌ ಅಥವಾ ಅವರ ಮೊದಲ ಚಿತ್ರಗಳನ್ನು ಫ್ರೆàಮ್‌ ಹಾಕಿಡಬಹುದು.

ಫೋಟೋ ಫ್ರೆàಮ್‌ನ
ಆಯ್ಕೆಯಲ್ಲಿ ಎಚ್ಚರವಿರಲಿ
ಫೋಟೋ ಆಕರ್ಷಕವಾಗಿ ಕಾಣಲು ಫ್ರೆàಮ್‌ ಕೂಡ ಒಂದು ಕಾರಣ. ಇಂದು ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸಗಳ, ವಿವಿಧ ಶೈಲಿಯ ಫೋಟೋ ಫ್ರೆàಮ್‌ಗಳು ಹಲವಾರು ಬಣ್ಣಗಳಲ್ಲಿ ಲಭ್ಯವಿದ್ದು, ಆಯ್ಕೆ ಮಾಡುವಾಗ ಎಚ್ಚರಿಕೆಯಿಂದಿರಬೇಕು.

Advertisement

ಫ್ರೆàಮ್‌ ಹಾಗೂ ನಿಮ್ಮ ಗೋಡೆಯ ಬಣ್ಣಗಳು ಪರಸ್ಪರ ಹೊಂದಿಕೆಯಾಗಿರಬೇಕು. ಗೋಡೆಯ ಬಣ್ಣದಲ್ಲಿ ಫೋಟೋ ಫ್ರೆàಮ್‌ ಗ ಳು ಎದ್ದು ಕಾಣಬೇಕೇ ಹೊರತು ಅದರಲ್ಲಿ ಕಳೆದು ಹೋಗಬಾರದು. ಸಿಂಪಲ್‌ ಗೋಡೆಗೆ ಸ್ವಲ್ಪ ಗ್ರ್ಯಾಂಡ್‌ ಫ್ರೆàಮ್‌ಗಳು ಹೆಚ್ಚು ಸೂಕ್ತ. ಅದೇ ರೀತಿ ಗೋಡೆಗೆ ಜೋಡಿಸುವಾಗಲೂ ಎಚ್ಚರಿಕೆ ವಹಿಸಿ. ಯಾವುದೇ ಕಾರಣಕ್ಕೂ ಗೋಡೆಯ ಬಣ್ಣ ಹಾನಿಯಾಗಬಾರದು,ಪ್ರತಿಯೊಂದು ಒಳ್ಳೆಯ ಘಟನೆಗಳಲ್ಲೂ ಫೋಟೋ ಕ್ಲಿಕ್ಕಿಸುವುದು ಆ ನೆನಪು ಮಾಸದಿರಲೆಂದು. ಅದೇ ನೆನಪುಗಳನ್ನು ನಮ್ಮ ಕನಸಿನ ಮನೆಗೆ ಅಲಂಕಾರವಾಗಿ ಬಳಸುವುದೆಂದರೆ ತುಂಬಾ ಆಸಕ್ತಿದಾಯಕ ವಿಷಯ. ಮನೆಯಲ್ಲಿ ಖುಷಿ ನೆನಪುಗಳೊಂದಿಗೆ ಬದುಕಲು ಒಂದಷ್ಟು ಫೋಟೋಗಳನ್ನು ಮನೆಯಲ್ಲಿ ಜೋಡಿಸಿ.

–  ಸುಶ್ಮಿತಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next